ಬೆಂಗಳೂರು: ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತ ಬಾಲಕನನ್ನ ನೇಮಕ ಮಾಡಿರೋದನ್ನ ಪ್ರಶ್ನಿಸಿ ಹೈಕೋರ್ಟ್​​ಗೆ ಸಲ್ಲಿಕೆಯಾಗಿದ್ದ ಪಿಐಎಲ್​ ವಿಚಾರಣೆ ಇಂದು ನಡೆಯಿತು.

ಪೀಠಾಧಿಪತಿಯಾಗಿ 16 ವರ್ಷದ ಬಾಲಕನ ನೇಮಕವಾಗಿದೆ. ಈ ನೇಮಕ ಕಾನೂನುಬಾಹಿರವೆಂದು ಅರ್ಜಿದಾರರು ವಾದ ಮಂಡಿಸಿದ್ರು. ವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನ ಮುಂದಿನ ವಾರಕ್ಕೆ ಮುಂದೂಡಿದೆ. ಅನಿರುದ್ಧ ಸರಳತ್ತಾಯರನ್ನ ಸೋದೆ ವಾದಿರಾಜ ಮಠದಿಂದ ಪೀಠಾಧಿಪತಿ ನೇಮಕ ಮಾಡಲಾಗಿತ್ತು.. ಈ ಹಿನ್ನೆಲೆ ಅಪ್ರಾಪ್ತರ ನೇಮಕ ಮಾಡುವಂತಿಲ್ಲವೆಂದು ಪಿಐಎಲ್​ ಮೂಲಕ ನೇಮಕವನ್ನ ಪ್ರಶ್ನಿಸಲಾಗಿತ್ತು.

ಇದನ್ನೂ ಓದಿ: ಸನ್ಯಾಸ ದೀಕ್ಷೆ ಸ್ವೀಕರಿಸಿದ ಶಿರೂರು ಮಠದ ನೂತನ ಉತ್ತರಾಧಿಕಾರಿ ಅನಿರುದ್ಧ

The post ಅಪ್ರಾಪ್ತ ಬಾಲಕ ಪೀಠಾಧಿಪತಿಯಾಗಿ ನೇಮಕ ಪ್ರಶ್ನಿಸಿ PIL : ವಿಚಾರಣೆ ನಡೆಸಿದ ಹೈಕೋರ್ಟ್ appeared first on News First Kannada.

Source: newsfirstlive.com

Source link