ಬೆಂಗಳೂರು: ತಮ್ಮ ವಿರುದ್ಧ ಸಿಸಿಐ(Competition Commission of India) ತನಿಖೆ ಆದೇಶವನ್ನು ವಜಾಗೊಳಿಸುವಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಅಮೆಜಾನ್, ಫ್ಲಿಪ್​ಕಾರ್ಟ್ ಕಂಪನಿಗಳಿಗೆ ಹಿನ್ನಡೆಯಾಗಿದ್ದು ಎರಡೂ ಕಂಪನಿಗಳ ಅರ್ಜಿಗಳನ್ನ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾ. ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠದಿಂದ ಆದೇಶ ಹೊರಬಿದ್ದಿದೆ.

ಕಾಂಪಿಟೇಷನ್ ರೂಲ್ಸ್ ಬ್ರೇಕ್ ಆರೋಪದ ಹಿನ್ನೆಲೆ ಸಿಸಿಐ ಕಂಪೆನಿಗಳ ವಿರುದ್ಧ ತನಿಖೆಗೆ ಮುಂದಾಗಿತ್ತು.. ತಾನು ಸ್ಮಾರ್ಟ್‌ಫೋನ್‌ ಮಾರಾಟ ಮಾಡುವಾಗ ರೂಲ್ಸ್ ಬ್ರೇಕ್ ಮಾಡಿದ್ದು ಸ್ಪರ್ಧಾ ವಿರೋಧಿ ವರ್ತನೆ ಮಾಡ್ತಿದೆ ಅಂತಾ ತನಿಖೆ ನಡೆಸುವಂತೆ ಮಹಾ ನಿರ್ದೇಶಕರಿಗೆ ಸಿಸಿಐ ಆದೇಶಿಸಿತ್ತು. ಎರಡು ಕಂಪನಿ ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿಯಲ್ಲಿ ಬೆಲೆ ನಿಗದಿ ಮಾಡಿ.. ನಿಯಮಬಾಹಿರ ರಿಯಾಯಿತಿ ಘೋಷಣೆ ಮಾಡಿದ ಆರೋಪವಿತ್ತು. ಸ್ಪರ್ಧಾತ್ಮಕ ನಿಯಮಗಳಿಗೆ ವಿರುದ್ಧ ವ್ಯಾಪಾರದ ಆರೋಪ ಕೇಳಿಬಂದಿತ್ತು.

ಭಾರಿ ರಿಯಾಯಿತಿ, ಕೆಲ ಸೆಲೆಕ್ಟೀವ್ ಮಾರಾಟಗಾರರ ಲಿಸ್ಟ್ & ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಎಂದು ಸಿಸಿಐಗೆ ಈ ಹಿಂದೆ ದೆಹಲಿ ವ್ಯಾಪಾರ್ ಮಹಾಸಂಘ್‌ (ಡಿವಿಎಂ) ದೂರು ನೀಡಿತ್ತು. ಜನವರಿ 14 ರಂದು ಸಿಸಿಐ ತನಿಖೆಗೆ ಆದೇಶಿಸಿತ್ತು.. ತನಿಖೆ ಆದೇಶ ಪ್ರಶ್ನಿಸಿ ಅಮೆಜಾನ್ ಕರ್ನಾಟಕ ಹೈಕೋರ್ಟ್ ಗೆ ರಿಟ್ ಸಲ್ಲಿಸಿತ್ತು. ಇದಕ್ಕೆ ಈ ಹಿಂದೆ ಹೈಕೋರ್ಟ್ ತನಿಖೆಗೆ ತಡೆ ನೀಡಿತ್ತು.. ಅದಕ್ಕೆ ಎರಡು ಕಂಪನಿಗಳು ಮಧ್ಯಂತರ ಪರಿಹಾರ ಒದಗಿಸಿತ್ತು. ಸ್ವಲ್ಪ ಸಮಯದ ಬಳಿಕ ಫ್ಲಿಪ್‌ಕಾರ್ಟ್‌ಗೆ ಕೂಡ ಅದೇ ರೀತಿಯ ಪರಿಹಾರ ದೊರೆತಿತ್ತು.

The post ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಹಿನ್ನಡೆ: CCI ತನಿಖೆ ಆದೇಶ ವಜಾಗೊಳಿಸಲು ಹೈಕೋರ್ಟ್ ನಕಾರ appeared first on News First Kannada.

Source: newsfirstlive.com

Source link