ಅಮೆರಿಕಾದಲ್ಲಿ ದಾಖಲೆ ಬರೆದ ಬಾಲಯ್ಯ; ‘ಅಖಂಡ’ ಆರ್ಭಟಕ್ಕೆ ಎಲ್ಲಾ ರೆಕಾರ್ಡ್ಸ್​ ಪೀಸ್​​ ಪೀಸ್​​


ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ ಸಿನಿಮಾ ಅಮೇರಿಕಾದಲ್ಲಿ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ. ಇಂದು ಬಾಲಕೃಷ್ಣ ನಟನೆಯ ‘ಅಖಂಡ’ ಸಿನಿಮಾ ತೆಲುಗು ರಾಷ್ಟ್ರಗಳಲ್ಲಿ ಮಾತ್ರ ಅಲ್ಲದೆ, ಹೊರ ದೇಶದಲ್ಲಿಯೂ  ಹವಾ ಜೋರಾಗಿದೆ.

ಈ ಹಿಂದೆ ರಿಲೀಸ್​ ಆಗಿದ್ದ ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್​ ಸಿನಿಮಾ 300k ಅಮೆರಿಕನ್​ ಡಾಲರ್ಸ್ ಕಲೆಕ್ಟ್​ ಮಾಡಿತ್ತು. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ ಸಿನಿಮಾ ರಿಲೀಸ್​ ಶೋ ಗೆ 313k ಅಮೆರಿಕನ್​ ಡಾಲರ್​ ಕಲೆಕ್ಟ್​ ಮಾಡಿತ್ತು. ಈ ಎಲ್ಲಾ ದಾಖಲೆಗಳನ್ನು ಅಖಂಡ ಸಿನಿಮಾ ಒಂದೇ ಶೋಗೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ.

ಮಾಹಿತಿಗಳ ಪ್ರಕಾರ ರಿಲೀಸ್ ಶೋಗೆ ಅಖಂಡ ಸಿನಿಮಾ 325k ಅಮೆರಿಕನ್​ ಡಾಲರ್​ ಸಂಪಾದನೆ ಮಾಡಿದೆ. ಈ ಮೂಲಕ ಅಮೆರಿಕಾದಲ್ಲಿ ಹಿಂದೆಂದೂ ಯಾವ ಸಿನಿಮಾನೂ ಮಾಡದ ಸಾಧನೆ ಮಾಡಿದೆ ಅಖಂಡ ಸಿನಿಮಾ. ಈ ಸಿನಿಮಾಗೆ ಬೋಯಿಪಾಟಿ ಶ್ರೀನು ಆ್ಯಕ್ಷನ್​ ಕಟ್​ ಹೇಳಿದ್ದು, ಬಾಲಯ್ಯ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *