‘ಅಭಿಮಾನಿ ಜತೆ ಸ್ಟಾರ್​ ನಟನ ಮದುವೆ’ ಅಂತ ಹಬ್ಬಿತ್ತು ಸುದ್ದಿ; ಆದ್ರೆ ಅಲ್ಲಿ ನಡೆದಿದ್ದೇ ಬೇರೆ | Kartik Aaryan remembers a fake news about his marriage with fan


‘ಅಭಿಮಾನಿ ಜತೆ ಸ್ಟಾರ್​ ನಟನ ಮದುವೆ’ ಅಂತ ಹಬ್ಬಿತ್ತು ಸುದ್ದಿ; ಆದ್ರೆ ಅಲ್ಲಿ ನಡೆದಿದ್ದೇ ಬೇರೆ

ಅಭಿಮಾನಿಗಳ ಜೊತೆ ಕಾರ್ತಿಕ್​ ಆರ್ಯನ್

ಸೆಲೆಬ್ರಿಟಿಗಳ ಲೈಫ್​ ಅಷ್ಟು ಸುಲಭವಲ್ಲ. ಅವರು ಏನೇ ಮಾಡಿದ್ರೂ ಸುದ್ದಿ ಆಗುತ್ತದೆ. ಅದರಲ್ಲೂ ಖಾಸಗಿ ಜೀವನದ ಬಗ್ಗೆ ಅವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಲವ್​, ಡೇಟಿಂಗ್​, ಬ್ರೇಕಪ್​, ಮದುವೆ, ಮಕ್ಕಳು, ಡಿವೋರ್ಸ್​ ಮುಂತಾದ ವಿಚಾರಗಳಲ್ಲಿ ನಟ-ನಟಿಯರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ ಕೆಲವೊಮ್ಮೆ ಅವರು ಸುಳ್ಳು ಸುದ್ದಿಯ (Fake News) ಕಾಟಕ್ಕೆ ಒಳಗಾಗಬೇಕಾದ ಪರಿಸ್ಥಿತಿಯೂ ಎದುರಾಗುತ್ತದೆ. ಖ್ಯಾತ ನಟ ಕಾರ್ತಿಕ್​ ಆರ್ಯನ್​ (Kartik Aaryan) ಅವರ ವಿಚಾರದಲ್ಲಿಯೂ ಒಮ್ಮೆ ಹಾಗಾಗಿತ್ತು. ಅದನ್ನು ಈಗ ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಅಭಿಮಾನಿಯ ಜೊತೆ ಕಾರ್ತಿಕ್​ ಆರ್ಯನ್​ ಮದುವೆ (Marriage) ನಡೆದಿದೆ ಎಂದು ಸುದ್ದಿ ಪ್ರಕಟಿಸಲಾಗಿತ್ತು. ಆ ಸುದ್ದಿ ನೋಡಿ ಕಾರ್ತಿಕ್​ ಆರ್ಯನ್ ಅವರು ಜೋರಾಗಿ ನಕ್ಕಿದ್ದರು. ಅಭಿಮಾನಿಯನ್ನು ಮದುವೆ ಆಗುವ ಯಾವ ಉದ್ದೇಶವೂ ಅವರಿಗೆ ಇರಲಿಲ್ಲ. ಆ ಬಗ್ಗೆ ಅವರು ಯಾವ ಪತ್ರಿಕೆಯ ಜೊತೆಗೂ ಮಾತನಾಡಿರಲಿಲ್ಲ. ಆದರೂ ಸಹ ಅಂಥದ್ದೊಂದು ಸುದ್ದಿ ಪ್ರಕಟ ಆಗಿದ್ದು ವಿಪರ್ಯಾಸ. ಬಾಲಿವುಡ್​ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್​ ಆರ್ಯನ್​ ಅವರು ಈ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಆ ರೀತಿ ಫೇಕ್​ ಮದುವೆ ಸುದ್ದಿ ಪ್ರಕಟವಾಗಲು ಕಾರಣ ಏನು ಎಂಬುದನ್ನು ಕಾರ್ತಿಕ್​ ಆರ್ಯನ್​ ವಿವರಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಸಿನಿಮಾವೊಂದರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮಕ್ಕೆ ಬಂದಿದ್ದ ಯುವತಿಯೊಬ್ಬಳು ಕಾರ್ತಿಕ್​ ಆರ್ಯನ್​ ಅವರನ್ನು ಮದುವೆ ಆಗುವ ಹಂಬಲ ವ್ಯಕ್ತಪಡಿಸಿದ್ದಳು. ಅಷ್ಟನ್ನು ಮಾತ್ರ ಕೇಳಿಸಿಕೊಂಡ ಪತ್ರಕರ್ತರೊಬ್ಬರು ಮರುದಿನ ಸುದ್ದಿ ಪ್ರಕಟಿಸಿಬಿಟ್ಟಿದ್ದರು.

‘ಅಭಿಮಾನಿಯ ಜೊತೆ ಕಾರ್ತಿಕ್​ ಆರ್ಯನ್​ ಮದುವೆ’ ಎಂದು ಪ್ರಕಟವಾದ ಸುದ್ದಿ ನೋಡಿ ಕಾರ್ತಿಕ್​ ಆರ್ಯನ್​ ಅವರು ಬಿದ್ದು ಬಿದ್ದು ನಕ್ಕಿದ್ದರಂತೆ. ಆ ಘಟನೆಯನ್ನು ಈಗ ಅವರು ಮತ್ತೆ ನೆನಪಿಸಿಕೊಂಡಿದ್ದಾರೆ. ಕಾರ್ತಿಕ್​ ಆರ್ಯನ್​ ಕುರಿತಂತೆ ಅನೇಕ ಅಂತೆ-ಕಂತೆಗಳು ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿವೆ.

ಕಾರ್ತಿಕ್​ ಆರ್ಯನ್​ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರಣ್​ ಹಾಗೂ ಕಾರ್ತಿಕ್​ ನಡುವೆ ಉಂಟಾದ ಸಣ್ಣ ಕಿರಿಕ್​ನಿಂದ ಕಾರ್ತಿಕ್​ ಹೊರ ನಡೆದಿದ್ದರು. ಇದಾದ ನಂತರದಲ್ಲಿ ಕಾರ್ತಿಕ್​ಗೆ ಅದೃಷ್ಟ ಕೈ ಕೊಟ್ಟಿತು. ಶಾರುಖ್​ ಖಾನ್​ ನಿರ್ಮಾಣ ಸಂಸ್ಥೆ ರೆಡ್​ ಚಿಲ್ಲೀಸ್​ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಅಲ್ಲಿಂದ ಅವರಿಗೆ ಗೇಟ್​ ಪಾಸ್​ ನೀಡಲಾಯಿತು.

TV9 Kannada


Leave a Reply

Your email address will not be published. Required fields are marked *