ಅಭಿಮಾನಿಗಳ ಮುಂದೇ ‘ಕಬ್ಜ’ ಪೋಸ್ಟರ್​​.. ಹಲ್​​ಚಲ್​ ಎಬ್ಬಿಸಿದ ಉಪೇಂದ್ರ, ಸುದೀಪ್ ಲುಕ್

ಅಭಿಮಾನಿಗಳ ಮುಂದೇ ‘ಕಬ್ಜ’ ಪೋಸ್ಟರ್​​.. ಹಲ್​​ಚಲ್​ ಎಬ್ಬಿಸಿದ ಉಪೇಂದ್ರ, ಸುದೀಪ್ ಲುಕ್

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ವಿನೂತನ ಶೈಲಿಯ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

ಸಿನಿಮಾದಲ್ಲಿ ರಿಯಲ್​ಸ್ಟಾರ್​ ಉಪೇಂದ್ರ, ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್​ ಪ್ರೇಕ್ಷಕರನ್ನ ರಂಜಿಸಲಿದ್ದು, ಖ್ಯಾತ ನಿರ್ದೇಶಕ ಆರ್​. ಚಂದ್ರು ಚಿತ್ರಕ್ಕೆ ಆ್ಯಕ್ಷನ್​ಕಟ್​ ಹೇಳಿದ್ದಾರೆ. ಮುಕುಂದ ಮುರಾರಿ ಚಿತ್ರದ ನಂತರ ಉಪೇಂದ್ರ, ಸುದೀಪ್​ ಜೋಡಿ ಕಬ್ಜ ಚಿತ್ರದಲ್ಲಿ ಒಂದಾಗಿದ್ದು, ಕಬ್ಜ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಖ್ಯಾತ ನಿರ್ದೇಶಕ ಆರ್ ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆರ್.ಚಂದ್ರು ಅವರ ನಿರ್ದೇಶನ ಅಂದ ಮೇಲೆ ಅದ್ಧೂರಿತನಕ್ಕೆ ಯಾವುದೇ ಕೊರತೆ ಇಲ್ಲ. ಈಗಾಗಲೇ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಾದ ಕೆ.ಜಿ.ಎಫ್ 2 ಹಾಗೂ ಕಬ್ಜ ಚಿತ್ರಗಳ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿರುವ ಅದ್ಧೂರಿ ಸೆಟ್​ ಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

 

The post ಅಭಿಮಾನಿಗಳ ಮುಂದೇ ‘ಕಬ್ಜ’ ಪೋಸ್ಟರ್​​.. ಹಲ್​​ಚಲ್​ ಎಬ್ಬಿಸಿದ ಉಪೇಂದ್ರ, ಸುದೀಪ್ ಲುಕ್ appeared first on News First Kannada.

Source: newsfirstlive.com

Source link