ಬೆಂಗಳೂರು: ರಕ್ತದಾನ ಮಹಾದಾನ ಅಂತಾರೆ.. ರಕ್ತದಾನ ಕೇವಲ ರಕ್ತದಾನವಲ್ಲ ಬದಲಿಗೆ ಅದು ಜೀವದಾನ.. ಅದೆಷ್ಟೋ ನತದೃಷ್ಟರು ಸರಿಯಾದ ಸಮಯಕ್ಕೆ ತಮ್ಮ ಗ್ರೂಪ್ಪಿನ ರಕ್ತ ಸಿಗದೇ ಸಾವನ್ನಪ್ಪಿದ ಉದಾಹರಣೆಗಳು ಇವೆ. ಇಂಥ ನೋವು ಯಾರಿಗೂ ಬರಬಾರದು ಅನ್ನೋ ಸದುದ್ದೇಶದಿಂದ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಇಂದು ಸಮರೋಪಾದಿಯಲ್ಲಿ ರಕ್ತದಾನ ಮಾಡಿದ್ದಾರೆ
ಯೆಸ್..ಪುನೀತ್ ರಾಜ್ ಕುಮಾರ್ ತಮ್ಮ ಪ್ರೀತಿಯ ಅಭಿಮಾನಿಗಳಿಂದ ಭೌತಿಕವಾಗಿ ದೂರವಾಗಿ 12 ದಿನಗಳು ಕಳೆದಿದೆ. ನಿನ್ನೆ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಿದ್ದ ಡಾ.ರಾಜ್ಕುಟುಂಬಸ್ಥರು ಇಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಈ ವೇಳೆ ನಡೆದ ಸ್ವಯಂ ರಕ್ತದಾನ ಮಾಡಿದ್ದಾರೆ..

ಈ ಕುರಿತು ಮಾಹಿತಿ ನೀಡಿರುವ ಲಯನ್ಸ್ ಕ್ಲಬ್ ಛೇರ್ ಮನ್ ಪ್ರಕೃತಿ ಪ್ರಸನ್ನ ಅವರು, ಇಂದು 355ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಯುನಿಟ್ ರಕ್ತದಾನ ಸಂಗ್ರಹವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಜನಕ್ಕೆ ರಕ್ತ ,ನೇತ್ರದಾನ ಅರ್ಜಿ ಸ್ವೀಕಾರ ಮಾಡಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಬೆಳಗ್ಗೆ ಅನ್ನಸಂತರ್ಪಣೆ ಸ್ಥಳಕ್ಕೆ ಆಗಮಿಸಿದ್ದ ಶಿವರಾಜ್ಕುಮಾರ್ ಅವರು ಭಾವುಕರಾಗಿ ಕಣ್ಣೀರಿಡುತ್ತಲೇ ಅಭಿಮಾನಿಗಳಿಗೆ ಊಟ ಬಡಿಸಿದರು. ಆ ಬಳಿಕ ಶಿವಣ್ಣ ಕೂಡ ರಕ್ತದಾನ ಕಾರ್ಯಕ್ರಮದಲ್ಲಿ ಭಾಗಿಯದರು. ಶಿವಣ್ಣ ಅವರ ಬಳಿಕ ಅನ್ನ ಸಂತರ್ಪಣೆ ಮಾಡೋ ಸ್ಥಳಕ್ಕೆ ಆಗಮಿಸಿದ ಯುವರಾಜ್ಕುಮಾರ್ ಅವರು ಕೂಡ ರಕ್ತದಾನ ಮಾಡಿದರು. ಅಪ್ಪು ಅಗಲಿಕೆಯ ನೋವಿನಲ್ಲೂ ಸ್ವಯಂ ರಕ್ತದಾನ ಶಿಬಿರದಲ್ಲಿ ಭಾಗಿಯಾದ ಶಿವಣ್ಣ, ಯುವರಾಜ್ಕುಮಾರ್ ಅಭಿಮಾನಿಗಳಿಗೆ ಮಾದರಿಯಾಗಿ ನಿಂತರು. ಅಲ್ಲದೇ ತಮ್ಮನ್ನು ನೋಡಲೇ ಬೇಕು ಎಂದು ಬಂದಿದ್ದ ಕೆಲ ಅಭಿಮಾನಿಗಳನ್ನ ಭೇಟಿಯಾಗಿ ಅವರನ್ನು ಖುಷಿ ಪಡಿಸೋ ಕಾರ್ಯ ಮಾಡಿದರು.