ನವದೆಹಲಿ: ತಾಲಿಬಾನಿಗಳ ಅಟ್ಟಹಾಸದಿಂದ ನಲುಗಿದ್ದ ಅಫ್ಘಾನಿಸ್ತಾನಕ್ಕೆ ಇದೀಗ ನಿಸರ್ಗವೂ ಶಾಕ್ ನೀಡಿದೆ.
ಅಫ್ಘಾನ್ನ ಪಶ್ಚಿಮ ಪ್ರಾಂತ್ಯದ ಬದ್ಸ್ಗೀಸ್ನಲ್ಲಿ ಭೂಕಂಪ ಸಂಭವಿಸಿದ್ದು 26 ಮಂದಿ ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದ ಹಿಂದೂ ಕುಷ್ ಪರ್ವತ ಶ್ರೇಣಿಯಲ್ಲಿ ಆಗಾಗ ಭೂಂಕಪಗಳು ಉಂಟಾಗುತ್ತವೆ ಆದ್ರೆ ಈ ಬಾರಿ 5.6 ರಷ್ಟು ತೀವ್ರತೆಯಲ್ಲಿ ಭೂಕಂಪ ಉಂಟಾಗಿದೆ ಎನ್ನಲಾಗಿದೆ.
ಭೂಕಂಪದ ತೀವ್ರತೆಗೆ ಹಲವು ಮನೆಗಳು ಜಖಂಗೊಂಡಿದ್ದು, 26 ಮಂದಿ ಅಸುನೀಗಿದ್ದಾರೆ.. ಇನ್ನು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾದ್ಯತೆಯಿದೆ ಎನ್ನಲಾಗ್ತಿದೆ.
The post ಅಫ್ಘಾನ್ಗೆ ನಿಸರ್ಗವೂ ಶಾಕ್.. ಪ್ರಕೃತಿ ಮುನಿಸಿಗೆ 26 ಮಂದಿ ಸಾವು appeared first on News First Kannada.