ಇತ್ತೀಚೆಗಷ್ಟೇ ಸಮಂತಾ-ನಾಗಚೈತನ್ಯ ಜೋಡಿ ದಾಂಪತ್ಯಕ್ಕೆ ಗುಡ್ಬೈ ಹೇಳಿತ್ತು. ಇದರ ಆಘಾತದಿಂದ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ. ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ಹಿರಿಯ ಪುತ್ರಿ ಹಾಗೂ ಅಳಿಯ ಧನುಷ್ ತಮ್ಮ ಸಂಸಾರಿಕ ಬದುಕಿಗೆ ದಿಢೀರ್ ಅಂತಾ ವಿದಾಯ ಹೇಳಿದೆ.
ಬಣ್ಣದ ಲೋಕದ ಮತ್ತೊಂದು ಜೋಡಿಯೂ ಡಿವೋರ್ಸ್
ಬಣ್ಣದ ಲೋಕದ ಮತ್ತೊಂದು ಜೋಡಿಯೂ ತಮ್ಮ ದಾಂಪತ್ಯಕ್ಕೆ ಗುಡ್ಬೈ ಹೇಳಿದೆ. ಸೂಪರ್ ಸ್ಟಾರ್, ತಲೈವಾ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಅಳಿಯ ಧನುಷ್ ತಮ್ಮ 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈ ಮೂಲಕ ಇಬ್ಬರೂ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಸೂಪರ್ ಸ್ಟಾರ್ ರಜಿನಿಕಾಂತ್ ಹಿರಿಯ ಮಗಳು ಸಿನಿಮಾ ನಿರ್ದೇಶಕಿ ಐಶ್ವರ್ಯಾ 2004ರ ನವೆಂಬರ್ನಲ್ಲಿ ತಮಗಿಂತ 2 ವರ್ಷ ಕಿರಿಯರೇ ಆಗಿರೋ ನಟ ಧನುಷ್ ಕೈಹಿಡಿದಿದ್ದರು. ಬಹುಭಾಷಾ ನಟರಾಗಿರೋ ಧನುಷ್ ಹಾಗೂ ಐಶ್ವರ್ಯಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಅದೇನಾಯ್ತೋ ಏನೋ ಧನುಷ್ ಹಾಗೂ ಐಶ್ವರ್ಯಾ ಏಕಾಏಕಿ ದೂರವಾಗೋ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದ್ದಾರೆ.
🙏🙏🙏🙏🙏 pic.twitter.com/hAPu2aPp4n
— Dhanush (@dhanushkraja) January 17, 2022
ಈ ಬಗ್ಗೆ ನಿನ್ನೆ ರಾತ್ರಿಯೇ ಈ ಬಗ್ಗೆ ಟ್ವೀಟ್ ಮಾಡಿರೋ ನಟ ಧನುಷ್, 18 ವರ್ಷಗಳ ನಮ್ಮ ದಾಂಪತ್ಯ ಅಂತ್ಯಗೊಂಡಿದೆ. ನಮ್ಮನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ ಅಂತಾ ಬರೆದುಕೊಂಡಿದ್ದಾರೆ. ಇದ್ರ ಬೆನ್ನಲ್ಲೇ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಧನುಷ್ ಜೊತೆಗಿನ ದಾಂಪತ್ಯ ಅಂತ್ಯಗೊಳಿಸಿರೋ ಬಗ್ಗೆ ಐಶ್ವರ್ಯಾ ರಜಿನಿ ಕಾಂತ್ ಕೂಡಾ ಪೋಸ್ಟ್ ಮಾಡಿದ್ದಾರೆ. ನಮ್ಮ ಮೇಲೆ ನಿಮ್ಮ ಪ್ರೀತಿ ಇರಲಿ ಅಂತಾ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.
ತಲೈವಾ ಇಬ್ಬರ ಪುತ್ರಿಯರ ಬದುಕಲ್ಲೂ ಡಿವೋರ್ಸ್ ದಿಗಿಲು
ಐಶ್ವರ್ಯಾ-ಧನುಷ್ ಡಿವೋರ್ಸ್ ಅನೌನ್ಸ್ ಮಾಡೋ ಮೂಲಕ ರಜಿನಿಕಾಂತ್ ಇಬ್ಬರು ಪುತ್ರಿಯರೂ ವಿಚ್ಛೇದನ ಕೊಟ್ಟಂತಾಗಿದೆ. ಈ ಮೊದಲು ಅಶ್ವಿನ್ ರಾಮ್ಕುಮಾರ್ರನ್ನು ಮದ್ವೆಯಾಗಿದ್ದ ರಜಿನಿಕಾಂತ್ ಕಿರಿಯ ಮಗಳು ಸೌಂದರ್ಯಾ ಕೂಡಾ 7 ವರ್ಷಗಳ ದಾಂಪತ್ಯಕ್ಕೆ ಗುಡ್ಬೈ ಹೇಳಿದ್ದರು. ಇದೀಗ ಹಿರಿಯ ಪುತ್ರಿ ಐಶ್ವರ್ಯಾ-ಧನುಷ್ ದಂಪತಿಯೂ ಬೇರೆ ಬೇರೆಯಾಗಿದ್ದಾರೆ.
ಒಟ್ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ಜೋಡಿ ಬೇರೆ ಬೇರೆಯಾದ ಶಾಕ್ನಿಂದ ಅಭಿಮಾನಿಗಳು ಇನ್ನೂ ಆಚೆ ಬಂದಿಲ್ಲ. ಈ ನಡುವೆ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್ ಕೂಡಾ ದಾಂಪತ್ಯಕ್ಕೆ ಅಂತ್ಯ ಘೋಷಿಸಿರೋದು ಅವ್ರ ಅಭಿಮಾನಿಗಳನ್ನು ಘಾಸಿಗೊಳಿಸಿದೆ ಅಂದ್ರೆ ತಪ್ಪಾಗಲಾರದು.