ಅಭಿಮಾನಿಗಳ ಪ್ರೀತಿಗೆ ಮಾತೇ ಬರುತ್ತಿಲ್ಲ ಎಂದ ಶಿವರಾಜ್​ಕುಮಾರ್​ | Shivaraj kumar Talks about fans Love on puneeth rajkumar


ಇಂದು (ನವೆಂಬರ್​ 9) ಅಭಿಮಾನಿಗಳು, ಗಣ್ಯರಿಗೆ ಪುನೀತ್ ರಾಜ್​ಕುಮಾರ್​ ಕುಟುಂಬ ಅನ್ನಸಂತರ್ಪಣೆ ಆಯೋಜನೆ ಮಾಡಿತ್ತು. ಸುಮಾರು 30 ಸಾವಿರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಸ್ವೀಕರಿಸಿದ್ದಾರೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರಕ್ಕೂ ಹೆಚ್ಚು ಚೇರ್, ಊಟದ ಟೇಬಲ್ ಹಾಕಲಾಗಿತ್ತು. ವೆಜ್​ ಮತ್ತು ನಾನ್​ವೆಜ್​ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವರಾಜ್​ಕುಮಾರ್​ ಕೂಡ ಊಟ ಬಡಿಸುವ ಕೆಲಸ ಮಾಡಿದ್ದರು. ಆ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಪುನೀತ್​ ರಾಜ್​ಕುಮಾರ್​ ಅವರ ಹೆಸರಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿ ಆಗಿದ್ದರು. ಈ ಮೂಲಕ ಪುನೀತ್​ ಅಭಿಮಾನಿ ಬಳಗ ಎಷ್ಟು ದೊಡ್ಡದಿತ್ತು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಿಚಾರ ಶಿವರಾಜ್​ಕುಮಾರ್​ ಅವರಿಗೆ ಖುಷಿ ನೀಡಿದೆ. ಈ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೊಡ್ಮನೆಯಿಂದ ಅನ್ನಸಂತರ್ಪಣೆ; ಪುನೀತ್​ ಹೆಸರಲ್ಲಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ

TV9 Kannada


Leave a Reply

Your email address will not be published.