ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ | CM Basavaraja Bommai inaugurated the Amrita Bharati Kannadadarati Campaign


ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡ & ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಾವರ್ಕರ್​ ಮತ್ತು ತಿಲಕರು ಮೊದಲ ಸ್ವಾತಂತ್ರ್ಯ ಹೋರಾಟಗಾರರು. ಅವರಿಗೆ ಸ್ವಾತಂತ್ರ್ಯ ಪಡೆಯಬೇಕೆಂಬ ಮೊದಲ ಆಲೋಚನೆ ಬಂದಿತ್ತು. ಇವರ ಆಲೋಚನೆಗೆ ಲಾಹೋರ್​ನಲ್ಲಿ ವೇಗ ಸಿಕ್ಕಿತು ಎಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫ್ರೀಂಡಪಾರ್ಕ್​ನಲ್ಲಿ ನಡೆಯುತ್ತಿರುವ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿದರು. ಲಾಹೋರ್ ಚಳವಳಿ ವೇಳೆ ಬ್ರಿಟಿಷರು ಲಾಠಿ ಪ್ರಹಾರ ಮಾಡಿದರು. ಲಾಲಾ ಲಜಪತ್ ರಾಯ್ ನೇತೃತ್ವದಲ್ಲಿ ಚಳವಳಿ ನಡೆದಿತ್ತು. ಇದರ ನಂತರ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದರು. ಗಾಂಧಿ ನೇತೃತ್ವದಲ್ಲಿ ಅನೇಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಬಾರ್ದೋಲಿಯಲ್ಲಿ ಪಟೇಲರು ಸತ್ಯಾಗ್ರಹದ ನೇತೃತ್ವ ವಹಿಸಿದರು. ಆಗ ನಮಗೆ ಉಳಿಗಾಲವಿಲ್ಲ ಅಂತ ಬ್ರಿಟಿಷರಿಗೆ ಮನವರಿಕೆ ಆಯ್ತು. ಚಂಪಾರಣ್ಯದಲ್ಲೂ ದುಡಿಯುವ ವರ್ಗ‌ ಬ್ರಿಟಿಷರ ವಿರುದ್ಧ ತಿರುಗಿ ಬಿತ್ತು. ಈ ಹೋರಾಟಗಳಲ್ಲಿ ಪಾಲ್ಗೊಂಡವರಿಗೆ ನನ್ನ ಸಲಾಂ ಎಂದರು.

ಮೊಘಲರು, ಬ್ರಿಟಿಷರಿಗೆ ನಮ್ಮ ಸ್ವಾಭಿಮಾನ ಬಿಟ್ಟು ಕೊಟ್ಟಿದ್ದೆವು. ಒಂದು ಸಾವಿರ ವರ್ಷಗಳ ಕಾಲ ನಮ್ಮ ಸ್ವಾಭಿಮಾನ ಬಿಟ್ಟು ಕೊಟ್ಟಿದ್ದೆವು. ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ನಾಡಿನ ಕೊಡುಗೆ ದೊಡ್ಡದಿದೆ. ಸರ್ಕಾರ ಅನಾಮಧೇಯ ಹೋರಾಟಗಾರರ ಪುಸ್ತಕವನ್ನು ಆ.15ರಂದು ಪ್ರಕಟಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್ ಮಾತನಾಡಿದ್ದು, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಠ್ಯದಲ್ಲಿ ಪಾಠ ಸೇರಿಸಿ. ಕರ್ನಾಟಕದ ಮೂಲದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕಿದೆ. ಬೆಂಗಳೂರಿನ ಕೆಲ ಸ್ಥಳಗಳಿಗೆ ಬ್ರಿಟಿಷರ ಹೆಸರುಗಳಿವೆ. ಕೆಲ ಆಸ್ಪತ್ರೆಗಳಿಗೂ ಬ್ರಿಟಿಷರ ಹೆಸರುಗಳಿವೆ. ಅವು ಬದಲಿಸುವ ಕೆಲಸ ಆಗಬೇಕು ಎಂದು ಸಿಎಂಗೆ ಸಂಸದ ಪಿ.ಸಿ ಮೋಹನ್ ಒತ್ತಾಯಿಸಿದರು.

ನಮ್ಮ ದೇಶ ಜ್ಞಾನಕ್ಕೆ ಒತ್ತು ಕೊಟ್ಟು ದೇಶ: ಸಚಿವ ಬಿ.ಸಿ. ನಾಗೇಶ್

ಕೊಪ್ಪಳ: ಜಿಲ್ಲೆಯ ಕೊಪ್ಪಳ, ಗಂಗಾವತಿ, ಅಳವಂಡಿಯಲ್ಲಿ ಅಭಿಯಾನ ನಡೆದಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನ ಉದ್ದೇಶಿಸಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿದ್ದು, ಸ್ವಾತಂತ್ರ್ಯ ಹೇಗೆ ಸಿಕ್ತು ಅನ್ನೋದು ನಾವು ಮುಂದಿನ ಪೀಳೆಗೆಗೆ ತಗೆದುಕೊಂಡು ಹೋಗಬೇಕು. ನಮ್ಮ ದೇಶ ಜ್ಞಾನಕ್ಕೆ ಒತ್ತು ಕೊಟ್ಟು ದೇಶ. ಕೆಲವರು ಈ ದೇಶದ ನೆಮ್ಮ ದಿ ಹಾಳು ಮಾಡಿದ್ರು. ಅಲೆಕ್ಸಾಂಡರ್​ನಿಂದ ಶುರುವಾದ ಆಕ್ರಮಣ ಬ್ರಿಟಿಷ್​ರಿಗೆ ಕೊನೆಯಾಯಿತು. ಅವರು ಯಾಕೆ ಬಂದರು ಅನ್ನೋದ ನಮಗೆ ಗೊತ್ತಿಲ್ಲ. ನಮ್ಮ ಪುಸ್ತಕಗಳು ಕೇವಲ ಸೋಲಿನ ಪಾಠ ಮಾಡಲಾಗಿದೆ. ಅಕ್ರಣಮ, ಅತ್ಯಾಚಾರ ಮಾಡೋದು ಈ ದೇಶದ ಮಣ್ಣಿಗೆ ಗೊತ್ತಿಲ್ಲ. ಇದು ಪರಕೀಯರಿಂದ ಬಂದಿದ್ದು, ಅವರು ಅಂದುಕೊಂಡ ಹಾಗೆ ಆಳ್ವಿಕೆ ಮಾಡೋಕೆ ನಮ್ಮ ದೇಶ ಬಿಡಲಿಲ್ಲ. ಗುರುಕುಲದ ಮೂಲಕ ವಿದ್ಯಾದಾನ ಮಾಡಿದ್ದಾರೆ ಎಂದು ಹೇಳಿದರು.

TV9 Kannada


Leave a Reply

Your email address will not be published. Required fields are marked *