ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ‘ವಿಕ್ರಾಂತ್​ ರೋಣ’ ರಿಲೀಸ್​ ಡೇಟ್​ ಅನೌನ್ಸ್​..


ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ‘ವಿಕ್ರಾಂತ್​ ರೋಣ ’ಸಿನಿಮಾ ರಿಲೀಸ್​ ಡೇಟ್​ ಅನೌನ್ಸ್​ ಆಗಿದೆ. 2022ರ ಫೆಬ್ರವರಿ 24 ನೇ ತಾರೀಖು ಚಿತ್ರ ರಿಲೀಸ್​ ಆಗಲಿದೆ ಎಂದು ಸುದೀಪ್​ ತಮ್ಮ ಟ್ವೀಟರ್​ ಖಾತೆಯಲ್ಲಿ ತಿಳಿಸಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದ ಜಾಕ್ ಮಂಜು ನಿರ್ಮಾಣದ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ವಿಕ್ರಾಂತ್ ರೋಣ.. 3D ಟೆಕ್ನಾಲಜಿಯಲ್ಲಿ ಸಿನಿಮಾ ಮೂಡಿಬರುತ್ತಿದ್ದು ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್​ಲ್ವೀನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ , ಮೇಕಿಂಗ್ , ಟೀಸರ್ ಇತ್ಯಾದಿಗಳಿಂದ ಗಗನ ಮಟ್ಟದಲ್ಲಿ ನಿರೀಕ್ಷೆಯನ್ನ ಸೃಷ್ಟಿಸಿರುವ ವಿಕ್ರಾಂತ್ ರೋಣ ಅಂದುಕೊಂಡಂತೆ ಆಗಿದ್ದರೆ ಇಗಾಗಲೇ ಚಿತ್ರಮಂದಿರದಲ್ಲಿ ಘರ್ಜನೆ ಶುರುವಾಗಬೇಕಿತ್ತು. ಆದ್ರೆ ಕೊರೊನಾ, ಲಾಕ್​ಡೌನ್​ನಂತಹ ಸಮಸ್ಯೆಗಳಿಂದ ರೋಣನ ಆರ್ಭಟಕ್ಕೆ ತಡೆ ಆಗಿತ್ತು. ಸದ್ಯ ಬರುವ ವರ್ಷದಲ್ಲಿ ಸುದೀಪ್​ ಮತ್ತೇ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಅಭಿಮಾನಿಗಳನ್ನು ರಂಜಿಸಲು ತಯಾರಿ ನಡೆಸಿದ್ದಾರೆ. ಸದ್ಯ ರಿಲೀಸ್​ ಡೇಟ್​ ಅನೌನ್ಸ್ ಮಾಡಿ ಅಭಿಮಾನಿಗಳ ಕಾತುರತೆಯನ್ನ ಮತ್ತಷ್ಟು ಇಮ್ಮಡಿಗೊಳಿಸಿದ್ದಾರೆ.

 

News First Live Kannada


Leave a Reply

Your email address will not be published. Required fields are marked *