ಅಬ್ಬಬ್ಬಾ! ರಜನಿ “ಅಣ್ಣಾಥೆ” & ಅಕ್ಷಯ್​​ ಕುಮಾರ್​ “ಸೂರ್ಯವಂಶಿ” ಬಾಕ್ಸಾಫೀಸ್​​​​ ಕಲೆಕ್ಷನ್​​ ಎಷ್ಟು ಗೊತ್ತಾ?


ಈ ಬಾರಿಯ ದೀಪಾವಳಿ ಹಬ್ಬಕ್ಕೆ ಕಾಲಿವುಡ್ ಮತ್ತು ಬಾಲಿವುಡ್​ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನದ ಅಂತರದಲ್ಲಿ ರಿಲೀಸ್​ ಆಗಿದ್ವು. ಸೂಪರ್​ ಸ್ಟಾರ್​ ರಜನಿಕಾಂತ್​ ನಟನೆಯ “ಅಣ್ಣಾಥೆ” ಸಿನಿಮಾ ನವೆಂಬರ್​ 4 ನೇ ತಾರೀಖು ರಿಲೀಸ್​ ಆಗಿದ್ರೆ, ಅಕ್ಷಯ್​ ಕುಮಾರ್​ ಅವರ ಸೂರ್ಯವಂಶಿ ಸಿನಿಮಾ ನವೆಂಬರ್​ 5 ನೇ ತಾರೀಖು ರಿಲೀಸ್​ ಆಗಿತ್ತು.

ಇನ್ನು ಎರಡು ಚಿತ್ರಗಳು ರಿಲೀಸ್​ ಆದ ಮೊದಲ ದಿನವೇ ಅದ್ಭುತ ಓಪನಿಂಗ್​ ಪಡೆದಿದ್ದು ಎರಡು ಚಿತ್ರಗಳ ಬಾಕ್ಸ್ ಆಫೀಸ್​ ಕಲೆಕ್ಷನ್​ ನೋಡುವುದಾದರೆ.. ಮೊದಲಿಗೆ ರಜನಿಕಾಂತ್​ ಅವರ “ಅಣ್ಣಾಥೆ” ಸಿನಿಮಾ ರಿಲೀಸ್​ ಆದ ಮೊದಲ ದಿನವೇ 70. 19 ಕೋಟಿ ರೂಪಾಯಿ ಭರ್ಜರಿ ಕಲೆಕ್ಷನ್​ ಮಾಡಿದ್ದು. ಎರಡನೇ ದಿನ 42.63 ಕೋಟಿ ರೂ., ಮೂರನೇ ದಿನ 33.71 ಕೋಟಿ ರೂ., ನಾಲ್ಕನೇ ದಿನ 28.20 ಕೋಟಿ ರೂ. ಕಲೆಕ್ಷನ್​ ಮಾಡಿದ್ರೆ, ಐದನೇ ದಿನ 11.85 ಕೋಟಿ ರೂ. ಮಾಡಿದೆ. ಈ ಮೂಲಕ ಅಣ್ಣಾಥೆ ಸಿನಿಮಾ ಇಲ್ಲಿಯವರೆಗೆ ಒಟ್ಟು 186.58 ಕೋಟಿ ರೂಪಾಯಿ ಬಾಕ್ಸ್ ಆಫೀಸ್​ ಕಲೆಕ್ಷನ್​ ಗಳಿಸಿ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ.

ಇನ್ನು ಅಕ್ಷಯ್​ ಕುಮಾರ್​ ಅವರ ಸೂರ್ಯವಂಶಿ ಚಿತ್ರದ ಕಲೆಕ್ಷನ್​ ವಿಚಾಕ್ಕೆ ಬರುವುದಾದರೆ ಚಿತ್ರ ರಿಲೀಸ್​ ಆದ ಮೊದಲ ದಿನ 26.38 ಕೋಟಿ ರೂ. ಬಾಕ್ಸ್ ಆಫೀಸ್​ ಕಲೆಕ್ಷನ್​ ಮಾಡಿದ್ರೆ, ಎರಡನೇ ದಿನ 24.53 ಕೋಟಿ ರೂ, ಮೂರನೇ ದಿನ 27.16 ಕೋಟಿ ರೂ., ನಾಲ್ಕನೇ ದಿನ 13.62 ಕೋಟಿ ರೂ. ಕಲೆಕ್ಷನ್​ ಮಾಡಿದ್ದು ಇಲ್ಲಿಯವರಿಗೆ ಒಟ್ಟು 91.69 ಕೋಟಿ ರೂಪಾಯಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿ ನೂರು ಕೋಟಿ ಕ್ಲಬ್​ ಸೇರುವತ್ತ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಒಟ್ಟಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಸೋಲಿನ ರುಚಿ ಕಂಡಿದ್ದ ರಜನಿಕಾಂತ್​ ಮತ್ತು ಆಕ್ಷಯ್​ ಕುಮಾರ್​ ಇಬ್ಬರಿಗೂ ಈ ಬಾರಿಯ ದೀಪಾವಳಿ ಹಬ್ಬಕ್ಕೆ ರಿಲೀಸ್​ ಆಗಿರುವ ತಮ್ಮ ಚಿತ್ರದಿಂದ ಮತ್ತೆ ಗೆಲುವಿನ ರುಚಿ ಸಿಕ್ಕಂತಾಗಿದೆ.

News First Live Kannada


Leave a Reply

Your email address will not be published. Required fields are marked *