ಪುಟಾಣಿ ಮಕ್ಕಳ ತುಂಟಾಟ, ಕಿತಾಪತಿ ಎಲ್ಲವೂ ಮಜವಾಗಿರುತ್ತೆ.. ನೋಡಲು ತುಂಬಾ ಮುದ್ದು ಮುದ್ದಾಗಿರುತ್ತೆ.. ಅದರಂತೆ ಕಳೆದ ಎರಡು ದಿನಗಳಿಂದ ರಾಕಿಂಗ್ ಸ್ಟಾರ್​ ಯಶ್​ ಅವರ ಪುತ್ರ ಯಥರ್ವ್​ನ ಮೋಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ..?
ವೈರಲ್ ಆಗಿರುವ ವಿಡಿಯೋವನ್ನ ಯಶ್​ ಅವರ ನೂತನ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ರಾಧಿಕಾ ಪಂಡಿತ್ ತಂದೆ ಮೊಮ್ಮಕ್ಕಳಿಗೆ ಹಾಡನ್ನ ಹೇಳಿಕೊಡ್ತಾ ಇರ್ತಾರೆ. ಇದೇ ಸಂದರ್ಭದಲ್ಲಿ ಅಜ್ಜನ ಕೈಯಿಂದ ಮೈಕ್ ತೆಗೆದುಕೊಂಡ ಮೊಮ್ಮಗ, ತಾತನಂತೆ ಹಾಡಲು ಆರಂಭಿಸುತ್ತಾನೆ.

ಕೊನೆಗೆ ತನ್ನ ಕೈಯಲ್ಲಿದ್ದ ಮೈಕ್​ ಅನ್ನ ಎಸೆಯುತ್ತಾನೆ. ಅದು ನೇರವಾಗಿ ಆತನ ಅಕ್ಕನ ಮೇಲೆ ಬೀಳುತ್ತೆ. ತಲೆಯನ್ನ ಮೆಲ್ಲನೆ ಉಜ್ಜಿಕೊಂಡ ಐರಾ, ಮಮ್ಮಾ ಐ ಗಾಟ್ ಹರ್ಟ್​ ಎಂದು ಕ್ಯೂಟ್ ಆಗಿ ಹೇಳುತ್ತಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

The post ಅಪ್ಪ ರಾಕಿಂಗ್ ಸ್ಟಾರ್.. ಮಗ ರಾಕ್ ಸ್ಟಾರ್ appeared first on News First Kannada.

Source: newsfirstlive.com

Source link