ಅಬ್ಬಬ್ಬಾ! ಲೈಗರ್​​ ಸಿನಿಮಾಗೆ ವಿಜಯ್​​ ದೇವರಕೊಂಡ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?


ಟಾಲಿವುಡ್​ ನಟ ವಿಜಯ್​ ದೇವರಕೊಂಡ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಪುಷ್ಪ ಸಿನಿಮಾದ ಸಕ್ಸಸ್​ ಬಳಿಕ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ವಿಜಯ್​ ದೇವರಕೊಂಡ ಕೂಡ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯ್​ ದೇವರಕೊಂಡ ಅಭಿನಯದ ಮುಂದಿನ ‘ಲೈಗರ್’​ ಚಿತ್ರದಲ್ಲಿ ನಟಿಸೋಕೆ ಬರೋಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಇನ್ನು, ‘ಲೈಗರ್​’ ಚಿತ್ರದಲ್ಲಿ ವಿಜಯ್​ ಕಿಕ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶ್ವದ ಖ್ಯಾತ ಬಾಕ್ಸಿಂಗ್​ ಚಾಂಪಿಯನ್ ಮೈಕ್ ಟೈಸನ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರಕ್ಕೆ, ಕರಣ್‌ ಜೋಹರ್‌ ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಪುರಿ ಕನೆಕ್ಟ್ಸ್​​​​ ಹಾಗೂ ನಟಿ ಚಾರ್ಮಿ ಜಂಟಿಯಾಗಿ ಹಣ ಹೂಡಿದ್ದಾರೆ. ನಟಿ ಅನನ್ಯಾ ಪಾಂಡೆ, ರಮ್ಯಾ ಕೃಷ್ಣನ್, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *