ಬೆಂಗಳೂರು: ಅಪ್ರಾಪ್ತ ಬಾಲಕಿಯ ಪ್ರೇಮದ ಪಾಶಕ್ಕೆ ಸಿಲುಕಿದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಯುವಕ ಅವಳಿಗಾಗಿ ಮನೆ ಬಿಟ್ಟು ಓಡಿ ಬಂದಿದ್ದು ಬಾಲಕಿಯನ್ನು ತಾನೇ ಖಾಸಗಿ ಪಿಜಿ ಒಂದರಲ್ಲಿ ಇರಿಸಿ ವಿದ್ಯಾಭ್ಯಾಸದ ಖರ್ಚು ವೆಚ್ಚುಗಳನ್ನು ಭರಿಸುತ್ತಿದ್ದನಂತೆ. ಆದರೆ ಬಾಲಕಿ ಇತ್ತೀಚಿಗೆ ಓದಿಗೆ ಗುಡ್ಬೈ ಹೇಳಿ ಕಾಲ್ ಸೆಂಟರ್ ನಲ್ಲಿ ಕೆಲಸ ಆರಂಭಿಸಿದ್ದರಂತೆ. ಕೆಲಸಕ್ಕೆ ಸೇರಿದ ಬಳಿಕ ಪ್ರಿಯಕರನನ್ನು ನಿರ್ಲಕ್ಷ್ಯ ಮಾಡಿದ ಆರೋಪ ಕೇಳಿ ಬಂದಿದ್ದು ಇದರಿಂದ ಬೇಸತ್ತ ಯುವಕ ಸಾವಿಗೆ ಶರಣಾಗಿದ್ದಾನೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.