ಅಬ್ಬಬ್ಬಾ ಅಭಿವೃದ್ಧಿ ಅಧಿಕಾರಿ ಲೀಲೆ ನೋಡಿ; ಎಲ್ಲೆಲ್ಲೂ ಚಿನ್ನಾನೆ ಇಟ್ಟು ಅದೆಷ್ಟು ಅಭಿವೃದ್ಧಿ ಮಾಡವ್ನೆ..!

ಬೆಳಗಾವಿ: ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಇಂದು ಬೆಳ್ಳಂಬೆಳಿಗ್ಗೆ ಭರ್ಜರಿ ಕಾರ್ಯಾಚರಣೆಗಿಳಿದಿದ್ದು ಬರೋಬ್ಬರಿ 15 ಸರ್ಕಾರಿ ನೌಕರರ ಮನೆಗಳ ಮೇಲೆ ದಾಳಿ ನಡೆಸಿದೆ.

ಜಿಲ್ಲೆಯ ಸಹಕಾರಿ ಇಲಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ಅಡವಿಸಿದ್ದೇಶ್ವರ ಮಾಸ್ತಿ ಎಂಬ ನೌಕರರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲದ ಮಾಸ್ತಿ ಮನೆಯಲ್ಲಿ ತಪಾಸಣೆ ನಡೆಸಿರುವ ಎಸಿಬಿ ಜಮೀನು ಪತ್ರ, ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಪತ್ತೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ನೇಹಿತನ ಮನೆಯಲ್ಲಿ ಹಣ ಇಟ್ಟಿದ್ದಾರೆಂಬ ಮಾಹಿತಿ ಹಿನ್ನೆಲೆ ನೌಕರನ ಸ್ನೇಹಿತನನಿಗೂ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಬೈಲಹೊಂಗಲ ಪಟ್ಟಣದ ಸ್ನೇಹಿತ ಸುರೇಶ್ ಸಣ್ಮನಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಕೆಲ ಕಡತಗಳು, ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ 7 ಕಡೆಗಳಲ್ಲಿ ACB ದಾಳಿ- FDA ಮಾಯಣ್ಣ ನಿವಾಸದಲ್ಲಿ ಅಪಾರ ಪ್ರಮಾಣ ಚಿನ್ನಾಭರಣ ಪತ್ತೆ

ಇದನ್ನೂ ಓದಿ:ದೊಡ್ಡಬಳ್ಳಾಪುರ RI ನಿವಾಸದ ಮೇಲೆ ACB ದಾಳಿ -ಅಪಾರ ಪ್ರಮಾಣ ಬೆಳ್ಳಿ, ಚಿನ್ನಾಭರಣ, ಆಸ್ತಿ ಪತ್ತೆ

News First Live Kannada

Leave a comment

Your email address will not be published. Required fields are marked *