ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಟೀಮ್ ಇಂಡಿಯಾ, ಭರ್ಜರಿ ತಾಲೀಮು ನಡೆಸ್ತಿದೆ. ಡುರ್ಹ್ಯಾಮ್‌ನಲ್ಲಿ ಅಭ್ಯಾಸ ಆರಂಭಿಸಿರುವ ವಿರಾಟ್ ಸಾರಥ್ಯದ ಟೀಮ್ ಇಂಡಿಯಾ, ಜುಲೈ 20ರಂದು ಆರಂಭವಾಗಲಿರುವ ಕೌಂಟಿ ಸೆಲೆಕ್ಟ್‌ ಇಲೆವೆನ್‌ ತಂಡದ ವಿರುದ್ಧ 3 ದಿನಗಳ ಕಾಲ ಮೊದಲ ಅಭ್ಯಾಸ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆ ಮೂಲಕ ಇಂಗ್ಲೆಂಡ್‌ ವಿರುದ್ಧ ಆಗಸ್ಟ್ 4 ರಿಂದ ಆರಂಭವಾಗಲಿರುವ ಟೆಸ್ಟ್‌ ಸರಣಿಗೆ, ತಯಾರಿ ನಡಸಲು ಟೀಮ್ ಇಂಡಿಯಾಕ್ಕೆ ನೆರವಾಗಲಿದೆ. ಇನ್ನು ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿ ಆಗಸ್ಟ್‌ 4ರಿಂದ ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಹೊಂದಿದೆ. ಇತ್ತೀಚಿಗೆ ಟೀಮ್ ಮ್ಯಾನೇಜ್​ಮೆಂಟ್​​ ಹಾಗೂ ಸೆಲೆಕ್ಟರ್ಸ್​ ನಡುವೆ ಎದ್ದಿದ್ದ ಎಲ್ಲಾ ವಿವಾಧಗಳಿಗೂ, ಕೊಹ್ಲಿ ಬಾಯ್ಸ್​ ಫುಲ್​ಸ್ಟಾಪ್ ಹಾಕಿ ಟೆಸ್ಟ್ ಸರಣಿ ಮೇಲೆ ಗಮನ ಹರಿಸಲು ಮುಂದಾಗಿದ್ದಾರೆ.

The post ಅಭ್ಯಾಸ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ..! appeared first on News First Kannada.

Source: newsfirstlive.com

Source link