ಅಭಿಮಾನಿಗಳಿಗೆ ಸಲ್ಮಾನ್​ ಖಾನ್​ ಕಟ್ಟುನಿಟ್ಟಿನ ಸಂದೇಶ; ಇದು ಫ್ಯಾನ್ಸ್​ಗೆ ಬೇಸರವಾಗುವ ವಿಚಾರ | Antim The Final Truth Salman Khan request fans To Not pour milk On poster


ಅಭಿಮಾನಿಗಳಿಗೆ ಸಲ್ಮಾನ್​ ಖಾನ್​ ಕಟ್ಟುನಿಟ್ಟಿನ ಸಂದೇಶ; ಇದು ಫ್ಯಾನ್ಸ್​ಗೆ ಬೇಸರವಾಗುವ ವಿಚಾರ

ಸಲ್ಮಾನ್​ ಖಾನ್​

ನೆಚ್ಚಿನ ನಟರ ಸಿನಿಮಾ ರಿಲೀಸ್​ ಆಗುತ್ತಿದೆ ಎಂದರೆ ಅಭಿಮಾನಿಗಳಿಗೆ ಅದು ಹಬ್ಬವೇ ಸರಿ. ಚಿತ್ರಮಂದಿರದಲ್ಲಿ ಕಟೌಟ್​ ನಿಲ್ಲಿಸಿ, ಅದಕ್ಕೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದೇ ಇದೆ. ಆದರೆ, ಸಲ್ಮಾನ್​ ಖಾನ್​ಗೆ ಇದು ಇಷ್ಟವಾಗಿಲ್ಲ. ಈ ಕಾರಣಕ್ಕೆ ಅವರು ಅಭಿಮಾನಿಗಳಿಗೆ ಕಟ್ಟು ನಿಟ್ಟಿನ ಸೂಚನೆ ಒಂದನ್ನು ನೀಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

‘ಅಂತಿಮ್​: ದಿ ಫೈನಲ್​ ಟ್ರುತ್​’ ಚಿತ್ರದಲ್ಲಿ ಸಲ್ಮಾನ್​ ಖಾನ್​ ಸಿಖ್​ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಅವರ ಭಾಮೈದ ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಮಿಂಚಿದ್ದಾರೆ. ನವೆಂಬರ್​ 26ರಂದು ಸಿನಿಮಾ ತೆರೆಗೆ ಬಂದಿದೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಬರುತ್ತಿದೆ. ಈ ಸಿನಿಮಾ ಮೊದಲ ದಿನ 4.55 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಅಂದರೆ ಶನಿವಾರ (ನವೆಂಬರ್​ 27) 5.50 ಕೋಟಿ ರೂ., ಭಾನುವಾರ (ನವೆಂಬರ್​ 28) 7.75 ಕೋಟಿ  ಗಳಿಕೆ ಮಾಡಿದೆ.

ಸಿನಿಮಾಗೆ ಮೆಚ್ಚುಗೆಯ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಹಬ್ಬ ಮಾಡುತ್ತಿದ್ದಾರೆ. ‘‘ಅಂತಿಮ್​’ ಸಿನಿಮಾದ ಪೋಸ್ಟರ್​ಗೆ ಕೆಲವರು ಹಾಲಿನ ಅಭಿಷೇಕ ಮಾಡಿದ್ದಾರೆ. ಇದು ಸಲ್ಮಾನ್​ ಖಾನ್​ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ಅಭಿಮಾನಿಗಳಿಗೆ ಸೂಚನೆ ಒಂದನ್ನು ನೀಡಿದ್ದಾರೆ.

‘ನಮ್ಮಲ್ಲಿ ಅನೇಕರಿಗೆ ಕುಡಿಯಲು ನೀರಿಲ್ಲ. ಅಂತಹುದರಲ್ಲಿ ನೀವು ಹಾಲನ್ನು ವ್ಯರ್ಥ ಮಾಡುತ್ತಿದ್ದೀರಿ. ನನ್ನ ಎಲ್ಲಾ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಹಾಲನ್ನು ವ್ಯರ್ಥ ಮಾಡದೆ ಅಗತ್ಯ ಇರುವ ಬಡ ಮಕ್ಕಳಿಗೆ ನೀಡಿ’ ಎಂದು ಕೋರಿದ್ದಾರೆ ಅವರು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘ಅಂತಿಮ್’​ ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ತೆರಳಿದ ಅಭಿಮಾನಿಗಳು ಒಳ ಭಾಗದಲ್ಲೇ ಪಟಾಕಿ ಹೊಡೆದಿದ್ದರು. ಈ ಬಗ್ಗೆ ಸಲ್ಮಾನ್​ ಖಾನ್​ ಅಸಮಾಧಾನ ಹೊರ ಹಾಕಿದ್ದರು. ಇದರಿಂದ ಚಿತ್ರಮಂದಿರಕ್ಕೆ ಹಾನಿ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ:Antim Box Office Collection: ಕೇವಲ 4.5 ಕೋಟಿ ಗಳಿಸಿದ ‘ಅಂತಿಮ್​’ ಚಿತ್ರ; ಸಲ್ಮಾನ್​ ಖಾನ್​ ಸಿನಿಮಾದ ಹಣೆಬರಹ ಏನಾಗಬಹುದು? 

ಬಾಕ್ಸ್​ ಆಫೀಸ್​ನಲ್ಲಿ ನಡೆಯಲೇ ಇಲ್ಲ ಸಲ್ಮಾನ್​ ಕಮಾಲ್​​; ‘ಅಂತಿಮ್’​ ಸಿನಿಮಾ ಗಳಿಕೆ ಮಾಡಿದ್ದೆಷ್ಟು?

TV9 Kannada


Leave a Reply

Your email address will not be published. Required fields are marked *