ಅಬ್ಬಬ್ಬಾ! ಮಲ್ಪೆಯಲ್ಲಿ ಒಂದೇ ಮೀನು 1,80,000 ರೂ. ಗೆ ಮಾರಾಟ | Folf Fish Single Fish Sold to 180000 rs in udupi malpe

ಅಬ್ಬಬ್ಬಾ! ಮಲ್ಪೆಯಲ್ಲಿ ಒಂದೇ ಮೀನು 1,80,000 ರೂ. ಗೆ ಮಾರಾಟ

1,80,000 ರೂ. ಗೆ ಮಾರಾಟವಾದ ಗೋಳಿ ಮೀನು

ಉಡುಪಿ: ಮೀನು ಪ್ರಿಯರ ಬಾಯಲ್ಲಿ ನೀರು ತರಿಸುವ ಸುದ್ದಿ ಇದು. ಉಡುಪಿಯ ಮಲ್ಪೆಯಲ್ಲಿ ಸಿಕ್ಕ ಮೀನೊಂದರ ದರ ಕೇಳಿದರೆ ಶಾಕ್ ಆಗುವುದರಲ್ಲಿ ನೋ ಡೌಟ್. ಸಾಮಾನ್ಯವಾಗಿ ಒಂದು ಕೆಜಿ ಮೀನಿಗೆ ಹೆಚ್ಚೆಂದರೆ 1,500 ರೂ. ರಿಂದ 2,000 ರೂ ಇರುತ್ತೆ. ಆದರೆ ಮಲ್ಪೆಯಲ್ಲಿ ಸಿಕ್ಕ ಮೀನು ಪ್ರತಿ ಕೆಜಿಗೆ 9,060 ರೂ. ರಂತೆ ಮಾರಾಟವಾಗಿದೆ. 20 ಕೆಜಿಯ ಒಂದೇ ಮೀನು ಸುಮಾರು 1,80,000 ರೂಪಾಯಿಗೆ ಮಾರಾಟವಾಗಿದೆ. ಮಲ್ಪೆಯಿಂದ ಸೋಮವಾರ ಮೀನುಗಾರಿಕೆಗೆ ಹೋಗಿದ್ದಾಗ ಬಲರಾಮ್ ಹೆಸರಿನ ಬೋಟಿಗೆ ಈ ದುಬಾರಿ ಮೀನು ಬಿದ್ದಿದ್ದು, ಮೀನುಗಾರನಿಗೆ ಅದೃಷ್ಟ ಖುಲಾಯಿಸಿದೆ.

ಸುಮಾರು ಒಂದು ಲಕ್ಷ ಎಂಬತ್ತು ಸಾವಿರಕ್ಕೆ ಮಾರಾಟವಾದ ಮೀನಿನ ಹೆಸರು ಗೋಳಿ ಮೀನು ಅಂತ. ಕೆಲವೊಮ್ಮೆ ಮಾತ್ರ ಮೀನುಗಾರರಿಗೆ ಸಮುದ್ರದಲ್ಲಿ ಸಿಗುವ ಅಪರೂಪದ ಮೀನು ಇದು. ಈ ಮೀನು ಬಲೆಗೆ ಬಿದ್ದರೆ ದೊಡ್ಡ ಲಾಭ ತಂದುಕೊಡುತ್ತದೆ. ಶಾಮ್ ರಾಜ್ ತೊಟ್ಟಂರವರ ಬಲರಾಮ್ ಹೆಸರಿನ ಬೋಟಿಗೆ ಮೀನು ಸಿಕ್ಕಿದೆ.

ಸ್ಥಳೀಯ ಭಾಷೆಯಲ್ಲಿ ಗೋಳಿ ಮೀನು ಅಂತ ಕರೆಯುವ ಈ ಮೀನಿನ ಮತ್ತೊಂದು ಹೆಸರು ಫೋಲ್ ಫಿಶ್. ಈ ಮೀನು ಹೆಚ್ಚು ಬೆಲೆ ಬಾಳುವುದರಿಂದ ಸೀ ಗೋಲ್ಡ್ ಅಂತ ಕರೆಯುತ್ತಾರೆ. ಈ ಮೀನು ತಿನ್ನಲು ಬಹಳಷ್ಟು ರುಚಿಯಾಗಿರುತ್ತದೆ. ಅಲ್ಲದೇ ಸೌಂದರ್ಯವಧಕಕ್ಕೂ ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಬಲೆಗೆ ಬಿದ್ದ 30 ಕೆಜಿಯ ಕಾಂಡೈ ಮೀನು
ಇನ್ನು ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ 30 ಕೆಜಿ ತೂಕದ ಕಾಂಡೈ ಮೀನು ಮೀನುಗಾರರ ಬಲೆಗೆ ಬಿದ್ದಿದೆ. ನವೀನ್ ಸಾಲ್ಯಾನ್ ಎಂಬುವರ ದೋಣಿ ಗಾಳಕ್ಕೆ ಮೀನು ಬಿದ್ದಿದ್ದು, ಉದ್ದವಾಗಿ ಇರುವ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ನಡೆಸಲಾಗಿದೆ. ಒಂದು ಕೆಜಿಗೆ 170 ರಂತೆ ಮಾರಾಟವಾಗಿದೆ. ಸಾಮಾನ್ಯವಾಗಿ ಕಾಂಡೈ ಮೀನು ಸಣ್ಣ ಗಾತ್ರವಾಗಿದ್ದರೆ 220 ರೂ.ಗಳಿಗೆ ಮಾರಟವಾಗುತ್ತದೆ. ಆದ್ರೆ ದೊಡ್ಡ ಗಾತ್ರದ ಕಾಂಡೈ ಮೀನುಗಳಿಗೆ ಅಷ್ಟೊಂದು ಬೆಲೆ ಇಲ್ಲ ಅಂತಾ ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ‌ಸದ್ಯ ದೊಡ್ಡ ಗಾತ್ರದ ಕಾಂಡೈ ಮೀನು ಮಲ್ಪೆ ಬಂದರಿನಲ್ಲಿ ನೋಡುಗರ ಗಮನ ಸೆಳೆದಿದೆ.

ಕಾಂಡೈ ಮೀನು

ಇದನ್ನೂ ಓದಿ

ಅದರಿಂದಾದ ಆಘಾತ ಜೀವಮಾನವಿಡೀ ಇರುತ್ತದೆ; ಖಾಸಗಿ ಚಿತ್ರಗಳು ಲೀಕ್ ಆಗಿದ್ದ ಕುರಿತಂತೆ ನೋವು ಹೊರಹಾಕಿದ‌ ಆಸ್ಕರ್ ವಿಜೇತ ನಟಿ

ಸಿಎಂ ಬೊಮ್ಮಾಯಿ ಮತ್ತೊಮ್ಮೆ ಸಿಟಿ ರೌಂಡ್ಸ್; ಗುಂಡಿಮಯ ಹೆಣ್ಣೂರು ರಸ್ತೆಯಲ್ಲಿ ಹೋಗಲು ಸಿಎಂ ಹೈರಾಣ, ರಾಜಕಾಲುವೆ ಪರಿಶೀಲನೆ

TV9 Kannada

Leave a comment

Your email address will not be published. Required fields are marked *