ಕರ್ನಾಟಕ ಹೈಕೋರ್ಟ್
ಬೆಂಗಳೂರು: ಅಮೃತಮಹಲ್ ಕಾವಲ್ಗಳ (Amruth Mahal Kaval) ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಫೆಬ್ರವರಿ 8ರಂದು ಅಧಿಕಾರಿಗಳು ಖುದ್ದು ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಕರ್ನಾಟಕ ಹೈಕೋರ್ಟ್ (Karnataka high court) ಸೂಚನೆ ನೀಡಿದೆ. ಜತೆಗೆ ಪಶು ಸಂಗೋಪನೆ ಉಪ ನಿರ್ದೇಶಕರಿಗೂ ಹೈಕೋರ್ಟ್ ಫೆಬ್ರವರಿ 8 ರಂದು ಹಾಜರಾಗುವಂತೆ ತಿಳಿಸಿದೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಜಮೀನು ಒತ್ತುವರಿ ತೆರವುಗೊಳಿಸದೇ ಕೇವಲ ಸಭೆ ನಡೆಸಲಾಗಿದೆ. ಅಲ್ಲದೇ ಈ ಹಿಂದಿನ ಆದೇಶ ಪಾಲನೆ ಬಗ್ಗೆ ಸರ್ಕಾರದ (Government) ವರದಿ ತೃಪ್ತಿಕರವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶ ರದ್ದು
ಜನವರಿ 14 ರಂದು 6 ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಆದೇಶ ನೀಡಲಾಗಿತ್ತು. ಆದರೆ ಇಂದು (ಜನವರಿ 17) ಈ ವರ್ಗಾವಣೆ ಆದೇಶವನ್ನು ತಡೆದು ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿ ಆದೇಶ ಹೊರಡಿಸಿದೆ.
ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ
ಕೃಷಿ ವಿವಿಗಳ ಮೂಲಕ ರೈತರಿಗೆ ಅನುಕೂಲವಾಗುವಂತಹ ತಾಂತ್ರಿಕತೆ ಅಭಿವೃದ್ಧಿಪಡಿಸುವ ಕುರಿತು ಪರಿಶೀಲಿಸಲು ಉನ್ನತಾಧಿಕಾರ ಸಮಿತಿ ರಚನೆ ಮಾಡಲಾಗಿದೆ. ತೋಟಗಾರಿಕಾ ಸಚಿವರು, ಉಪಾಧ್ಯಕ್ಷರು, ಕೃಷಿ ವಿವಿಗಳ ವಿಸಿಗಳು, ಸದಸ್ಯರು ಸಮಿತಿಯಲ್ಲಿ ಭಾಗಿಯಾಗಿದ್ದಾರೆ.
ಹಾಸನ: ಕೊವಿಡ್ ಕೇಸ್ ಹೆಚ್ಚಿರುವ ಕಾಲೇಜುಗಳಿಗೆ ಮಾತ್ರ ರಜೆ: ಜಿಲ್ಲಾಧಿಕಾರಿ ಆರ್.ಗಿರೀಶ್
ಹಾಸನ ಜಿಲ್ಲೆಯಲ್ಲಿ 1 ವಾರ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ ಕೊವಿಡ್ ಕೇಸ್ ಹೆಚ್ಚಿರುವ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗುತ್ತದೆ. ಕೊರೊನಾ ಹೆಚ್ಚಾದರೆ ಶಾಲಾ ಕಾಲೇಜುಗಳಿಗೆ ರಜೆ ಅನಿವಾರ್ಯ. 3-4 ದಿನಗಳ ಕೊವಿಡ್ ಕೇಸ್ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕೊವಿಡ್ ಪ್ರಕರಣ ಹೆಚ್ಚಾದರೆ ಹಾಸ್ಟೆಲ್ಗಳನ್ನು ಸಿಸಿಸಿ ಮಾಡುತ್ತೇವೆ. ಈಗಾಗಲೇ ಕೊವಿಡ್ ಕೇರ್ ಸೆಂಟರ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 26.22 ಪಾಸಿಟಿವಿಟಿ ದರ ಇದೆ. ಜಿಲ್ಲೆಯಲ್ಲಿ 4000 ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ, 377 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿನಿತ್ಯ 4000 ರಿಂದ 5000 ಪಾಸಿಟಿವ್ ಕೇಸ್ಗಳು ಬರುವ ಸಾಧ್ಯತೆಯಿದೆ. ಕೊರೊನಾ ಹೆಚ್ಚಾದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವುದು ಅನಿವಾರ್ಯ. ಪ್ರತಿನಿತ್ಯ 5000 ಸಾವಿರ ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ನಿನ್ನೆ 6,600 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಇನ್ನೂ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಟೆಸ್ಟ್ ನಲ್ಲಿ ಶೇ.12 ಪಾಸಿಟಿವಿಟಿ ಬಂದಿದೆ. ಶೇ.100 ರಷ್ಟು ಮಂದಿಗೆ ಮೊದಲ ಡೋಸ್, ಶೇ.88 ರಷ್ಟು ಎರಡನೇ ಡೋಸ್ ನೀಡಲಾಗಿದೆ. 49,000 15 ರಿಂದ 18 ವಯೋಮಾನದವರು ಮೊದಲ ಡೋಸ್ ಪಡೆದಿದ್ದಾರೆ. ಈಗಾಗಲೇ ಸಿಸಿ ಸೆಂಟರ್ಗಳನ್ನು ಗುರುತು ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.