ಅಭಿಮಾನಿಗಳನ್ನ ಗೊಂದಲಕ್ಕೆ ಸಿಲುಕಿಸಿದ ಗೇಲ್​.. ಕೊನೆಗೆ ವಿಷ್ಯನೇ ಬೇರೆಯಾಗಿತ್ತು..!


ಐಸಿಸಿ ಟಿ20 ವಿಶ್ವಕಪ್​ನಲ್ಲಿ​ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ ತಂಡದ ಆಟಗಾರ ಕ್ರಿಸ್ ಗೇಲ್ ಟಿ-20 ಕ್ರಿಕೆಟ್​ಗೆ ವಿದಾಯ ಹೇಳಿದ್ರಾ ಅನ್ನೋ ಚರ್ಚೆ ಜೋರಾಗಿದೆ.

ಪಂದ್ಯದ ವೇಳೆ ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುತ್ತಿದ್ದಾಗ ಗೇಲ್ ಪ್ರೇಕ್ಷಕರತ್ತ ಬ್ಯಾಟ್ ಬೀಸುತ್ತಾ ಹೆಜ್ಜೆ ಹಾಕಿದರು. ಇದಕ್ಕೆ ಪ್ರೇಕ್ಷಕರು ಕೂಡ ಎದ್ದು ನಿಂತು ಗೌರವ ಸೂಚಿಸಿದರು. ಆ ಬಳಿಕ ಡ್ವೇನ್ ಬ್ರಾವೋ ಸೇರಿದಂತೆ ಸಹ ಆಟಗಾರರು ಕೂಡ ಗೇಲ್​ ಅವರನ್ನು ಆಲಿಂಗನದ ಮೂಲಕ ಬರ ಮಾಡಿಕೊಂಡರು.

ಇದನ್ನೆಲ್ಲ ನೋಡಿದ ಕ್ರಿಕೆಟ್​ ಜಗತ್ತು ಕ್ರಿಸ್​ಗೇಲ್​ ಟಿ20ಗೆ ವಿದಾಯ ಹೇಳಿದ್ರಾ ಅಂತ ಮಾತಾಡೋಕೆ ಶುರು ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಸ್ಪಷ್ಟಪಡಿಸಿರುವ ಗೇಲ್​.. ನಾನು ವರ್ಲ್ಡ್​ ಕಪ್​ ಗೇಮ್​​ನಲ್ಲಿ ಸಾಕಷ್ಟು ಎಂಜಾಯ್ ಮಾಡಲು ಪ್ರಯತ್ನಿಸಿದೆ. ಆದರೆ ನನಗೆ ಈ World Cup ಜರ್ನಿ ತುಂಬಾ ಬೇಸರವುಂಟು ಮಾಡಿದೆ. ನನಗೆ ವೈಯಕ್ತಿಕವಾಗಿ ನೋವಾಗಿದೆ. ನನ್ನ ಪ್ರಕಾರ ನನಗೆ ಇದು ಲಾಸ್ಟ್​ ವರ್ಲ್ಡ್​ಕಪ್ ಇರಬಹುದು. ಎಲ್ಲವೂ ಸಂಭಿಸಿಬಿಡುತ್ತವೆ. ಆದರೂ ನನಗೆ ಗೊತ್ತು.. ನನ್ನ ವೃತ್ತಿ ಜೀವನದಲ್ಲಿ ಹೀಗೆ ಆಗಿರೋದು ಬೇಸರದ ಸಂಗತಿ. ನಾನು ಹೇಳುವುದೇನೆಂದರೆ, ವೆಸ್ಟ್​ ಇಂಡೀಸ್​ ತಂಡದಿಂದ ಇನ್ಮುಂದೆ ಅನೇಕ ಪ್ರತಿಭೆಗಳು ಹೊರ ಬರುತ್ತವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

The post ಅಭಿಮಾನಿಗಳನ್ನ ಗೊಂದಲಕ್ಕೆ ಸಿಲುಕಿಸಿದ ಗೇಲ್​.. ಕೊನೆಗೆ ವಿಷ್ಯನೇ ಬೇರೆಯಾಗಿತ್ತು..! appeared first on News First Kannada.

News First Live Kannada


Leave a Reply

Your email address will not be published. Required fields are marked *