ಅಮೆರಿಕದಲ್ಲಿ 10,000 ಮಿಂಕ್​ಗಳು ಫಾರ್ಮ್​ಹೌಸ್​ನಿಂದ ಕಾಣೆ – Some 10000 Mink Loose Missing After Vandalism At US Farm


Minks : ಮಾಲೀಕರ ಪ್ರಕಾರ ಸುಮಾರು 25,000ದಿಂದ 40,000 ಮಿಂಕ್​ಗಳನ್ನು ಪಂಜರದಿಂದ ಬಿಡುಗಡೆಗೊಳಿಸಲಾಗಿದೆ. ಈ ಕೃತ್ಯವನ್ನು ಯಾವ ಕಾರಣಕ್ಕಾಗಿ ಯಾರು ಎಸಗಿದ್ದಾರೆ ಎನ್ನುವುದು ತಿಳಿದುಬಂದಿಲ್ಲ

ಅಮೆರಿಕದಲ್ಲಿ 10,000 ಮಿಂಕ್​ಗಳು ಫಾರ್ಮ್​ಹೌಸ್​ನಿಂದ ಕಾಣೆ

Some 10000 Mink Loose Missing After Vandalism At US Farm

Viral : ಸುಮಾರು 10,000 ದಷ್ಟು ಮಿಂಕ್​ಗಳು ಅಮೆರಿಕದ ಓಹಿಯೋ ಫಾರ್ಮ್​ಹೌಸ್​ನಿಂದ ಕಾಣೆಯಾಗಿವೆ. ಈ ಫಾರ್ಮ್​ಹೌಸ್​ನ ಮಾಲೀಕರು ಅಂದಾಜಿಸಿದಂತೆ 25,000 ದಿಂದ 40,000 ಮಿಂಕ್​ಗಳನ್ನು ಅವುಗಳ ಪಂಜರದಿಂದ ಹೊರಬಿಡಲಾಗಿದೆ. ರಸ್ತೆಯನ್ನು ದಾಟುತ್ತಿರುವಾಗ ಸಾಕಷ್ಟು ಮಿಂಕ್​ಗಳು ಅಪಘಾತಕ್ಕೆ ಬಲಿಯಾಗಿವೆ. ಮಂಗಳವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.

ಅಮೆರಿಕದ ವ್ಯಾನ್​ವರ್ಟ್​ ಕೌಂಟಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಕೌಂಟಿಯ ಶೆರಿಫ್ ಥಾಮಸ್​, ‘ಮಾಲೀಕರ ಪ್ರಕಾರ ಸುಮಾರು 25,000ದಿಂದ 40,000 ಮಿಂಕ್​ಗಳನ್ನು ಪಂಜರದಿಂದ ಬಿಡುಗಡೆಗೊಳಿಸಲಾಗಿದೆ. ಈ ಕೃತ್ಯವನ್ನು ಯಾವ ಕಾರಣಕ್ಕಾಗಿ ಯಾರು ಎಸಗಿದ್ದಾರೆ ಎನ್ನುವುದು ತಿಳಿದುಬಂದಿಲ್ಲ’ ಎಂದಿದ್ದಾರೆ.

ಮಿಂಕ್​ಗಳು ಪಂಜರಗಳಿಂದ ಚೆದುರಿ ಹೋಗುತ್ತಿದ್ದಂತೆ ಶೆರಿಫ್ ಕಚೇರಿಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಯಿತು. ಸಣ್ಣಸಣ್ಣ ಸಾಕುಪ್ರಾಣಿಗಳು, ಕೋಳಿಗಳ ಬಗ್ಗೆ ಜಾಗ್ರತೆಯಿಂದ ಇರಲು ಸೂಚಿಸಲಾಯಿತು.

ತನಿಖೆಯ ನಂತರವಷ್ಟೇ ಕಾರಣ ತಿಳಿಯಲಿದೆ. ಆದರೆ ಈ ಹಿಂದೆ ಎನಿಮಲ್​ ಲಿಬರೇಶನ್ ಫ್ರಂಟ್ ಎಂಬ ಸಂಸ್ಥೆಯು ಕೆಲ ವರ್ಷಗಳ ಹಿಂದೆ ಮತ್ತೊಂದು ಫಾರ್ಮ್​ನಲ್ಲಿ ಮಿಂಕ್​ಗಳನ್ನು ಪಂಜರದಿಂದ ತೆರವುಗೊಳಿಸಿತ್ತು. ಆದರೆ ಅವು ಕಡಿಮೆಪ್ರಮಾಣದಲ್ಲಿದ್ದವು.

TV9 Kannada


Leave a Reply

Your email address will not be published.