ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಕಾಲ್ಕಿತ್ತಿದ್ದೇ ತಡ ತಾಲಿಬಾನಿಗಳ ರಕ್ಕಸೀ ಕೃತ್ಯ ಮುಗಿಲು ಮುಟ್ಟಿದೆ. ಎಲ್ಲೆಲ್ಲೂ ಹಿಂಸೆ, ಹತ್ಯೆ, ರಕ್ತ ಪಾತ ನಡೆಯುತ್ತಿದೆ. ಈ ಉಗ್ರರ ಅಟ್ಟಹಾಸಕ್ಕೆ ಈಗ ಭಾರತದ ಪತ್ರಕರ್ತನೂ ಬಲಿಯಾಗಿದ್ದು, ಕುಟುಂಬ ವರ್ಗಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

ರಾಯ್​ಟರ್ಸ್​ ಸುದ್ದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ, ಕಂದಹಾರ್​​ನ ಸ್ಪಿನ್​ ಬೊಲ್ಡಕ್ ಪ್ರದೇಶದಲ್ಲಿ ಇಂದು ಭುಗಿಲೆದ್ದ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅಫ್ಘಾನಿಸ್ತಾನದ ಮಾಧ್ಯಮ ಟೊಲೊ ನ್ಯೂಸ್​ ಸುದ್ದಿ ಪ್ರಕಟಿಸಿದೆ.

ಮುಂಬೈ ಮೂಲದ ಸಿದ್ದಿಕಿ ಕಳೆದ ಕೆಲ ದಿನಗಳಿಂದ ಕಂದಹಾರ್​ನಲ್ಲಿ ಕವರೇಜ್ ಮಾಡ್ತಿದ್ದರು. ನವದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಿಂದ ಎಕನಾಮಿಕ್ಸ್​ನಲ್ಲಿ ಡಿಗ್ರಿ ಪಡೆದಿದ್ದ ಸಿದ್ದಿಕಿ, 2007ರಲ್ಲಿ ಇದೇ ಇನ್​ಸ್ಟಿಟ್ಯೂಟ್​ನಿಂದ ಮಾಸ್ ಕಮ್ಯುನಿಕೇಶನ್ ಅಂಡ್ ಜರ್ನಲಿಸಂನಲ್ಲಿ ಡಿಗ್ರಿ ಪದವಿ ಪಡೆದುಕೊಂಡಿದ್ರು. ಕಳೆದ 11 ವರ್ಷಗಳಿಂದ ರಾಯ್​ಟರ್ಸ್​​  ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸ್ತಾ ಇದ್ರು.

The post ಅಫ್ಘಾನಿಸ್ತಾನದಲ್ಲಿ ಕರ್ತವ್ಯ ನಿರತ ಪತ್ರ ಕರ್ತನ ಹತ್ಯೆ; ತಾಲಿಬಾನಿಗಳ ರಕ್ಕಸ ಕೃತ್ಯ appeared first on News First Kannada.

Source: newsfirstlive.com

Source link