ಅಬ್ಬಬ್ಬಾ! ಎಷ್ಟು ಧೈರ್ಯ ಈ ಭೂಪನಿಗೆ.. ವಜ್ರಕ್ಕಾಗಿ ಸಿಂಹದ ಬಳಿ ಹೋದ ವ್ಯಕ್ತಿ; ಆಮೇಲೇನಾಯ್ತು?


ಹೈದರಾಬಾದ್​ನ ಝೂ ಒಂದರಲ್ಲಿರುವ ಹುಲಿಯಿದ್ದ ಬೇಲಿಯ ಒಳಗೆ ವ್ಯಕ್ತಿಯೊಬ್ಬ ನುಸಳಲು ಹೋದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿತ್ತು. ಸದ್ಯ ಆ ವ್ಯಕ್ತಿಯನ್ನ ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಆತ ಸಿಂಹವಿದ್ದ ಜಾಗಕ್ಕೆ ಯಾಕೆ ಹೋಗಿದ್ದ ಅಂತ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಆ ವ್ಯಕ್ತಿ ಸಿಂಹವಿದ್ದ ಜಾಗದಲ್ಲಿ ವಜ್ರವನ್ನ ಅಡಗಿಸಿಡಲಾಗಿದೆ. ಅದನ್ನು ತೆಗೆದುಕೊಳ್ಳಲು ನಾನು ಅಲ್ಲಿಗೆ ಹೋಗಿದ್ದ ಅಂತ ಉತ್ತರಿಸಿದ್ದಾನೆ. ಸದ್ಯ ಈ ಭೂಪನ ಉತ್ತರಕ್ಕೆ ಅಧಿಕಾರಿಗಳು ದಂಗಾಗಿದ್ದು, ಆತನನ್ನ ಪೊಲೀಸರಿಗೆ ಒಪ್ಪಿಸಲಾಗಿದೆ.
ವಿಚಾರಣೆ ಮಾಡುತ್ತಿದ್ದ ಪೊಲೀಸರ ಬಳಿ ಯುವಕನ ಪೋಷಕರು ಬಂದಿದ್ದು, ಆತ ಮಾನಸಿಕ ಅಸ್ವಸ್ಥ ಅಂತ ತಿಳಿಸಿದ್ದಾರೆ. ಸದ್ಯ ಪೋಲೀಸರು ಆತನನ್ನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

News First Live Kannada


Leave a Reply

Your email address will not be published. Required fields are marked *