ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಿದೆ. ತಂಡದಲ್ಲಿ ಉಳಿಯಲು ರಶೀದ್ ಖಾನ್ ದೊಡ್ಡ ಷರತ್ತೊಂದನ್ನು ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ. ಸನ್ರೈಸರ್ಸ್ ತಂಡದಲ್ಲಿ ಆಟ ಮುಂದುವರಿಸಬೇಕಾದರೆ, ತಮ್ಮನ್ನು ನಂಬರ್ 1 ಆಟಗಾರನನ್ನಾಗಿ ತೆಗೆದುಕೊಳ್ಳಬೇಕು ಎಂದು ಸ್ಪಿನ್ನರ್ ರಶೀದ್ ಹೇಳಿದ್ದಾರೆ.
ನ್ಯೂಜಿಲೆಂಡ್ ತಾರೆ ಕೇನ್ ವಿಲಿಯಮ್ಸನ್ರನ್ನ ಮೊದಲ ಆಯ್ಕೆಯ ಆಟಗಾರನನ್ನಾಗಿ ಉಳಿಸಿಕೊಳ್ಳುವುದು ಸನ್ರೈಸರ್ಸ್ ತಂಡದ ಆದ್ಯತೆ. ಹೀಗಿರುವಾಗ 2ನೇ ಆಟಗಾರನಾಗಿ ಸನ್ರೈಸರ್ಸ್ ತಂಡದಲ್ಲಿ ರಶೀದ್ ಉಳಿಯುವುದು ಸಾಧ್ಯವಿಲ್ಲ ಎಂಬಂತ್ತಾಗಿದೆ.
ಒಂದು ವೇಳೆ ಹರಾಜಿಗೆ ರಶೀದ್ ಬಂದಿದ್ದೇ ಆದರೆ ದಾಖಲೆಯ ಬೆಲೆ ಪಡೆಯುವುದು ನಿಶ್ಚಿತ. ಹೀಗಾಗಿ ರಶೀದ್ ಖಾನ್ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಮೊದಲು ನಂಬರ್ 1 ಆಟಗಾರನನ್ನಾಗಿ ಆಯ್ಕೆ ಮಾಡಿ 16 ಕೋಟಿ ನೀಡಿ, ಇಲ್ಲಂದ್ರೆ ನನ್ನನ್ನು ಬಿಟ್ಟುಬಿಡಿ ಎಂದಿದ್ದಾರೆ ರಶೀದ್.
The post ಅಬ್ಬಬ್ಬಾ! SRH ತಂಡದಲ್ಲಿ ಉಳಿಯೋಕೆ ಇಷ್ಟು ದುಡ್ಡು ಕೇಳಿದ್ರಾ ರಶೀದ್ ಖಾನ್? appeared first on News First Kannada.