ಅಪ್ಪು ಹೆಸರಲ್ಲಿ ಪೊಲೀಸರಿಗೆ ಪ್ರತ್ಯೇಕ ಆಸ್ಪತ್ರೆ ಆರಂಭಿಸುವಂತೆ ಒತ್ತಾಯಿಸಿದ ಎಸ್​.ಎಸ್​ ವಿನಯ್​

ಬೆಂಗಳೂರು: ಸ್ಯಾಂಡಲ್​ವುಡ್​ ಸ್ಟಾರ್​ ಪುನೀತ್​ ರಾಜಕುಮಾರ್​ ಅವರ ಹೆಸರಿನಲ್ಲಿ ಕರ್ನಾಟಕದ ಪೋಲೀಸ್​ ಸಿಬ್ಬಂದಿಗಳಿಗೆ ಪ್ರತ್ಯೇಕ ಆಸ್ಪತ್ರೆ. ಮತ್ತು ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿ ದಕ್ಷಿಣ ಪದವಿಧರರ ವೇದಿಕೆ ಅಧ್ಯಕ್ಷ ಎಸ್.​ ಎಸ್.​ ವಿನಯ್​ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿದ ಅವರು ಪೊಲೀಸ್​ ಸಿಬ್ಬಂದಿಗಳಿಗೆ ಪ್ರತ್ಯೇಕ ಆಸ್ಪತ್ರೆ. ಜೊತೆಗೆ ಅವರ ಮಕ್ಕಳಿಗೆ ಒಂದೇ ಸೂರಿನಡಿ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪುನೀತ್​ ಅಗಲಿದ ಸಂದರ್ಭದಲ್ಲಿ ಪೊಲೀಸ್​ ಸಿಬ್ಬಂದಿಗಳು ಸಹ ದುಃಖದಿಂದಲೇ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಅತ್ಯುತ್ತಮವಾದ ಕಾರ್ಯ ನಿರ್ವಹಿಸಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಉತ್ತಮ ಗೌರವ ತಂದು ಕೊಟ್ಟಿದ್ದಾರೆ. ಪುನೀತ್​ ಸಹ ಹಲವಾರು ಚಿತ್ರಗಳಲ್ಲಿ ಪೊಲೀಸ್​ ಪಾತ್ರಗಳಲ್ಲಿ ಅಭಿನಯಿಸಿದ್ದು ಇಲಾಖೆಯ ಗೌರವವನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಸರ್ಕಾರ ಈ ಬಗ್ಗೆ ಹಗಮನ ಹರಿಸಿ ಬೇಡಿಕೆಗಳನ್ನು ಈಡೇರಿಸಬೇಕು . ಈ ಬೇಡಿಕೆಗಳು ಸರ್ಕಾರದ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ದಕ್ಷಿಣ ಪದವೀಧರರ ವೇದಿಕೆಯಿಂದ 16 ಸಾವಿರ ನೋಂದಣಿ ಮಾಡಿಸಿದ್ದೇವೆ; ಎನ್.ಎಸ್ ವಿನಯ್

News First Live Kannada

Leave a comment

Your email address will not be published. Required fields are marked *