ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಟೀಮ್​ ಇಂಡಿಯಾದಲ್ಲಿ ಕಾಣಿಸಿಕೊಂಡ ಮಧ್ಯ ಕ್ರಮಾಂಕದ ಬ್ಯಾಟಿಂಗ್​ ಗೊಂದಲಕ್ಕೆ, ಇದೀಗ ಉತ್ತರ ಸಿಕ್ಕಂತಾಗಿದೆ. ಇಂಗ್ಲೆಂಡ್​ನ ಕೌಂಟಿ ಸೆಲೆಕ್ಟ್​ ಇಲೆವೆನ್​​ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್​.ರಾಹುಲ್​, ಭರ್ಜರಿ ಶತಕ ಸಿಡಿಸಿ ಕಮ್​ಬ್ಯಾಕ್​ಗೆ ತಾನು ತಯಾರಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಚೇತೇಶ್ವರ್​ ಪೂಜಾರ, ಅಜಿಂಕ್ಯಾ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಸಂಪೂರ್ಣ ವೈಫಲ್ಯ, ತಂಡಕ್ಕೆ ಹಿನ್ನಡೆಯಾಗುತ್ತಿದೆ. ಜೊತೆಗೆ ಅಭ್ಯಾಸ ಪಂದ್ಯದಲ್ಲೂ ಪೂಜಾರ ರನ್​​ ಗಳಿಸೋಕೆ ವಿಫಲರಾದರು. ರಹಾನೆ ಇಂಜುರಿಯಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಆದರೀಗ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ರಾಹುಲ್, ಮಿಂಚಿನ ಪ್ರದರ್ಶನ ನೀಡಿದ್ದು, ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿಗಿಳಿದಿದ್ದಾರೆ.

ಆರಂಭದಲ್ಲಿ ಸತತ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ, ರಾಹುಲ್​ – ರವೀಂದ್ರ ಜಡೇಜಾ ಜೋಡಿ ತಂಡಕ್ಕೆ ನೆರವಾದರು. 150 ಎಸೆತಗಳನ್ನ ಎದುರಿದ ರಾಹುಲ್​, 11 ಬೌಂಡರಿ, 1 ಸಿಕ್ಸರ್​ ನೆರವಿನಿಂದ 101 ರನ್​ ಕಲೆಹಾಕಿದ್ದಾರೆ. ರಾಹುಲ್​​ರ ಈ ಅದ್ಭುತ ಪ್ರದರ್ಶನ ತಂಡದಲ್ಲಿ ಪೈಪೋಟಿಯನ್ನ ಸೃಷ್ಟಿಸಿದೆ. ರೋಹಿತ್​ ಜೊತೆ ಆರಂಭಿಕರಾಗಿ ಮಯಾಂಕ್​​ ಕಣಕ್ಕಿಳಿಯೋದು ಖಾತ್ರಿಯಾಗಿದೆ. ಆದರೆ ರಾಹುಲ್​ ಕೂಡ ಸ್ಪರ್ಧೆಯಲ್ಲಿದ್ದೇನೆ ಅನ್ನೋದನ್ನ ಸೂಚಿಸಿದ್ದಾರೆ. ಹಾಗೆಯೇ ರಾಹುಲ್ ಪರ್ಫಾಮೆನ್ಸ್​, ಪಂತ್​ಗೂ ತಲೆ ನೋವು ತರಿಸಿದೆ. ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

The post ಅಭ್ಯಾಸ ಪಂದ್ಯದಲ್ಲಿ ರಾಹುಲ್ ಶತಕ- ಟೆಸ್ಟ್ ಸರಣಿಯಲ್ಲಿ ಕನ್ನಡಿಗನ ಸ್ಥಾನ ಫಿಕ್ಸ್​..! appeared first on News First Kannada.

Source: newsfirstlive.com

Source link