ಅಬ್ಬಾ ಇದೆಂಥಾ ಬಿಸಿಲು !- ಬೇಸಿಗೆಯಲ್ಲಿ ಈ ಐದು ಅಂಶಗಳು ನಿಮ್ಮ ಗಮನದಲ್ಲಿರಲಿ, ಎಚ್ಚರಿಕೆಯಿರಲಿ | Here Are the Top 5 Tips To Fight The Heatwave


ಅಬ್ಬಾ ಇದೆಂಥಾ ಬಿಸಿಲು !- ಬೇಸಿಗೆಯಲ್ಲಿ ಈ ಐದು ಅಂಶಗಳು ನಿಮ್ಮ ಗಮನದಲ್ಲಿರಲಿ, ಎಚ್ಚರಿಕೆಯಿರಲಿ

ಸಾಂಕೇತಿಕ ಚಿತ್ರ

ಈಗ ಏಪ್ರಿಲ್ ತಿಂಗಳ ಅಂತ್ಯ. ಬಿರುಬೇಸಿಗೆ..ಅದರಲ್ಲೂ ಈ ಬಾರಿ ಜಾಸ್ತಿ ಎನ್ನಿಸುವಷ್ಟು ಉಷ್ಣತೆ ಉಂಟಾಗಿದೆ. ಸೆಖೆ, ಮೈಯುರಿಯ ಜತೆಗೆ ಒಂದಷ್ಟು ಅನಾರೋಗ್ಯಗಳೂ ಉಂಟಾಗುತ್ತಿವೆ. ಪ್ರತಿದಿನ ಈ ಬಿಸಿಲಿನ ಬೇಗೆಯಿಂದ ಪಾರಾಗುವುದೇ ಒಂದು ಸವಾಲಾಗಿಬಿಟ್ಟಿದೆ. ಈಗಾಗಲೇ ಅತ್ಯಂತ ಅಪಾಯದ ಮಟ್ಟ ತಲುಪಿರುವ ಉಷ್ಣತೆ ಇನ್ನೆಷ್ಟರ ಮಟ್ಟಿಗೆ ಏರಿಕೆಯಾಗಬಹುದು ಎಂಬ ಆತಂಕವೂ ಶುರುವಾಗಿದೆ. ಅದರೊಂದಿಗೆ ಬಿಸಿಲಿನ ತಾಪಮಾನದಿಂದ ಪಾರಾಗಲು ಜನರು ಪರದಾಡುತ್ತಿದ್ದಾರೆ. ಡಿಹೈಡ್ರೇಶನ್​,  ತಲೆಸುತ್ತು, ವಾಂತಿ, ತಲೆ ನೋವು, ಸನ್​ಬರ್ನ್​, ಹೀಟ್​ ಸ್ಟ್ರೋಕ್​​ಗಳಂಥ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗೆ ಬೇಸಿಗೆಯಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಪಾರಾಗಲು ನಾವಿಲ್ಲಿ ಕೆಲವು ಟಿಪ್ಸ್​ ಕೊಟ್ಟಿದ್ದೇವೆ ನೋಡಿ.

1. ಹೈಡ್ರೇಶನ್​
ಬೇಸಿಗೆಯಲ್ಲಿ ಹೆಚ್ಚಿಗೆ ನೀರು ಮತ್ತಿತರ ಆರೋಗ್ಯಕರ ಪಾನೀಯಗಳನ್ನು ಹೆಚ್ಚಾಗಿ ಕುಡಿಯಬೇಕು. ಈ ಮೂಲಕ ನಮ್ಮ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಬೇಕು. ಡಿ ಹೈಡ್ರೇಶನ್​ ಎಂಬುವುದು ಬೇಸಿಗೆಯ ಸಮಯದಲ್ಲಿ ಉಂಟಾಗುವ ಒಂದು ಸಾಮಾನ್ಯ ಸಮಸ್ಯೆ. ಆದರೆ ಅದು ಗಂಭೀರವೂ ಹೌದು. ಸಾಧ್ಯವಾದಷ್ಟು ಟೀ, ಕಾಫಿಗಳನ್ನೆಲ್ಲ ಕಡಿಮೆ ಮಾಡಿ, ನೀರು, ಎಳೆನೀರು, ಲಸ್ಸಿ, ಲಿಂಬು ಪಾನೀಯ, ಕಲ್ಲಗಂಡಿ ಜ್ಯೂಸ್​, ಮತ್ತಿತರ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿ.

2. ಆಹಾರ ಕ್ರಮದಲ್ಲಿ ಬದಲಾವಣೆ ಬೇಕು
ಆಹಾರಗಳನ್ನು ಬೇಸಿಗೆಯಲ್ಲಿ ಆದಷ್ಟು ತಾಜಾ ಇರುವಾಗಲೇ ಸೇವಿಸಬೇಕು. ಇಂದು ಏನೋ ಹೆಚ್ಚಾಯಿತು ಎಂದು ಅದನ್ನು ಹಾಗೇ ಇಟ್ಟು ನಾಳೆ ತಿನ್ನುವ ಅಭ್ಯಾಸ ಬೇಡ. ಸಾಮಾನ್ಯವಾಗಿ ಬೇಸಿಗೆಯಲ್ಲಿ ರೆಫ್ರಿಜರೇಟರ್​​ನಲ್ಲಿ ಇಟ್ಟ, ಪಾನೀಯ, ತಿಂಡಿಗಳನ್ನೇ ತಿನ್ನಬೇಕು ಎನ್ನಿಸುತ್ತದೆ. ಆದರೆ ಹಾಗೆ ಮಾಡಬೇಡಿ. ಆ ಹೊತ್ತಿಗೆ ಎಷ್ಟು ಬೇಕೋ ಅಷ್ಟು ಆಹಾರ ತಯಾರಿಸಿಕೊಂಡು, ಅದು ತಾಜಾ ಇರುವಾಗಲೇ ತಿಂದುಬಿಡಿ. ಬೇಸಿಗೆಯಲ್ಲಿ ಸಹಜವಾಗಿಯೇ ನಮ್ಮ ಜೀರ್ಣಕ್ರಿಯೆ ಸಾಮರ್ಥ್ಯ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿರುವುದರಿಂದ ಲಘು ಆಹಾರಗಳೇ ಬೆಸ್ಟ್​. ಅದರಲ್ಲೂ ಎಣ್ಣೆಯುಕ್ತ, ಕರಿದ ತಿಂಡಿಗಳು ಬೇಡ್ವೇ ಬೇಡ. ನೀರಿನ ಅಂಶ ಇರುವ  ಹಣ್ಣುಗಳ ಬಳಕೆ ಹೆಚ್ಚಿಸಿ.

3. ಮಕ್ಕಳ ಬಗ್ಗೆಯೂ ಕಾಳಜಿ ಇರಲಿ
ಬೇಸಿಗೆಯಲ್ಲಿ ಮಕ್ಕಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ಮಕ್ಕಳು ನೀರು ಕುಡಿಯುವುದಿಲ್ಲ. ಆದರೆ ಬೇಸಿಗೆಯಲ್ಲಿ ಅವರ ದೇಹವನ್ನು ಹೈಡ್ರೇಟ್​ ಆಗಿ ಇರುವಂತೆ ಕಾಳಜಿವಹಿಸಿಬೇಕು. ಅವರನ್ನು ಮನೆಯಿಂದ ಆಚೆಗೆ ಕಳಿಸಬೇಡಿ. ಇದರೊಂದಿಗೆ ನಿಮ್ಮ ಮನೆಯಲ್ಲಿರುವ ಸಾಕು, ಮೂಕ ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸಿ.

4. ಸನ್​ಸ್ಕ್ರೀನ್​​ನಿಂದ ಚರ್ಮ ರಕ್ಷಣೆ 
ಇದನ್ನು ಮರೆಯಲೇಬೇಡಿ. ಬೇಸಿಗೆಯಲ್ಲಿ ಚರ್ಮದ ರಕ್ಷಣೆಯೂ ಅತ್ಯಂತ ಮುಖ್ಯ. ಹಾಗಾಗಿ ಮನೆಯಿಂದ ಹೊರಹೋಗುವಾಗ, ಅಂದರೆ ನಿಮ್ಮನ್ನು ನೀವು ಬಿಸಿಲಿಗೆ ಒಡ್ಡಿಕೊಳ್ಳುವಾಗ ಕಡ್ಡಾಯವಾಗಿ ಮುಖಕ್ಕೆ, ಕೈಯಿಗೆಲ್ಲ ಸನ್​ಸ್ಕ್ರೀನ್​ ಹಚ್ಚಿಕೊಳ್ಳಿ. ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ, ನೀವು ಜೆಲ್​ ರೂಪದ ಸನ್​​ಸ್ಕ್ರೀನ್​ ಹಚ್ಚಬೇಕು.

TV9 Kannada


Leave a Reply

Your email address will not be published. Required fields are marked *