ಅಭಿಮಾನಿಗಳ ಕ್ಷಮೆ ಕೇಳಿ ಥಿಯೇಟರ್​​​​ ಬಳಿ ಗಲಾಟೆ ಮಾಡದಂತೆ ಕಿಚ್ಚ ಸುದೀಪ್ ಮನವಿ

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದ ಬಳಿಕ ಸರ್ಕಾರ ಚಿತ್ರ ಮಂದಿರಗಳಲ್ಲಿ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗುತ್ತಿರುವ ನಟ ಕಿಚ್ಚ ಸುದೀಪ್​​ ಅವರ ಕೋಟಿಗೊಬ್ಬ ಸಿನಿಮಾಗೆ ರಿಲೀಸ್​​ ತಡವಾಗಿದ್ದು, ರಾಜ್ಯದಾದ್ಯಂತ ಈಗಾಗಲೇ ಚಿತ್ರಮಂದಿರಗಳ ಆಗಮಿಸಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ನಟ ಸುದೀಪ್​​​, ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ರಿಲೀಸ್​​ ತಡವಾಗಿದ್ದು ಏಕೆ..? ಸುದೀಪ್​​ ಹೇಳಿದ್ದೇನು..?
ಕೋಟಿಗೊಬ್ಬ ಸಿನಿಮಾ ಇಂದು ರಿಲೀಸ್ ಆಗುತ್ತೋ ಇಲ್ಲವೋ ಅನ್ನೋ ಗೊಂದಲದಲ್ಲಿ ಸಿಲುಕಿರುವ ಅಭಿಮಾನಿಗಳಿಗೆ ಮನವಿ ಮಾತ್ರವನ್ನು ನೀಡಿರುವ ಸುದೀಪ್​​, ಈಗಾಗಲೇ ಥಿಯೇಟರ್​ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಥಿಯೇಟರ್ ನಲ್ಲಿ ಸಿನಿಮಾ ಇದೆ.. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ. ಕೆಲವರ ಬೇಜವಾಬ್ದಾರಿಯಿಂದ ಈ ರೀತಿ ಆಗಿದೆ. ಸಿನಿಮಾ ಮತ್ತೆ ಯಾವಾಗ ಪ್ರದರ್ಶನ ಆಗುತ್ತೆ ಅನ್ನೋದನ್ನ ಮತ್ತೆ ನಾನು ನಿಮಗೆ ತಿಳಿಸ್ತಿನಿ. ಹೊಸ ಸಮಯ ತಿಳಿಸುವುದು ನನ್ನ ಕರ್ತವ್ಯ ಅಲ್ಲಿಯವೆಗೂ ನೀವೆಲ್ಲ ತಾಳ್ಮೆಯಿಂದ ಇರಿ. ಸಿನಿಮಾ ರಿಲೀಸ್ ಆಗಿಲ್ಲ ಅಂತ ಥಿಯೇಟರ್ ಗಳಿಗೆ ಹಾನಿ ಮಾಡಬೇಡಿ. ನಿಮ್ಮ ಪ್ರೀತಿಯ ಕಿಚ್ಚ ಎಂದು ಪ್ರೀತಿಯಿಂದ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ 5 ಗಂಟೆಯಿಂದಲೇ ಕೋಟಿಗೊಬ್ಬ 3 ಸಿನಿಮಾ ಕಣ್ತುಂಬಿಕೊಳ್ಳಲು ರಾಜ್ಯದಾದ್ಯಂತ ಥಿಯೇಟರ್​​ಗಳ ಬಳಿ ಅಭಿಮಾನಿಗಳು ಆಗಮಿಸಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ ಇಂದಿನ ಎಲ್ಲಾ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿತ್ತು. ಅಲ್ಲದೇ ಆ ಬಳಿಕ ಮಾರ್ನಿಂಗ್ ಶೋಅನ್ನು ಕೂಡ ಕ್ಯಾನ್ಸಲ್​​ ಆಗಿತ್ತು. ಈ ಹಿನ್ನೆಲೆಯಲ್ಲಿ ಕೋಟಿಗೊಬ್ಬ 3 ರಿಲೀಸ್ ಬಗ್ಗೆ ಚಿತ್ರತಂಡದಿಂದ ಮೊದಲ ಬಾರಿಗೆ ಸುದೀಪ್​​ ಅವರು ಸ್ಪಷ್ಟನೆ ನೀಡಿದ್ದಾರೆ.

News First Live Kannada

Leave a comment

Your email address will not be published. Required fields are marked *