ಅಭಿಮಾನಿಗಳಿಗೆ ದಸರಾ ಹಬ್ಬದ ಕಳೆ ಹೆಚ್ಚಿಸಿದ ‘ಮುಗಿಲ್ ಪೇಟೆ’ ಜೋಡಿ..!

ರೊಮ್ಯಾಂಟಿಕ್ ಸಾಂಗ್​​​ಗಳಿಗೆ ಸ್ಯಾಂಡಲ್​​ವುಡ್​​ನಲ್ಲಿ ಬ್ರ್ಯಾಂಡ್ ಆಂಡ್ ಗ್ರ್ಯಾಂಡ್ ಅಂಬಾಸಿಡರ್ ಕನಸುಗಾರ ಡಾ.ವಿ.ರವಿಚಂದ್ರನ್.. ಇನ್ನು ಅವರ ಮಕ್ಕಳಿಗೆ ರೊಮ್ಯಾಂಟಿಕ್ ಲುಕ್ ಬಗ್ಗೆ ಹೇಳಿಕೊಡಬೇಕಾ? ರೊಮ್ಯಾಂಟಿಕ್ ಲುಕಿಂಗ್ ಬ್ರ್ಯಾಂಡ್ ಹೀರೋಸ್ ಆಗೋ ಲಕ್ಷಣ ರವಿಮಾಮನ ಪುತ್ರರಲ್ಲಿದೆ.. ರವಿಚಂದ್ರನ್ ಅವರ ಫಸ್ಟ್ ಸನ್ನು ‘ಮುಗಿಲ್ ಪೇಟೆ’ಯಲ್ಲಿ ನಿಂತು ರೊಮ್ಯಾಂಟಿಕ್ ಗಾನ ಬಜಾನವನ್ನ ಮೊಳಗಿಸಿದ್ದಾರೆ.

ಕ್ರೇಜಿಸ್ಟಾರ್ ಡಾ.ವಿ.ರವಿಚಂದ್ರನ್ ಅವರ ಮೊದಲನೇ ಪುತ್ರ ಮನೋರಂಜನ್ ‘ಮುಗಿಲ್ ಪೇಟೆ’ಯಲ್ಲಿ ರಂಜನೆಯ ರಸದೌತಣವನ್ನ ನೀಡಲು ಸಜ್ಜಾಗಿದ್ದಾರೆ.. ಮೊದ್ಲೇನೆ ಲಾಕ್ ಡೌನ್ ಮುಂಚೆಯ ‘ಮುಗಿಲ್ ಪೇಟೆ’ಯ ಶೂಟಿಂಗ್ ಕಂಪ್ಲೀಟ್ ಮಾಡಿದ್ದ ಚಿತ್ರತಂಡ ಇನ್ನೇನು ಸಿನಿಮಾ ಮಂದಿರಗಳ ಅಂಗಳಕ್ಕೆ ಬಂದು ಬಿಡಬೇಕು ಅನ್ನೋಷ್ಟರಲ್ಲಿ ಎರಡನೇ ಲಾಕ್ ಡೌನ್ ಆಗಿ ಹೋಯ್ತು.. ಈಗ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಬೇಕು ಅನ್ನೋ ಗುರಿಯಿಂದ ‘ಮುಗಿಲ್ ಪೇಟೆ’ ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಪ್ರಚಾರದ ಕಹಳೆಯನ್ನ ಮೆಲೋಡಿ ಹಾಡಿನ ಮಳೆಯನ್ನ ಹೊರಸೂಸಿದೆ..

ಸಾಹೇಬ, ಬ್ರಹಸ್ಪತಿ ಸಿನಿಮಾಗಳ ನಂತರ ಮನೋರಂಜನ್ ಸ್ವಲ್ಪ ಟೈಮ್ ತೆಗೋಂಡೆ ಮುಗಿಲ್ ಪೇಟೆ ಸಿನಿಮಾವನ್ನ ಒಪ್ಪಿಕೊಂಡ್ರು.. ಈ ಬಾರಿ ಕನಸುಗಾರನ ಅಭಿಮಾನಿಗಳು ಕನ್ನಡ ಸಿರಿ ಪ್ರೇಕ್ಷಕರು ಮೆಚ್ಚುವಂಥಹ ಸಿನಿಮಾವನ್ನ ಕೊಡ್ಲೇ ಬೇಕು ಅಂದುಕೊಂಡು ಮುಗಿಲ್ ಪೇಟೆ ಸಿನಿಮಾವನ್ನ ಮಾಡಿದ್ದಾರೆ.. ಕಷ್ಟ ಪಟ್ಟು ಇಷ್ಟ ಪಟ್ಟು ಮಾಡಿದ್ದಕ್ಕೂ ಸಾರ್ಥಕವಾಗಿದೆ ಅನ್ನಿಸುತ್ತಿದೆ ಮುಗಿಲ್ ಪೇಟೆ ಹೊಸ ಗಾನ ಬಜಾನ..

‘ಮುಗಿಲ್ ಪೇಟೆ’ ಮೆಲೋಡಿ ಗಾನ ಚೆಂದ ಪ್ಲಸ್ ಅಂದ
ಮುದ್ ಮುದ್ದಾಗಿ ಕಂಡರು ‘ಮುಗಿಲ್ ಪೇಟೆ’ಯ ಜೋಡಿ

‘‘ತಾರೀಫು ಮಾಡಲು , ತಾರೀಖು ಮೂಡಿದೆ’’ ಇದು ಮುಗಿಲ್ ಪೇಟೆ ಸಿನಿ ಅಂಗಳದಿಂದ ಹೊರ ಬಂದಿರೋ ಹೊಚ್ಚ ಹೊಸ ಹಾಡು.. ಶ್ರೀಧರ್ ವಿ ಸಂಭ್ರಮ್ ಸಂಗೀತ ಮತ್ತು ನಿರ್ದೇಶಕ ಭರತ್ ನಾವುಂದ ಸಾಹಿತ್ಯದಲ್ಲಿ ನಕುಲ್ ಅಭಯಂಕರ್, ಶ್ವೇತಾ ದೇವನಹಳ್ಳಿ ಗಾಯನದಲ್ಲಿ ಅದ್ಭುತವಾಗಿ ಹಾಡು ಮೂಡಿಬಂದಿದೆ.. ಮುಗಿಲ್ ಪೇಟೆ ಈ ಮೇಲೋಡಿ ಹಾಡು ಕೇಳಲು ಚೆಂದವೋ ಚೆಂದ ನೋಡಲು ಅಂದವೋ ಆನಂದ..

ಮನೋರಂಜನ್ ಮುದ್ ಮುದ್ದಾಗಿ ತನ್ನ ಸಿನಿಮಾದ ಹೀರೋಯಿನ್ ಕಯಾದು ಜೊತೆ ಕಂಗೊಳಿಸಿದ್ದಾರೆ.. ರೊಮ್ಯಾಂಟಿಕ್ ಅನ್ನೋ ವಿಚಾರ ಮನು ಮೈಯಲ್ಲೇ ಗಾಡ್ ಗಿಫ್ಟ್ ಆಗಿ ಬಂದಿದೆ ಅಂತ ಕಾಣಿಸುತ್ತೆ.. ಹಾಡು ಪ್ಲಸ್ ಹಾಡಿನಲ್ಲಿ ಕಂಗೋಳಿಸೋ ಜೋಡಿ ಇಬ್ಬರು ಚೆನ್ನಾಗಿ ಕಾಣಿಸಿಕೊಂಡಿದ್ದಾರೆ..

ಈ ಬಾರಿ ದೀಪವಾಳಿಗೆ ಬೆಳ್ಳಿ ಅಂಗಳದಲ್ಲಿ ನಮ್ದೇ ರಂಜನೆಯ ಪಟಾಕಿ ಅನ್ನೋ ಸಂದೇಶವನ್ನು ಪರೋಕ್ಷವಾಗಿ ಮುಗಿಲ್ ಪೇಟೆ ಫಿಲ್ಮ್ ಟೀಮ್ ಹಾಡಿನ ಮೂಲಕ ನೀಡಿದ್ದಾರೆ.. ದೀಪವಾಳಿ ಹಬ್ಬದ ಪ್ರಯುಕ್ತ ಪ್ರೇಕ್ಷಕರ ಮುಂದೆ ಬಂದು ನಿಲ್ಲೋ ಯೋಚನೆ ಯೋಜನೆಯಲ್ಲಿ ಚಿತ್ರತಂಡವಿದೆ.. ಇನ್ನು ಈ ಸಿನಿಮಾದ ರಿಲೀಸು ಪ್ಲಸ್ ಪ್ರಮೋಷನಲ್ ಆಕ್ಟಿವಿಟಿಯನ್ನ ವಿಕ್ರಂ ರವಿಚಂದ್ರನ್ ಅಲಿಯಾಸ್ ವಿಕ್ಕಿ ವಹಿಸಿಕೊಂಡಿದ್ದಾರೆ..

News First Live Kannada

Leave a comment

Your email address will not be published. Required fields are marked *