ಚಿಕ್ಕಮಗಳೂರು: ಯುವತಿಯೊಬ್ಬಳು ತನಗಿಂತ ಚಿಕ್ಕ ವಯಸ್ಸಿನ ಯುವಕನನ್ನ ಮದುವೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

ಮೂಲತಃ ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಆಗ ಕಡೂರು ತಾಲೂಕಿನ ಗ್ರಾಮವೊಂದರ 17 ವರ್ಷದ ಯುವಕನ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಬೆಳೆದಿತ್ತು. ಫೇಸ್​​​ಬುಕ್ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ರು. ಹುಡುಗ ಕೂಡ ನನಗೆ 21 ವರ್ಷ ಎಂದು ಆಕೆಗೆ ಹೇಳಿಕೊಂಡಿದ್ದ ಎನ್ನಲಾಗಿದೆ.

ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಫೋಷಕರು ಹುಡುಗನ ಸಂಬಂಧಿಕರ ಜೊತೆ ಸೇರಿ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಮದುವೆ ಮಾಡಿಸಿದ್ದರು.

ಘಟನೆ ಬಗ್ಗೆ ಮಕ್ಕಳ ಸಹಾಯವಾಣಿಗೆ ಜೂನ್ 23 ರಂದು ದೂರು ಬಂದ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಪೊಲೀಸರೊಡನೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ವಿಷಯ ಗೊತ್ತಾಗಿದೆ. ಕೂಡಲೇ ಅಧಿಕಾರಿಗಳು ಯುವತಿಯನ್ನ ವಶಕ್ಕೆ ಪಡೆದಿದ್ದಾರೆ. ಆಕೆಯ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೊನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ. ಸದ್ಯ ಯುವತಿಯನ್ನ ಜಿಲ್ಲೆಯ ಸಾಧ್ವಾರ ಕೇಂದ್ರದಲ್ಲಿ ಬಿಡಲಾಗಿದೆ.

The post ಅಪ್ರಾಪ್ತ ಯುವಕನ ಮದ್ವೆಯಾದ 20ರ ಯುವತಿ -ಫೇಸ್​ಬುಕ್​​ನಲ್ಲಿ ಅರಳಿದ ಪ್ರೀತಿ ಕೊನೆಯಾಗಿದ್ದು ಹೀಗೆ.. appeared first on News First Kannada.

Source: newsfirstlive.com

Source link