ಸಂಪೂರ್ಣವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಂಡವರು ಮಾಸ್ಕ್​ ಇಲ್ಲದೆಯೇ ಹೊರಗೆ ಸಣ್ಣ ಸಣ್ಣ ಗುಂಪುಗಳ ಜೊತೆಗೆ ಬೆರೆಯಬಹುದು ಎಂದು ಯುಎಸ್​ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್(ರೋಗ ನಿಯಂತ್ರಣ ಕೇಂದ್ರ) ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಸಿಡಿಸಿ.. ಇಂದು ಈ ಹಿಂದಿನ ಸಹಜತೆಯತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದೇವೆ ಎಂದು ಹೇಳುವ ಮೂಲಕ ಮಾಸ್ಕ್ ರಹಿತವಾಗಿ ಜನರ ಜೊತೆ ಬೆರೆಯಲು ಸಂಪೂರ್ಣವಾಗಿ ವ್ಯಾಕ್ಸಿನ್ ತೆಗೆದುಕೊಂಡವರಿಗೆ ಅವಕಾಶ ನೀಡಿದೆ.

ಸಣ್ಣ ಔಟ್​ ಡೋರ್​ ಗುಂಪುಗಳಲ್ಲಿ ಮಾಸ್ಕ್​ ಇಲ್ಲದೆಯೇ ಬೆರೆಯಬಹುದು. ರೆಸ್ಟೋರೆಂಟ್​ಗಳಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳಬಹುದು, ಒಳಾಂಗಣದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳದ ಯಾವುದೇ ವಯಸ್ಸಿನ ವ್ಯಕ್ತಿಯ ಜೊತೆ ಬೆರೆಯಬಹುದು. ಈ ವೇಳೆ ಸೋಷಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡುವ ಅನಿವಾರ್ಯ ಇಲ್ಲ ಎಂದಿದೆ.

The post ಅಮೆರಿಕಾದಲ್ಲಿ ಸಂಪೂರ್ಣ ವ್ಯಾಕ್ಸಿನ್ ಪಡೆದವರಿಗೆ ‘ನೋ ಮಾಸ್ಕ್’​​ ಎಂದ CDC appeared first on News First Kannada.

Source: newsfirstlive.com

Source link