ಅಭಿಮಾನಿಗಳಿಗೆ ವಂಚನೆ; ಬಿಗ್​ ಬಾಸ್​ ಸ್ಪರ್ಧಿಗೆ ಬಂಧನ ಭೀತಿ | Arrest Warrant Against Bigg Boss former Contestant Sapna Choudhary In cheating case


ಅಭಿಮಾನಿಗಳಿಗೆ ವಂಚನೆ; ಬಿಗ್​ ಬಾಸ್​ ಸ್ಪರ್ಧಿಗೆ ಬಂಧನ ಭೀತಿ

ಸಪ್ನಾ ಚೌಧರಿ

ಹಿಂದಿ ಬಿಗ್ ಬಾಸ್​ 11ನೇ (Bigg Boss Hindi 11) ಸೀಸನ್​ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡವರು ಸಪ್ನಾ ಚೌಧರಿ (Sapna Choudhary). ಇವರು ಗಾಯನ ಹಾಗೂ ನೃತ್ಯದಲ್ಲಿ ಪಳಗಿದ್ದಾರೆ. ಈಗ ಅವರು ಸಮಸ್ಯೆ ಒಂದರಲ್ಲಿ ಸಿಲುಕಿದ್ದಾರೆ. ಮೂರು ವರ್ಷದ ಹಿಂದಿನ ಕೇಸ್​ನಲ್ಲಿ ಅವರ ವಿರುದ್ಧ ಅರೆಸ್ಟ್​ ವಾರೆಂಟ್​ ಜಾರಿ ಆಗಿದೆ. ಹೀಗಾಗಿ, ಅವರಿಗೆ ಬಂಧನ ಭೀತಿ ಎದುರಾಗಿದೆ. ಲಖನೌನ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅವರನ್ನು ಬಂಧಿಸಿ ತರುವಂತೆ ನ್ಯಾಯಾಧೀಶರು ಹೇಳಿದ್ದಾರೆ. ಹಾಗಾದರೆ ಏನು ಈ ಪ್ರಕರಣ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೂರು ವರ್ಷದ ಹಿಂದಿನ ಘಟನೆ. 2018ರ ಅಕ್ಟೋಬರ್​ 13ರದು ಸಪ್ನಾ ಅವರು ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್​ ಮಾಡಬೇಕಿತ್ತು. ಈ ಕಾರ್ಯಕ್ರಮಕ್ಕೆ 300 ರೂಪಾಯಿ ಟಿಕೆಟ್​ ಫಿಕ್ಸ್​ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 10 ಗಂಟೆ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಸಪ್ನಾ ಡ್ಯಾನ್ಸ್​ ಮಾಡುತ್ತಾರೆ ಎನ್ನುವ ಕಾರಣಕ್ಕೆ ಅನೇಕರು ಆಗಮಿಸಿದ್ದರು. ಆದರೆ, ಅವರು ವೇದಿಕೆ ಏರಲೇ ಇಲ್ಲ. ಈ ಕಾರಣಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದು ಗಲಾಟೆ ಮಾಡಿದ್ದರು. ಅಲ್ಲದೆ, ಟಿಕೆಟ್ ಹಣವನ್ನು ಹಿಂದಿರುಗಿಸುವಂತೆ ಅಭಿಮಾನಿಗಳು ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಆಯೋಜಕರಾದ ಜುನಾಯಿದ್​ ಅಹ್ಮದ್​, ನವೀನ್​ ಶರ್ಮಾ, ಇವಾದ್​ ಅಲಿ, ಅಮಿತ್​ ಪಾಂಡೆ, ರತ್ನಾಕರ್​ ಉಪಾಧ್ಯಾಯ್​ ಹಾಗೂ ಸಪ್ನಾ ಚೌಧರಿ ವಿರುದ್ಧ ಪ್ರಕರಣ ದಾಖಲಾಗಿದೆ.  ಸಪ್ನಾ ಅವರು ಪ್ರಕರಣವನ್ನು ಖುಲಾಸೆ ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕೋರ್ಟ್​ ಇದನ್ನು ನಿರಾಕರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್​ 22ಕ್ಕೆ ನಡೆಯಲಿದೆ.

ಸಪ್ನಾ ಹರಿಯಾಣ ಮೂಲದವರು. ಅವರು ವೃತ್ತಿಯಲ್ಲಿ ಡ್ಯಾನ್ಸರ್​ ಹಾಗೂ ನಟಿ. ಬಿಗ್​ ಬಾಸ್​ 11ರ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು. ಈಗ ಅವರಿಗೆ ಬಂಧನ ಭೀತಿ ಎದುರಾಗಿದೆ. ನವೆಂಬರ್​ 22ರಂದು ಸಪ್ನಾ ಕೋರ್ಟ್​ ಮುಂದೆ ಹಾಜರಾಗುತ್ತಾರಾ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಚಾಕು ಹಿಡಿದು ಹತ್ಯೆ ಮಾಡಿಕೊಳ್ಳಲು ಮುಂದಾದ ಸ್ಪರ್ಧಿ; ವಾಹಿನಿಯಿಂದ ಮಹತ್ವದ ನಿರ್ಧಾರ

TV9 Kannada


Leave a Reply

Your email address will not be published. Required fields are marked *