ಅಮೆರಿಕದಲ್ಲಿ ಕ್ರಿಸ್‌ಮಸ್ ಮೆರವಣಿಗೆ ಮಧ್ಯೆ ನುಗ್ಗಿದ ಎಸ್​​ಯುವಿ; 5 ಸಾವು, 40 ಮಂದಿಗೆ ಗಾಯ | SUV Rams US Christmas Parade in the US state of Wisconsin on Sunday 5 Dead 40 Injured


ಅಮೆರಿಕದಲ್ಲಿ ಕ್ರಿಸ್‌ಮಸ್ ಮೆರವಣಿಗೆ ಮಧ್ಯೆ ನುಗ್ಗಿದ ಎಸ್​​ಯುವಿ; 5 ಸಾವು, 40 ಮಂದಿಗೆ ಗಾಯ

ಕ್ರಿಸ್‌ಮಸ್ ಮೆರವಣಿಗೆ ಮಧ್ಯೆ ನುಗ್ಗಿದ ಎಸ್​​ಯುವಿ

ವಾಷಿಂಗ್ಟನ್: ಅಮೆರಿಕದ ವಿಸ್ಕಾನ್ಸಿನ್ (Wisconsin) ರಾಜ್ಯದಲ್ಲಿ ಭಾನುವಾರ ಕ್ರಿಸ್‌ಮಸ್ ಮೆರವಣಿಗೆ (Christmas parade) ನಡುವೆ ಎಸ್​​ಯುವಿ  ನುಗ್ಗಿದ್ದು, ಐವರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿಲ್ವಾಕೀ( Milwaukee) ಉಪನಗರವಾದ ವೌಕೇಶಾ (Waukesha) ಪಟ್ಟಣದಲ್ಲಿ ಪ್ರೇಕ್ಷಕರು ವಾರ್ಷಿಕ ಸಂಪ್ರದಾಯವನ್ನು ವೀಕ್ಷಿಸುತ್ತಿದ್ದಂತೆ ಸಂಜೆ 4:30ರ(2230 GMT) ನಂತರ ಸಂಭವಿಸಿದ ಘಟನೆಯ ಕುರಿತು ಅಧಿಕಾರಿಗಳು  ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ವೌಕೇಶಾದಲ್ಲಿ ಕ್ರಿಸ್‌ಮಸ್ ಮೆರವಣಿಗೆ ನಡೆಯುತ್ತಿದ್ದಾಗ ಕೆಂಪು ಬಣ್ಣದ ಎಸ್‌ಯುವಿ ಬ್ಯಾರಿಕೇಡ್‌ಗಳನ್ನು ಭೇದಿಸಿ ಪಶ್ಚಿಮಕ್ಕೆ ಮುಖ್ಯ ರಸ್ತೆಯಲ್ಲಿ ಸಾಗಿತು ಎಂದು ಪೊಲೀಸ್ ಮುಖ್ಯಸ್ಥ ಡಾನ್ ಥಾಂಪ್ಸನ್ ಸುದ್ದಿಗಾರರಿಗೆ ತಿಳಿಸಿದರು. ವಾಹನವು 20 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಢಿಕ್ಕಿ ಹೊಡೆದಿದೆ. ಇದರಲ್ಲಿ ಮಕ್ಕಳು ಸೇರಿದಂತೆ ಹಲವರಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು. ಒಟ್ಟು 11 ವಯಸ್ಕರು ಮತ್ತು 12 ಮಕ್ಕಳನ್ನು ಅಲ್ಲಿರುವ 6 ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಗ್ನಿಶಾಮಕ ಮುಖ್ಯಸ್ಥ ಸ್ಟೀವನ್ ಹೊವಾರ್ಡ್ ಸುದ್ದಿಗಾರರಿಗೆ ತಿಳಿಸಿದರು. ವಾಹನ ಹರಿಸಿದ ವ್ಯಕ್ತಿ ಕಸ್ಟಡಿಯಲ್ಲಿದ್ದಾರೆ. ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಥಾಂಪ್ಸನ್ ಹೇಳಿದರು. ಬೇರೆ ಯಾವುದೇ ಬೆದರಿಕೆಗಳಿಲ್ಲ ಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಘಟನೆಯ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಎಸ್‌ಯುವಿಯನ್ನು ತಡೆಯುವ ಪ್ರಯತ್ನದಲ್ಲಿ ಗುಂಡು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶಾಲೆಗಳು ಸೋಮವಾರ ತೆರೆಯುವುದಿಲ್ಲ ಮತ್ತು ರಸ್ತೆಗಳು ಮುಚ್ಚಲ್ಪಡುತ್ತವೆ ತನಿಖೆ ಮುಂದುವರೆದಿದೆ ಎಂದು ಥಾಂಪ್ಸನ್ ಹೇಳಿದರು.

ಮುಗಿಲು ಮುಟ್ಟಿದ ಆಕ್ರಂದನ
ಅಧ್ಯಕ್ಷ ಜೋ ಬಿಡೆನ್ ಅವರು ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದಾರೆ. ಶ್ವೇತಭವನವು “ವೌಕೇಶಾದಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಈ ಭಯಾನಕ ಘಟನೆಯಿಂದ ನೋವು ಅನುಭವಿಸಿದ ಎಲ್ಲರೊಂದಿಗೂ ನಾವಿದ್ದೇವೆ ಎಂದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನಾವು ಅಗತ್ಯವಿರುವಂತೆ ಯಾವುದೇ ಬೆಂಬಲ ಮತ್ತು ಸಹಾಯವನ್ನು ನೀಡಲು ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳನ್ನು ತಲುಪಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.

ಸ್ಥಳೀಯ ಕಾನೂನು ಜಾರಿಯು ಪ್ರಾಥಮಿಕವಾಗಿ ಪ್ರತಿಕ್ರಿಯಿಸುವ ಘಟಕಗಳಾಗಿದ್ದರೂ ಎಫ್ ಬಿಐ ಸಹಾಯವನ್ನು ನೀಡುತ್ತಿದೆ ಎಂದು ಅವರು ಹೇಳಿದರು.

ವಿಸ್ಕಾನ್ಸಿನ್ ರಾಜ್ಯದ ಖಜಾಂಚಿಗಾಗಿ ಸ್ಪರ್ಧಿಸುತ್ತಿರುವ ಏಂಜೆಲಿಟೊ ಟೆನೊರಿಯೊ ಅವರು ಮೆರವಣಿಗೆಯಲ್ಲಿದ್ದರು. ಒಂದು SUV ನುಗ್ಗಿ ಮತ್ತು ಮೆರವಣಿಗೆಯ ಮಾರ್ಗದಲ್ಲಿ ಪೂರ್ಣ ವೇಗದಲ್ಲಿ ಹರಿದಿತ್ತು ಎಂದು ಮಿಲ್ವಾಕೀ ಜರ್ನಲ್ ಸೆಂಟಿನೆಲ್‌ಗೆ ಟೆನೊರಿಯೊ ಹೇಳಿದ್ದಾರೆ. ನಂತರ ದೊಡ್ಡ ಸದ್ದು ಕೇಳಿಸಿತು.ವಾಹನದಿಂದ ಗುದ್ದಿದ ರಭಸಕ್ಕೆ ಜನರ ಆಕ್ರಂದನ ಮುಗಿಲು ಮುಟ್ಟಿತ್ತು ಎಂದು ಅವರು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ಮತ್ತು ದೃಶ್ಯಾವಳಿಗಳ ಪ್ರಕಾರ, ಎಸ್ ಯುವಿ ಶಾಲೆಯ ಮಾರ್ಚ್ ಬ್ಯಾಂಡ್‌ನ ಹಿಂದೆ ಮೆರವಣಿಗೆಯಲ್ಲಿ ಸಾಗಿತು. ನನಗೆ ಕಿರುಚಾಟವಷ್ಟೇ ಕೇಳಿಸಿತು. ನಂತರ ಜನರು ತಮ್ಮ ಮಕ್ಕಳ ಹೆಸರನ್ನು ಕೂಗಿದರು. ನಾನು ಕೇಳಿದ್ದು ಇಷ್ಟೇ ಎಂದು ಮತ್ತೊಬ್ಬ ಸಾಕ್ಷಿ, ಏಂಜೆಲಾ ಒ’ಬಾಯ್ಲ್ ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.

ವಿಸ್ಕಾನ್ಸಿನ್ ಗವರ್ನರ್ ಟೋನಿ ಎವರ್ಸ್ ಅವರು ಮತ್ತು ಅವರ ಪತ್ನಿ “ಈ ರಾತ್ರಿ ವೌಕೇಶಾ ಮತ್ತು ಈ ಪ್ರಜ್ಞಾಶೂನ್ಯ ಕೃತ್ಯದಿಂದ ಬಾಧಿತರಾಗಿರುವ ಎಲ್ಲಾ ಮಕ್ಕಳು, ಕುಟುಂಬಗಳು ಮತ್ತು ಸಮುದಾಯದ ಸದಸ್ಯರಿಗಾಗಿ ಪ್ರಾರ್ಥಿಸುತ್ತಿದ್ದಾರೆ” ಎಂದು ಹೇಳಿದರು.

ರಾಜ್ಯದ ಇಬ್ಬರು ಸೆನೆಟರ್‌ಗಳು ಸೇರಿದಂತೆ ವಿವಿಧ ಶಾಸಕರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ, ಡೆಮೋಕ್ರಾಟ್ ಟಮ್ಮಿ ಬಾಲ್ಡ್ವಿನ್ ಅವರು “ಭಯಾನಕ ಹಿಂಸಾಚಾರ… ಹೃದಯವಿದ್ರಾವಕ” ಎಂದು ಟ್ವೀಟ್ ಮಾಡಿದ್ದಾರೆ. ರಾನ್ ಜಾನ್ಸನ್ ಅವರು “ಗಾಯಗೊಂಡ ಎಲ್ಲರಿಗೂ ಪ್ರಾರ್ಥನೆ” ಮತ್ತು “ಎಲ್ಲಾ ಕಾನೂನು, ವೈದ್ಯಕೀಯ ಸಿಬ್ಬಂದಿ ಮತ್ತು ಸಮುದಾಯದ ಸದಸ್ಯರಿಗೆ ಕೃತಜ್ಞತೆಗಳು ಎಂದಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ಅಮರಾವತಿ ರಾಜಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

TV9 Kannada


Leave a Reply

Your email address will not be published. Required fields are marked *