ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗ್ತಿರುವ ರೋಹಿತ್​ ಶರ್ಮಾ ಪಡೆ, ಕೌಂಟಿ ಸೆಲೆಕ್ಟ್ ತಂಡದ ವಿರುದ್ಧ ಅಭ್ಯಾಸ ಪಂದ್ಯ ಆರಂಭಿಸಿದೆ. ಡುರ್ಹ್ಯಾಮ್​ನ ರಿವರ್‌ಸೈಡ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಆದರೆ ಈ ಪಂದ್ಯದಲ್ಲಿ ಭಾರತದವರೇ, ಟೀಮ್​ ಇಂಡಿಯಾಗೆ ಪ್ರತಿಸ್ಪರ್ಧಿಗಳಾಗಿದ್ದು, ಅಚ್ಚರಿ ಮೂಡಿಸಿದೆ. ಹೌದು..! ಇಂಗ್ಲೆಂಡ್​ ಕೌಂಟಿ ಸೆಲೆಕ್ಟ್​ ಇಲೆವೆನ್​​ ತಂಡದಲ್ಲಿ ಭಾರತದ ಆಟಗಾರರು ಕಾಣಿಸಿಕೊಂಡಿದ್ದಾರೆ. ರದ್ದಾದ ಐಪಿಎಲ್​ನಲ್ಲಿ ವಿಕೆಟ್​ ಟೇಕರ್​ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಆವೇಶ್ ​ಖಾನ್​ ಕೌಂಟಿ ತಂಡದ ಪರ ಕಣಕ್ಕಿಳಿದಿದ್ದಾರೆ. ಇನ್ನು ವಾಷಿಂಗ್ಟನ್​ ಸುಂದರ್ ಕೂಡ ಭಾರತಕ್ಕೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

ಆದರೆ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 9.5 ಓವರ್​​ ಎಸೆದಿರುವ ಆವೇಶ್​ 41 ರನ್​ ನೀಡಿದ್ದು, ಯಾವುದೇ ವಿಕೆಟ್​ ಪಡೆಯಲಿಲ್ಲ. ಆದರೆ ಸುಂದರ್​​​ ಬೌಲಿಂಗ್​ ಮಾಡಲಿಲ್ಲ. ಇಂಗ್ಲೆಂಡ್​ ಸರಣಿಗೆ ಆವೇಶ್​​ ಖಾನ್​ ನೆಟ್​ ಬೌಲರ್ ಆಗಿ ಆಯ್ಕೆಯಾಗಿದ್ದರೆ, ಸುಂದರ್​ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಬ್ಯಾಟಿಂಗ್​ ಆರಂಭಿಸಿರುವ ಭಾರತ, ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 306 ರನ್​ ಕಲೆಹಾಕಿದೆ. ಇಂದು ಕೂಡ ಬ್ಯಾಟಿಂಗ್​ ಮುಂದುವರೆಸಲಿದೆ.

The post ಅಭ್ಯಾಸ ಪಂದ್ಯ ನೋಡಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಶಾಕ್..! appeared first on News First Kannada.

Source: newsfirstlive.com

Source link