ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಒಂದಿಷ್ಟು ಚಟುವಟಿಕೆಗಳು ಗರಿಗೆದರಿವೆ. ಬಿಎಸ್​ ಯಡಿಯೂರಪ್ಪ ಅವರನ್ನ ಸಿಎಂ ಹುದ್ದೆಯಿಂದ ಕಳಗೆ ಇಳಿಸುವ ಬಗ್ಗೆ ಮಾತುಗಳು ಜೋರಾಗಿದ್ರೆ, ಮತ್ತೊಂದು ಕಡೆ ಕೆಲವ್ರು ತಮ್ಮ ಸ್ಥಾನದ ಬಗ್ಗೆ ಆತಂಕ ಶುರುವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸಚಿವ ಕೆಎಸ್​ ಈಶ್ವರಪ್ಪ, ಇಂದು ತುಂಬಾ ಜೋಶ್​​ನಲ್ಲಿದ್ದರು.

ವಿಧಾನಸೌಧದಲ್ಲಿ ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದ ಸಚಿವ ಈಶ್ವರಪ್ಪ ಅವರನ್ನ ‘ಏನ್ ಸರ್ ತುಂಬಾ ಖುಷಿಯಾಗಿದ್ದೀರಾ..?’ ಅಂತಾ ಮಾಧ್ಯಮಗಳು ಪ್ರಶ್ನೆ ಮಾಡಿದವು. ಅದಕ್ಕೆ ತಮಾಷೆಯಾಗಿ ಉತ್ತರಿಸಿದ ಈಶ್ವರಪ್ಪ.. ‘ಹೌದು.. ಅಮೃತಾಂಜನ ಇದ್ರೆ ಕೊಡಿ ಅಳ್ತೀನಿ’ ಎಂದು ನಗೆ ಚಟಾಕಿ ಹಾರಿಸಿದ್ರು.

ಇದೇ ವೇಳೆ ವಲಸೆ ಸಚಿವರು ರಾಜೀನಾಮೆ ನೀಡ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ.. ಪಾಪ ಆ 17 ಸಚಿವರು ಕನಸು ಮನಸ್ಸಿನಲ್ಲೂ ಇಂತಹ ಯೋಚನೆ ಮಾಡಿಲ್ಲ. ರಾಜೀನಾಮೆಯಂತಹ ವಿಚಾರವೇ ಬಂದಿಲ್ಲ. ಅವರು ನೂರಕ್ಕೆ ನೂರು ಬಿಜೆಪಿ ಜೊತೆಯೇ ಇದ್ದಾರೆ. ಬಿಜೆಪಿ ಜೊತೆಯೇ ಇರ್ತಾರೆ. ಇನ್ಯಾರಿಗೂ 17 ವಲಸಿಗ ಸಚಿವರ ರಾಜೀನಾಮೆ ಅಂತ ಕೇಳ್ಬೇಡಿ, ಅಂತದ್ದೇನೂ ಆಗೇ ಇಲ್ಲ ಎಂದರು.

The post ಅಮೃತಾಂಜನ ಕೊಡಿ ಅಳ್ತೀನಿ -ಸಚಿವ ಈಶ್ವರಪ್ಪ ಹೀಗ್ಯಾಕೆ ಅಂದ್ರು? appeared first on News First Kannada.

Source: newsfirstlive.com

Source link