ಅಭಿಮಾನಿಗಳಿಗೆ ಮಿಸ್ಟರ್​ ಕೂಲ್ ಗುಡ್​ನ್ಯೂಸ್ -ಫಾನ್ಸ್​ ಮುಂದೆಯೇ ಧೋನಿಯ ಕೊನೆ ಪಂದ್ಯ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ರಿಟೈರ್​ಮೆಂಟ್​​​ ಹೇಳಿದ್ದೇ ತಡ, ಐಪಿಎಲ್​ಗೂ ಮಿಸ್ಟರ್​ ಕೂಲ್ ಧೋನಿ ಗುಡ್​​ ಬೈ ಹೇಳ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದ್ರೆ, ಕಳೆದ ಆವೃತ್ತಿಯಲ್ಲಿ ಡೆಫನೆಟ್ಲಿ ನೋ ಎಂದಿದ್ದ ಧೋನಿ ಚರ್ಚೆಗಳಿಗೆ ತೆರೆ ಎಳೆದಿದ್ರು. ಇದೀಗ ಮತ್ತೇ ಮಾಹಿ ಪಾಲಿಗೆ ಇದೇ ಕೊನೆ ಐಪಿಎಲ್ ಅನ್ತಿದ್ದಾರೆ. ಹಾಗಾದ್ರೆ, ನಿಜವಾಗಲೂ ಧೋನಿ ನಿವೃತ್ತಿ ಹೇಳ್ತಾರಾ..? ಇಲ್ಲಿದೆ ನೋಡಿ ಒಂದು ರಿಪೋರ್ಟ್​

ವಿಶ್ವ ಕ್ರಿಕೆಟ್​ನ ಶ್ರೇಷ್ಠ ನಾಯಕಎಮ್.ಎಸ್​.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸಾಧನೆ ಶಿಖರವನ್ನೇ ಏರಿದ್ದಾರೆ. ಐಪಿಎಲ್​ನಲ್ಲೂ ಯಶಸ್ವಿ ನಾಯಕನಾಗಿ ಮೂರು ಟ್ರೋಫಿಗಳನ್ನ ತಂಡದ ಮುಡಿಗೇರಿಸಿದ್ದಾರೆ. ಇನ್​ಫ್ಯಾಕ್ಟ್​​..!​ ಐಪಿಎಲ್​ ಆರಂಭದಿಂದ ಈವರೆಗೆ ಅಂದ್ರೆ, 13 ವರ್ಷಗಳಿಂದ ಒಂದೇ ತಂಡದ ನಾಯಕನಾಗಿರುವ ಏಕಮಾತ್ರ ಲೀಡರ್​​​ ಮಾಹಿ..! ಇದೀಗ 14ನೇ ಆವೃತ್ತಿ ಅಂತ್ಯದ ದಿನ ಸಮೀಪಿಸುತ್ತಿದ್ದಂತೆ ಮುಂದಿನ ಮೆಗಾ ಆಕ್ಷನ್​ ಲೆಕ್ಕಾಚಾರ ಜೋರಾಗಿದ್ದು, ಇದೇ ಇದೀಗ ಐಪಿಎಲ್​ನಲ್ಲೂ ಧೋನಿ ಯುಗಾಂತ್ಯದ ಬಗ್ಗೆ ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

2020ರ ಆಗಸ್ಟ್​ 15..! ಅಂತರಾಷ್ಟ್ರೀಯ ಕ್ರಿಕೆಟ್​ಗೆ ಎಮ್​ಎಸ್​ ಧೋನಿ ಗುಡ್​​ಬೈ ಹೇಳಿದ ದಿನ. 13ನೇ ಆವೃತ್ತಿಯ ಐಪಿಎಲ್ ಗೆಂದು ಯುಎಇ ನಾಡಲ್ಲಿ ಬೀಡು ಬಿಟ್ಟ ಸಂದರ್ಭದಲ್ಲೇ ಅನಿರೀಕ್ಷಿತವಾಗಿ ರಿಟೈರ್​​ಮೆಂಟ್​ ಘೋಷಿಸಿ ಶಾಕ್​ ನೀಡಿದ್ರು. ಅದರ ಬೆನ್ನಲ್ಲೇ ಐಪಿಎಲ್​ಗೂ ಮಾಹಿ ಗುಡ್​ ಬೈ ಹೇಳ್ತಾರೆ ಎಂದೇ ಹೇಳಲಾಗಿತ್ತು. ಆ ಆವೃತ್ತಿಯಲ್ಲಿ ಧೋನಿ ನಡೆದುಕೊಂಡ ರೀತಿಯೂ ಹಾಗೇ ಇತ್ತು. ಆದ್ರೆ, ಟೂರ್ನಿಯ ಕೊನೆಯ ಲೀಗ್​​ ಮ್ಯಾಚ್​ನಲ್ಲಿ ಈ ಪ್ರಶ್ನೆಗೆ ಉತ್ತರಿಸಿದ್ದ ಧೋನಿ, Definitely Not ಎಂಬ ಎರಡೇ ಪದಗಳಲ್ಲಿ ಅಂಸಖ್ಯ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ರು.

ಇದೀಗ 14ನೇ ಆವೃತ್ತಿ ಐಪಿಎಲ್​ಗೂ ಯುಎಇ ನಾಡು ವೇದಿಕೆ ಒದಗಿಸಿದೆ. ಮತ್ತೆ ಧೋನಿ ನಿವೃತ್ತಿಯ ಚರ್ಚೆಗಳು ಹುಟ್ಟಿಕೊಂಡಿತ್ತು. ಮುಂದಿನ ಆವೃತ್ತಿಯಲ್ಲಿ ಮೆಗಾ ಆಕ್ಷನ್​ ಇದೆ. ಹೀಗಾಗಿ ಧೋನಿ ರಿಟೈನ್​ ಮಾಡಿಕೊಳ್ಳಲ್ಲ ಅನ್ನೋದು ಒಂದು ವರ್ಗದ ವಾದವಾಗಿತ್ತು. ಇನ್ನೊಂದು ಕಡೆ ಧೋನಿಯ ವಯಸ್ಸೂ ಕೂಡ ರಿಟೈರ್​ಮೆಂಟ್​​ ಚರ್ಚೆಗೆ ಆಹಾರವಾಗಿತ್ತು. ಇದಕ್ಕಿಂತ ಮುಖ್ಯವಾಗಿ ಧೋನಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಮೆಂಟರ್ ಆಗಿದ್ದು, ಧೋನಿ ಸೆಕೆಂಡ್ ಇನ್ನಿಂಗ್ಸ್ ಆರಂಭದ ಮುನ್ಸೂಚನೆಯೇ ಎನ್ನಲಾಗಿತ್ತು. ಆದ್ರೆ, ಈ ಚರ್ಚೆಗಳಿಗೆಲ್ಲಾ ಈಗ ಸುಳ್ಳಾಗಿವೆ.

2022ರ ಸೀಸನ್​ನಲ್ಲೂ ಆಡ್ತಾರೆ ಮಿಸ್ಟರ್​ ಕೂಲ್..!
ಯೆಸ್​..! ಸದ್ಯದ ಐಪಿಎಲ್​ ಪ್ರದರ್ಶನ, ಫಿಟ್ನೆಸ್, ವಯಸ್ಸು, ಮೆಗಾ ಆಕ್ಷನ್, ಹೀಗೆ ನಾನಾ ಕಾರಣಗಳಿಂದ ಧೋನಿಗೆ ಇದೇ ಕೊನೆ ಐಪಿಎಲ್ ಎನ್ನಲಾಗಿತ್ತು. ಆದ್ರೀಗ ಈ ಬಗ್ಗೆ ಖುದ್ದು ಮಾತನಾಡಿರುವ ಧೋನಿ, ಬಿಗ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ಐಪಿಎಲ್​ ಸೀಸನ್​ನಲ್ಲೂ ತಾನಾಡುವುದು ಕನ್​ಫರ್ಮ್​ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ.. ಯೆಲ್ಲೋ ಆರ್ಮಿ ಫ್ಯಾನ್ಸ್​​ ಗುಡ್​ ನ್ಯೂಸ್​ ನೀಡಿದ್ದಾರೆ.

‘ಚೆನ್ನೈನಲ್ಲಿ ಕೊನೆಯ ಆಟ‘
‘ವಿದಾಯದ ವಿಷಯಕ್ಕೆ ಬಂದಾಗ, ನಾನು ಸಿಎಸ್​ಕೆ ಪರವಾಗಿ ಆಡುವುದು ನೀವು ನೋಡಬಹುದು. ಅದು ನನ್ನ ಫೇರ್​​ವೆಲ್ ಪಂದ್ಯವಾಗಿರಬಹುದು. ನನಗೆ ವಿದಾಯ ಹೇಳಲು, ನಿಮಗೂ ಅವಕಾಶ ಸಿಗಲಿದೆ. ನಾವು ಚೆನ್ನೈಗೆ ಬರುತ್ತೇವೆ. ಅಲ್ಲಿ ನನ್ನ ಕೊನೆ ಆಟ ಆಡುತ್ತೇನೆ. ಅಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತೇನೆ’

ಧೋನಿ, ಚೆನ್ನೈ ನಾಯಕ

ಧೋನಿ ಮಾತ್ರವಲ್ಲ..! ಸ್ವತಃ ಸಿಎಸ್​ಕೆ ಫ್ರಾಂಚೈಸಿಯೂ ಧೋನಿಯನ್ನ ರಿಟೈನ್ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ. ಇದರೊಂದಿಗೆ ಮುಂದಿನ ಸೀಸನ್​​​ನಲ್ಲೂ ಧೋನಿ ಸಿಎಸ್​​ಕೆ ಪಡೆಯನ್ನ ಮುನ್ನಡೆಸೋದು ಕನ್​ಫರ್ಮ್​ ಆಗಿದೆ. ಆದ್ರೆ, ಇದೆಲ್ಲಕ್ಕಿಂತ ಚೆಪಾಕ್​ ಅಂಗಳದಲ್ಲೇ ನಿಮ್ಮ ಎದುರಿಗೆ ಕೊನೆಯ ಪಂದ್ಯವನ್ನಾಡೋದು ಎಂದು ಮಾಹಿ ಹೇಳಿರೋದು ಅಭಿಮಾನಿಗಳನ್ನಂತೂ ಸಂತೋಷದ ಅಲೆಯಲ್ಲಿ ತೇಲುವಂತೆ ಮಾಡಿದೆ.

News First Live Kannada

Leave a comment

Your email address will not be published. Required fields are marked *