ಈತ ತಂಡದಲ್ಲೆನೋ ಸ್ಥಾನ ಪಡೆದುಕೊಳ್ತಿದ್ದ. ಆದರೆ ಪ್ಲೇಯಿಂಗ್​​ ಇಲೆವೆನ್​​​ನಲ್ಲಿ ಮಾತ್ರ ಕಾಣಿಸಿಕೊಳ್ತಿರಲಿಲ್ಲ. ಹೀಗೆಯೇ ಎರಡು ವರ್ಷಗಳ ಕಾಲ ದೂಡಿರುವ ಈ ಆಟಗಾರ, ಇದೀಗ ಅಭ್ಯಾಸ ಪಂದ್ಯದಲ್ಲಿ ಅದ್ಭತ ಪ್ರದರ್ಶನ ತೋರುವ ಮೂಲಕ, ಕಮ್​​ಬ್ಯಾಕ್​ ಮಾಡೋ ನಿರೀಕ್ಷೆಯಲ್ಲಿದ್ದಾರೆ.

ಟೀಮ್​ ಇಂಡಿಯಾದಲ್ಲಿ ಸದ್ಯ, ಗೊಂದಲಗಳ ಸರಮಾಲೆ ಸೃಷ್ಟಿಯಾಗಿದೆ. ಒಂದೆಡೆ ಆಟಗಾರರ ಇಂಜುರಿ, ಮತ್ತೊಂದೆಡೆ ಕಳಪೆ ಪ್ರದರ್ಶನ.!!! ಇದು ಕ್ಯಾಪ್ಟನ್​​ ಕೊಹ್ಲಿಯನ್ನ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಆದರೀಗ ತಂಡದಲ್ಲಿ ಕಾಣಿಸಿಕೊಂಡ ಸಮಸ್ಯೆಗೆ ಕೆ.ಎಲ್​​.ರಾಹುಲ್​​​​ ರೂಪದಲ್ಲಿ ಪರಿಹಾರ ಸಿಕ್ಕಿದ್ದು, ಮಿಡಲ್​ ಆರ್ಡರ್​​​ಗೆ ಬಲ ಬಂದಂತಾಗಿದೆ.

ರಾಹುಲ್ ಶತಕ- ಪೂಜಾರ, ರಹಾನೆಗೆ ನಡುಕ..!
ರಿಷಭ್​​ ಪಂತ್​​ಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದ ಕೆ.ಎಲ್​​​.ರಾಹುಲ್​,​ ಶತಕ ಸಿಡಿಸಿ ಭರವಸೆ ಮೂಡಿಸಿದ್ದಾರೆ. ಇದ್ರಿಂದ ಇಂಗ್ಲೆಂಡ್​ ಸರಣಿಯಲ್ಲಿ ರಾಹುಲ್​ ಕಣಕ್ಕಿಳಿಯೋದು ಬಹುತೇಕ ಕನ್ಫರ್ಮ್​ ಆಗಿದೆ. ಆ ಮೂಲಕ ಹಲವು ಸರಣಿಗಳಲ್ಲಿ ವೈಫಲ್ಯ ಅನುಭವಿಸಿದ ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ ಇಬ್ಬರಲ್ಲಿ ಒಬ್ಬರ ಸ್ಥಾನಕ್ಕೆ, ಕುತ್ತು ಬಂದಿದೆ ಎನ್ನಲಾಗಿದೆ.

ಮಿಡಲ್ ಆರ್ಡರ್​​ನಲ್ಲಿ ರಾಹುಲ್ ಫಿಕ್ಸ್ ಆಗ್ತಾರಾ..?
ಇಂಗ್ಲೆಂಡ್​ ಕೌಂಟಿ ಸೆಲೆಕ್ಟ್​​ ಇಲೆವೆನ್​ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ, ಪೂಜಾರ ವೈಫಲ್ಯ ಅನುಭವಿದ್ದಾರೆ. ಅತ್ತ ಇಂಜುರಿಯಿಂದಾಗಿ ರಹಾನೆ ಕೂಡ ಬೆಂಚ್​ ಕಾದಿದ್ದಾರೆ. ಇದಿಷ್ಟೇ ಅಲ್ಲ, ಆಸ್ಟ್ರೇಲಿಯಾ-ಇಂಗ್ಲೆಂಡ್​ ಟೆಸ್ಟ್​ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​​ನಲ್ಲೂ, ಈ ಇಬ್ಬರು ಸ್ಥಿರ ಪ್ರದರ್ಶನ ತೋರಿಲ್ಲ. ಹಾಗಾಗಿ ಇಂಗ್ಲೆಂಡ್​​ ಸರಣಿಯಲ್ಲಿ ಮಿಡಲ್​ ಆರ್ಡರ್​​ ಬಲ ತುಂಬೋದಕ್ಕೆ, ಕನ್ನಡಿಗ ರಾಹುಲ್​​ರನ್ನ ಕಣಕ್ಕಿಳಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ಮಿಡಲ್​ ಆರ್ಡರ್​ಗೆ ಸಾಕಾಗುತ್ತಾ ರಾಹುಲ್ ಸಿಡಿಸಿದ ಶತಕ.?
ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರಾಹುಲ್​, ಅಗ್ನಿಪರೀಕ್ಷೆಯಲ್ಲೇನೋ ಪಾಸಾಗಿದ್ದಾರೆ. ಆದರೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದರೆ ಈ ಶತಕ ಸಾಕಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದರಿಂದ 2019ರ ಬಳಿಕ ಒಂದೂ ಟೆಸ್ಟ್ ಆಡದ ಸ್ಪೆಷಲಿಸ್ಟ್​​ ಬ್ಯಾಟ್ಸ್​​ಮನ್​​​, ಈ ಬಾರಿಯಾದರೂ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ ಇಲ್ವೋ ಅನ್ನೋದನ್ನ ಕಾದು ನೋಡಬೇಕಿದೆ.

The post ಅಭ್ಯಾಸ ಪಂದ್ಯದಲ್ಲಿ ರಾಹುಲ್​ ಮಿಂಚಿನಾಟ.. ಇಂಗ್ಲೆಂಡ್ ಸರಣಿಗೆ ​ಆಡೋದು ಕನ್ಫರ್ಮ್..? appeared first on News First Kannada.

Source: newsfirstlive.com

Source link