ಅಫ್ಘಾನ್ ವಿರುದ್ಧ ಭಾರತ ಗೆದ್ದಿದ್ಕೆ ಹೊಟ್ಟೆಕಿಚ್ಚು; ಮ್ಯಾಚ್​ ಫಿಕ್ಸಿಂಗ್​ ಅಂತ ಪಾಕಿಗಳಿಂದ ಟ್ರೆಂಡ್


ವಿಶ್ವಕಪ್ ಪಂದ್ಯದಲ್ಲಿ ಭಾರತ, ಅಫ್ಫಾನಿಸ್ತಾನದ ವಿರುದ್ಧ 66 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಈ ಗೆಲುವನ್ನ ಪಾಕಿಸ್ತಾನದ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ.

ಅಫ್ಘಾನಿಸ್ತಾನ್ ತಂಡದ ಕೆಲವು ಕಳಪೆ ಫೀಲ್ಡಿಂಗ್ ವಿಡಿಯೋ ತುಣುಕುಗಳನ್ನ ಶೇರ್ ಮಾಡಿ, ಅಪಪ್ರಚಾರ ಮಾಡುತ್ತಿದ್ದಾರೆ. ನಿನ್ನೆ ಟಾಸ್​ ಸೋತು ಬ್ಯಾಟಿಂಗ್​ ಇಳಿದಿದ್ದ ಟೀಂ ಇಂಡಿಯಾ ಹುಲಿಗಳು ತಮ್ಮ ಅಸಲಿ ಆಟವನ್ನ ಪ್ರದರ್ಶನ ಮಾಡಿದ್ದರು. ನಿಗದಿತ 20 ಓವರ್​​ನಲ್ಲಿ 2 ವಿಕೆಟ್ ಕಳೆದುಕೊಂಡು 210 ರನ್​​ಗಳನ್ನ ಗಳಿಸಿತ್ತು.

ಅಫ್ಘಾನ್ ವಿರುದ್ಧ ಭರ್ಜರಿ ಗೆಲುವು ಕಾಣುವ ಮೂಲಕ ಟೀಂ ಇಂಡಿಯಾ, ಸೆಮೀಸ್ ಆಸೆಯನ್ನ ಜೀವಂತ ಉಳಿಸಿಕೊಂಡಿದೆ. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಯಾಕಂದ್ರೆ ಒಂದು ವೇಳೆ ಭಾರತ ಸೆಮೀಸ್​ಗೆ ಲಗ್ಗೆ ಇಟ್ಟರೆ, ಪಾಕಿಸ್ತಾನಕ್ಕೆ ಸಹಜವಾಗಿಯೇ ಭಯ ಶುರುವಾಗುತ್ತದೆ. ಪಾಕಿಸ್ತಾನ ಫೈನಲ್ ಪ್ರವೇಶ ಮಾಡುವ ನಿರೀಕ್ಷಿತ ತಂಡಗಳಲ್ಲಿ ಒಂದಾಗಿದೆ. ಒಂದು ವೇಳೆ ಸೆಮೀಸ್​​ನಲ್ಲಿ ಭಾರತ ಗೆದ್ದರೆ, ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್​ ಎದುರಾದರೆ ಪಾಕಿಸ್ತಾನಕ್ಕೆ ಗೆಲುವು ಅಷ್ಟು ಸುಲಭದ ತುತ್ತಲ್ಲ ಅನ್ನೋದು ಪಾಕ್ ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ.

 

News First Live Kannada


Leave a Reply

Your email address will not be published. Required fields are marked *