ಅಭಿಮಾನಿಗಳ ಅಭಿಮಾನಕ್ಕೆ ಮತ್ತೆ ಶಾಕ್ ಕೊಟ್ಟ ಆರ್​ಸಿಬಿ.. ಯಾಕೆ ಹೀಗೆ ಆಗ್ತಿದೆ..?


ಇಂಡಿಯನ್​ ಪ್ರೀಮಿಯರ್​ ಲೀಗ್​ ಹರಾಜಿಗೂ ಮುನ್ನ ಆರ್​​ಸಿಬಿ ಫ್ಯಾನ್ಸ್ ಖರೀದಿ ವಿಚಾರದಲ್ಲಿ ಸಾಕಷ್ಟು ಲೆಕ್ಕಾಚಾರ ನಡೆಸಿದ್ರು. ನಮ್ಮ ಕನ್ನಡಿಗರ ಖರೀದಿಗೆ ಆರ್​ಸಿಬಿ ಮುಂದಾಗುತ್ತೆ ಅನ್ನೋ ನಿರೀಕ್ಷೆಯೂ ಅಭಿಮಾನಿಗಳಲ್ಲಿಯೂ ಇತ್ತು. ಆದ್ರೆ, ಹರಾಜಿನ ಕಣದಲ್ಲಿ ಆರ್​ಸಿಬಿ ತಂಡ ಹುಸಿಗೊಳಿಸಿತು.

ಈ ಬಾರಿಯಾದ್ರೂ ಐಪಿಎಲ್ ಹರಾಜಿನಲ್ಲಿ ಆರ್​ಸಿಬಿ, ನಮ್ಮ ಕರ್ನಾಟಕ ಪ್ಲೇಯರ್​ಗಳನ್ನ ಖರೀದಿ ಮಾಡುತ್ತೆ ಎಂಬ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಆದ್ರೆ ಪ್ರತಿ ಬಾರಿಯಂತೆ ನಿರೀಕ್ಷೆ ಇಟ್ಟುಕೊಂಡಿದ್ದ ಆರ್​ಸಿಬಿ ಫ್ಯಾನ್ಸ್​ಗೆ, ಸಿಕ್ಕಾಪಟ್ಟೆ ನಿರಾಸೆಯಾಗಿದೆ. ಕನ್ನಡಿಗರ ಖರೀದಿ ಇರಲಿ ನಮ್ಮ ಕರ್ನಾಟಕದ ಆಟಗಾರರ ಬಿಡ್ಡಿಂಗ್​ಗೂ ನಿರಾಸೆ ತೋರಿಸಿದ್ದು, ಅಭಿಮಾನಿಗಳ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಟ್ಯಾಲೆಂಟ್​ ಸ್ಕೌಟ್ಸ್​​ಗೆ ಕಾಣಲೇ ಇಲ್ವಾ ಕನ್ನಡದ ಸ್ಟಾರ್ಸ್​.​.?
ಕರ್ನಾಟಕದಲ್ಲಿ ಸಾಕಷ್ಟು ಟ್ಯಾಲೆಂಟೆಡ್ ಕ್ರಿಕೆಟರ್ಸ್​ ಇದ್ದಾರೆ. ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಕೆ.ಗೌತಮ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ಜೆ.ಸುಚಿತ್, ಕೆ.ಸಿ. ಕಾರಿಯಪ್ಪ, ದೇವದತ್ತ್​ ಪಡಿಕ್ಕಲ್​. ಒಬ್ರಾ ಇಬ್ರಾ.. ಹೇಳ್ತಾ ಹೋದ್ರೆ ಇನ್ನೂ ಸಾಕಷ್ಟು ಹೆಸರುಗಳನ್ನ ಹೇಳಬಹುದು. ಇವ್ರೆಲ್ಲಾ ಟೀಮ್ ಇಂಡಿಯಾದಲ್ಲಿ ಮತ್ತು ಐಪಿಎಲ್​​ನಲ್ಲಿ, ತಮ್ಮ ಟ್ಯಾಲೆಂಟ್ ಅನ್ನ ತೋರಿಸ್ತಿದ್ದಾರೆ. ಆದ್ರೆ, ಆರ್​ಸಿಬಿ ಫ್ರಾಂಚೈಸಿಗೆ ಹಾಗೂ ಅದರ ಟ್ಯಾಲೆಂಟ್​ ಸ್ಕೌಟ್ಸ್​​ಗೆ ಮಾತ್ರ ಇವರು ಕಾಣಲೇ ಇಲ್ಲ. ಪಡಿಕ್ಕಲ್​, ಕರುಣ್​ ನಾಯರ್​ರಂತವರನ್ನ ಬಿಟ್ರೆ, ಹಲ ಆಟಗಾರರನ್ನ ಖರೀದಿ ಇರಲಿ. ಬಿಡ್​ ಕೂಡ ಮಾಡಲಿಲ್ಲ.

ಇಬ್ಬರು ಯಂಗ್​​ಸ್ಟರ್​​ಗಳಿಗೆ ಮಣೆ ಹಾಕಿದ್ದೆ ಸಮಾಧಾನ​.​.!
ಸಮಾಧಾನದ ವಿಷ್ಯ ಅಂದ್ರೆ, ಕೊನೆಯ ದಿನದ ಹರಾಜಿನ ಕೊನೆಯ ಕ್ಷಣದಲ್ಲಿ ಇಬ್ಬರು ಕನ್ನಡದ ಯಂಗ್​​ಸ್ಟರ್​​ಗಳಿಗೆ ಮಣೆ ಹಾಕಿದೆ. ಅನೀಶ್ವರ್ ಗೌತಮ್ ಮತ್ತು ಲುನ್ವಿತ್ ಸಿಸೋಡಿಯಾ ಈ ಇಬ್ರು ಯಂಗ್​ಸ್ಟರ್​ಗಳನ್ನ ಖರೀದಿ ಮಾಡಿದೆ. ಅದು 20 ಲಕ್ಷ ಬೇಸ್​ಪ್ರೈಸ್​​ಗೆ. ಇವರಿಗೆ ತಂಡದಲ್ಲಿ ಆಡೋ ಅವಕಾಶ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಆರ್​ಸಿಬಿ ಫ್ರಾಂಚೈಸಿ ಮಾತ್ರ, ಈ ಇಬ್ಬರು ಯುವಕರನ್ನ ಖರೀದಿ ಮಾಡಿ ಟೀಕೆಗಳಿಂದ ತಪ್ಪಿಸಿಕೊಳ್ಳೋ ಪ್ರಯತ್ನವಂತೂ ಮಾಡಿದೆ.

ಆರ್​​ಸಿಬಿ ಫ್ರಾಂಚೈಸಿಯದ್ದು ಈ ಕಥೆಯಾದ್ರೆ ಉಳಿದ ಫ್ರಾಂಚೈಸಿಗಳು ಲೋಕಲ್ ಪ್ಲೇಯರ್​ಗಳಿಗೆ ಜಾಸ್ತಿ ಒತ್ತು ನೀಡಿದ್ದಾರೆ. ಗುಜರಾತ್ ಟೈಟನ್ಸ್​, ಹಾರ್ದಿಕ್ ಪಾಂಡ್ಯರನ್ನೇ ಖರೀದಿ ಮಾಡಿ ಕ್ಯಾಪ್ಟನ್ ಪಟ್ಟ ಕಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡ ಲೋಕಲ್ ಹೀರೋ ರಿಷಭ್ ಪಂತ್​​​ಗೆ, ಸಾರಥ್ಯ ನೀಡಿದೆ. ಇನ್ನು ಚೆನ್ನೈ, ಪಂಜಾಬ್ ಸಹ ಲೋಕಲ್ ಟ್ಯಾಲೆಂಟ್​ಗೆ ತಂಡದಲ್ಲಿ ಅವಕಾಶ ಮಾಡಿಕೊಟ್ಟಿದೆ. ಆದರೆ ಆರ್​ಸಿಬಿಗೆ ಮಾತ್ರ ನಮ್ಮ ಕರ್ನಾಟಕ ಕ್ರಿಕೆಟಿಗರ ಮೇಲೆ ವಿಶ್ವಾಸವೇ ಇಲ್ಲಾ ಎನ್ನೋ ಪ್ರಶ್ನೆಯನ್ನ ಹುಟ್ಟುಹಾಕುವಂತೆ ಮಾಡಿದೆ.

ಕರ್ನಾಟಕದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಕೂಡ​​ ಆರ್​ಸಿಬಿ ಫ್ಯಾನೇ. ಆರ್​​ಸಿಬಿಯೇ ಪಾರೆವೆರ್​ ಫೇವರಿಟ್​. ಆರ್​ಸಿಬಿ ಟೀಮ್ ನಲ್ಲಿ ನಮ್ಮ ಕನ್ನಡಿಗರಿರಬೇಕು. ಆರ್​ಸಿಬಿ ಗೆದ್ದು, ಚಾಂಪಿಯನ್ ಟೀಮ್ ಆಗಬೇಕು. ಇದೇ ಪ್ರತಿಯೊಬ್ಬ ಕನ್ನಡಿಗನ ಕನಸು. ಆದರೆ ಈ ಬಾರಿಯೂ ಆರ್​​ಸಿಬಿ ಕನ್ನಡಿಗರಿಗೆ ಮಣೆ ಹಾಕಿಲ್ಲ ಇದು ಎಲ್ಲರಲ್ಲೂ ಬೇಸರ ತರಿಸಿದೆ. ಅಟ್ಲೀಸ್ಟ್, ಈ ಬಾರಿ ಕೊಂಡುಕೊಂಡಿರುವ ಇಬ್ಬರು ಯಂಗ್​​​ಸ್ಟರ್ಸ್​​ಗಳಿಗಾದ್ರೂ, ತಂಡದಲ್ಲಿ ಆಡೋ ಅವಕಾಶ ಕೊಡ್ಲಿ..ಅನ್ನೋದೇ ನಮ್ಮ ಆಶಯ.

News First Live Kannada


Leave a Reply

Your email address will not be published. Required fields are marked *