ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಮುನ್ನ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿ ಆಡಿ ಸಿದ್ಧತೆ ನಡೆಸಲಿದ್ದರೆ, ಟೀಮ್ ಇಂಡಿಯಾ ಹೆಚ್ಚಿನ ಸಿದ್ಧತೆ ಇಲ್ಲದೆ ಕಣಕ್ಕಿಳಿಯುತ್ತಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿರುವ ಅದು ಯಾವುದು ತಂಡದ ಸಾಮರ್ಥ್ಯದ ಮೇಲೆ ಪರಿಣಾಮ ಬೀರದು ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೊಹ್ಲಿ, ಸರಿಯಾಗಿ ವೇಳಾಪಟ್ಟಿ ರೂಪುಗೊಳ್ಳದ ಕಾರಣ ಹಿಂದೆಯೂ ನಾವು ಕೇವಲ 3 ದಿನ ಮುನ್ನ ಪ್ರವಾಸಕ್ಕೆ ತೆರಳಿ ಆಡಿದ್ದೇವೆ.

ಇಂಗ್ಲೆಂಡ್‌ನಲ್ಲಿ ನಾವು ಇದೇ ಮೊದಲ ಬಾರಿ ಆಡುತ್ತಿಲ್ಲ. ಅಲ್ಲಿನ ವಾತಾವರಣ ನಮಗೂ ಗೊತ್ತಿದೆ. ಪಂದ್ಯಕ್ಕೆ ಮುನ್ನ 4 ಅವಧಿಗಳ ಅಭ್ಯಾಸ ಲಭಿಸಿದರೆ ಅದೇ ಸಾಕಾಗುತ್ತದೆ. ಭಾರತ ಅಥವಾ ಭಾರತ ಎ ಪರ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರೇ ತಂಡದಲ್ಲಿದ್ದಾರೆ. ಆದ್ದರಿಂದ ಅಲ್ಲಿನ ಪರಿಸ್ಥಿತಿಗೆ ಆಟಗಾರರು ಬೇಗ ಒಗ್ಗಿಕೊಳ್ಳಲಿದ್ದಾರೆ. ಮನಸ್ಥಿತಿ ಚೆನ್ನಾಗಿದ್ದರೆ ಎಲ್ಲವೂ ಸರಿಹೋಗುತ್ತದೆ ಎಂದು ತಿಳಿಸಿದ್ದಾರೆ.

The post ಅಭ್ಯಾಸದ ಕೊರತೆ ತಂಡದ ಮೇಲೆ ಪರಿಣಾಮ ಬೀರಲ್ಲ- ಕೊಹ್ಲಿ appeared first on News First Kannada.

Source: newsfirstlive.com

Source link