ನ್ಯೂಜಿಲೆಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಾಗೂ ಇಂಗ್ಲೆಂಡ್​​ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿರುವ ಟೀಮ್ ಇಂಡಿಯಾ, ಸದ್ಯ ಮುಂಬೈನಲ್ಲಿ ಕಠಿಣ ಕ್ವಾರಂಟೀನ್​​ನಲ್ಲಿದೆ. ಜೂನ್​.2ರಂದು ಇಂಗ್ಲೆಂಡ್​ ಪ್ರಯಾಣ ಬೆಳಸಲಿರುವ 20 ಸದಸ್ಯರ ತಂಡ, ಬಯೋ ಬಬಲ್​ನಲ್ಲೇ ಕಠಿಣ ಅಭ್ಯಾಸ ನಡೆಸುತ್ತಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ಗಾಗಿ ನೇರ ಸೌತ್​ಹ್ಯಾಂಪ್ಟನ್​​ಗೆ ತೆರಳಲಿರುವ ಟೀಮ್ ಇಂಡಿಯಾ, ಇಂಗ್ಲೆಂಡ್​​ನಲ್ಲಿ 10 ದಿನಗಳ ಕ್ವಾರಂಟೀನ್​ಗೆ ಒಳಪಡಲಿದೆ. ಆದ್ರೆ, ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಸಜ್ಜಾಗಿತ್ತಿರೋ ಟೀಮ್ ಇಂಡಿಯಾ ಆಟಗಾರರ ಅಭ್ಯಾಸಕ್ಕೆ ವಿಶೇಷ ಜರ್ಸಿ ನೀಡಲಾಗಿದ್ದು, ಹೊಸ ಜರ್ಸಿಯಲ್ಲಿ ಆಟಗಾರರ ಸ್ಟೈಲಿಶ್​ ಲುಕ್​​ ಕ್ರಿಕೆಟ್ ಅಭಿಮಾನಿಗಳ ಕಣ್ಮನ ಸೆಳೆದಿದೆ.

 

The post ಅಭ್ಯಾಸಕ್ಕೆ ಹೊಸ ಜರ್ಸಿ, ಸ್ಟೈಲಿಶ್ ಲುಕ್​ನಲ್ಲಿ ಆಟಗಾರರು ಮಿಂಚು..! appeared first on News First Kannada.

Source: newsfirstlive.com

Source link