ಶಿವಮೊಗ್ಗ: ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾದ ಬಳಿಕ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದ ಆರೋಪಿಗೆ ನ್ಯಾಯಾಲಯ ದಂಡ ವಿಧಿಸಿ, ಜೈಲು ಶಿಕ್ಷೆ ನೀಡಿದೆ.

ಪ್ರಕರಣದ ಬಗ್ಗೆ 4 ವರ್ಷಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ ಎಫ್‍ಟಿಎಸ್‍ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ದಯಾನಂದ ಅವರು ಆರೋಪಿ ಬೀರೇಶ್(30)ಗೆ 10 ಸಾವಿರ ರೂ.ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಶಿವಮೊಗ್ಗದ ಯಲವಟ್ಟಿ ತಾಂಡಾದ ಬೀರೇಶ್(30) 17 ವರ್ಷದ ಅಪ್ರಾಪ್ತೆಯೊಂದಿಗೆ ಪ್ರೀತಿ ನಾಟಕವಾಡಿದ್ದ. ನಂತರ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಬಾಲಕಿ ಗರ್ಭಿಣಿಯಾಗಲು ಕಾರಣನಾಗಿದ್ದ. ಬಾಲಕಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ 2017ರ ಜೂನ್ 28ರಂದು ಭದ್ರಾವತಿಯ ಚೌಡೇಶ್ವರಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದ.

ಅಪ್ರಾಪ್ತೆ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾದ ನಂತರ ಮದುವೆ ಆಗಿದ್ದಾನೆ ಎಂದು ಬಾಲಕಿ ಪೋಷಕರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಹಾಗೂ ಬಾಲ್ಯ ವಿವಾಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

The post ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವಗೆ 10 ವರ್ಷ ಜೈಲು ಶಿಕ್ಷೆ appeared first on Public TV.

Source: publictv.in

Source link