ಅಬ್ಬಬ್ಬಾ ಇದೆಂಥಾ ಜಗಳ; ಕಿತ್ತಾಟದ ವೇಳೆ ರೂಪೇಶ್ ಶೆಟ್ಟಿ ಅಂಗಿಯನ್ನು ಹರಿದ ಪ್ರಶಾಂತ್ ಸಂಬರ್ಗಿ – Bigg Fight between Roopesh Shetty and Prashanth Sambargi In Bigg Boss House


ಬಿಗ್ ಬಾಸ್​ನಲ್ಲಿ ಗೊಂಬೆ ತಯಾರಿಸುವ ಟಾಸ್ಕ್ ನೀಡಲಾಗಿತ್ತು. ಗೊಂಬೆ ತಯಾರಿಸಲು ಕಚ್ಚಾ ವಸ್ತುಗಳು ಬರುತ್ತವೆ. ಅದನ್ನು ಪಡೆಯಲು ಮನೆ ಮಂದಿ ಮಧ್ಯೆ ಜಗಳ ಏರ್ಪಟ್ಟಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ನವೆಂಬರ್ 16ರ ಎಪಿಸೋಡ್​ನಲ್ಲಿ ದೊಡ್ಡ ಫೈಟ್ ನಡೆದಿದೆ. ಗೊಂಬೆ ತಯಾರಿಸುವ ಟಾಸ್ಕ್​ಗೆ ಇಡೀ ಮನೆ ರಣರಂಗವಾಗಿದೆ. ಪ್ರಶಾಂತ್ ಸಂಬರ್ಗಿ (Prashanth Sambargi) ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಭಾರೀ ಜಗಳ ನಡೆದಿದೆ. ರೂಪೇಶ್ ಶೆಟ್ಟಿ ಅವರ ಶರ್ಟ್​​ನ ಪ್ರಶಾಂತ್ ಸಂಬರ್ಗಿ ಕಿತ್ತೆಸೆದಿದ್ದಾರೆ. ಪ್ರಶಾಂತ್ ಸಂಬರ್ಗಿ ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ಶಾಕ್ ತಂದಿದೆ. ಈ ರೀತಿಯ ಟಾಸ್ಕ್​​ಗಳನ್ನು ನೀಡಬೇಡಿ ಎಂದು ಕೆಲವರು ಕೋರಿದ್ದಾರೆ.

ಬಿಗ್ ಬಾಸ್​ನಲ್ಲಿ ಗೊಂಬೆ ತಯಾರಿಸುವ ಟಾಸ್ಕ್ ನೀಡಲಾಗಿತ್ತು. ಗೊಂಬೆ ತಯಾರಿಸಲು ಕಚ್ಚಾ ವಸ್ತುಗಳು ಬರುತ್ತವೆ. ಅದನ್ನು ಪಡೆಯಲು ಮನೆ ಮಂದಿ ಮಧ್ಯೆ ಜಗಳ ಏರ್ಪಟ್ಟಿದೆ. ಪ್ರಶಾಂತ್ ಸಂಬರ್ಗಿ ಎಲ್ಲರಿಂದಲೂ ವಸ್ತುಗಳನ್ನು ಕಿತ್ತುಕೊಂಡರು ಎನ್ನುವ ಆರೋಪವನ್ನು ಮಾಡಿದರು. ಇದಕ್ಕೆ ಅರುಣ್ ಸಾಗರ್ ಸಿಟ್ಟಾದರು.

‘ಪ್ರಶಾಂತ್ ಸಂಬರ್ಗಿ ಅವರೇ ನೀವು ನಡೆದುಕೊಂಡ ರೀತಿ ಸರಿ ಇಲ್ಲ. ನಾನು ಈಗ ಸಂಬರ್ಗಿ ಆಡಿದ ರೀತಿಯೇ ಆಡುತ್ತೇನೆ’ ಎಂದು ಚಾಲೆಂಜ್ ಮಾಡಿದರು. ಅದೇ ರೀತಿ ನಡೆದುಕೊಂಡರು. ಅವರು ಕೂಡ ವೈಲೆಂಟ್ ಆಗಿ ಆಟ ಆಡಿದರು. ಇದನ್ನು ನೋಡಿ ಮನೆ ಮಂದಿಗೆ ಭಯ ಆಯಿತು.

ರೂಪೇಶ್ ಶೆಟ್ಟಿ ಅವರಿಂದ ಪ್ರಶಾಂತ್ ಸಂಬರ್ಗಿ ವಸ್ತುಗಳನ್ನು ಕದಿಯಲು ಪ್ರಯತ್ನಿಸಿದರು ಎಂಬ ಆರೋಪ ಕೇಳಿ ಬಂತು. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ಶೆಟ್ಟಿ ಜಗಳ ಮಾಡಿಕೊಂಡರು. ರೂಪೇಶ್ ಶೆಟ್ಟಿಯ ಅಂಗಿಯನ್ನು ಹಿಡಿದು ಪ್ರಶಾಂತ್ ಸಂಬರ್ಗಿ ಎಳೆದಾಡಿದರು. ರೂಪೇಶ್ ಶೆಟ್ಟಿಯ ಅಂಗಿ ಕಳಚಿತು.

TV9 Kannada


Leave a Reply

Your email address will not be published.