ಬೆಂಗಳೂರು: ನಾನು ರಾಜಕಾರಿಣಿ ಆದ್ರೂ ಸಹ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿಯೂ ಇದ್ದೆ. ಪುನೀತ್ ಅವರ ನಿಧನ ಸುದ್ದಿ ನನ್ನಿಂದ ಸಹಿಕೊಳ್ಳಲು ಆಗಲಿಲ್ಲ. ಮನುಷ್ಯ ಹುಟ್ಟುವ ಸಂದರ್ಭದಲ್ಲಿ ಉಸಿರು ಇರುತ್ತದೆ, ಸಾಯೋವಾಗ ಉಸಿರು ಇರೋದಿಲ್ಲ. ಆದರೆ ಹೆಸರು ಇರುತ್ತದೆ.. ಇದಕ್ಕೆ ಪುನೀತ್ ಅವರೇ ಸಾಕ್ಷಿ..
ರಾಜ್ ಕುಟುಂಬದ ಸೇವೆ ಕೇವಲ ಸಿನಿಮಾ ರಂಗ, ಅಭಿಮಾನಿಗಳಿಗೆ ಮಾತ್ರ ಸಿಮೀತವಾಗಿಲ್ಲ. ಒಬ್ಬರಿಗೆ ಮಾದರಿ ಆಗೋ ರೀತಿಯಲ್ಲಿದ್ದಾರೆ.. ಒಬ್ಬ ವ್ಯಕ್ತಿ ನಮ್ಮಿಂದ ದೂರ ಆಗಿಲ್ಲ.. ಆದರೆ ಒಂದು ಶಕ್ತಿ ದೂರ ಆಯ್ತು ಭಾವಿಸುತ್ತೇನೆ.
ಮೊದಲು ರಾಜ್ಕುಮಾರ್ ಅವರಿಗೆ ಕರ್ನಾಟಕ ಪ್ರಶಸ್ತಿ ಕೊಟ್ಟಿದ್ದೇವು.. ಬಂಗಾರಪ್ಪ ಅವರ ಸರ್ಕಾರದಲ್ಲಿ ನಾನು ಇದ್ದೇ.. ಆದರೆ ಈಗ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡೋ ಸಂದರ್ಭದಲ್ಲಿ ಅವರು ಇಲ್ಲ. ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷ ಮನವಿ ಮಾಡುತ್ತಿದ್ದು, ಪುನೀತ್ ಅವರಿಗೆ ಪ್ರಶಸ್ತಿ ನೀಡುವುದರೊಂದಿಗೆ ಅವರ ಹೆಸರಿನಲ್ಲಿ ಒಂದು ಅಕಾಡೆಮಿಯನ್ನು ಆರಂಭ ಮಾಡಬೇಕು, ಹೊಸ ಕಲಾವಿದರನ್ನು ತಯಾರು ಮಾಡುವ ಸಂಸ್ಥೆ ತೆರೆಬೇಕು. ಇದಕ್ಕೆ ಸಾಕಷ್ಟು ಅವಕಾಶವಿದೆ. ಸರ್ಕಾರದ ಯಾವುದೋ ಕಾಲದಲ್ಲಿ ಕಂಠೀರವ ಸ್ಟುಡಿಯೋ ಆರಂಭ ಮಾಡಿದ್ದೇವು. ಈಗ ನಿಮಗೆ ಇಂತಹ ಒಂದು ಅವಕಾಶ ಸಿಕ್ಕಿದೆ. ಪುನೀತ್ ಅಭಿಮಾನಿಯಾಗಿ ನಾನು ಸಿಎಂ ಅವರಿಗೆ ಮನವಿ ಮಾಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಭಗವಂತ ಎಷ್ಟು ಕ್ರೂರಿ ಇದ್ದಾನೆ ಎಂದು ಹೇಳಲು ಪುನೀತ್ ಅವರನ್ನು ಕಳೆದುಕೊಂಡಿದ್ದೆ ಸಾಕ್ಷಿ.. ದೇವರ ಮೇಲೆಯೇ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಆರೋಗ್ಯವಾಗಿದ್ದ, ಯಾವುದೇ ಹವ್ಯಾಸ ಇಲ್ಲದ ವ್ಯಕ್ತಿಯನ್ನು ಭಗವಂತ ಕರೆದುಕೊಂಡ ಎಂದರೇ ನಮ್ಮ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳೆ ಸ್ಥಿತಿಯಲ್ಲಿದ್ದೇವೆ. ಆದರೆ ಈ ನೋವನ್ನು ತಡೆದುಕೊಳ್ಳುವ ಧೈರ್ಯ ದೇವರೇ ನೀಡಬೇಕು ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.