ಬೆಂಗಳೂರು: ಮಂಡ್ಯ ಮೂಲದ ಅಮೆರಿಕಾ ಸರ್ಜನ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ವಿವೇಕ್​ ಮೂರ್ತಿ ಅವರ ತಂದೆ-ತಾಯಿ ಸ್ಥಾಪಿಸಿರುವ ಸ್ಕೋಪ್​​ ಫೌಂಡೇಷನ್ ಅಮೆರಿಕಾದಿಂದ ಮಂಡ್ಯ ಹಾಗೂ ಮಡಿಕೇರಿಗೆ 1.40 ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣ, ಔಷಧಿಗಳ ನೆರವು ನೀಡಿದೆ. ಅಮೆರಿಕಾದಲ್ಲಿದ್ದರೂ ತವರಿನ ಗ್ರಾಮೀಣ ಭಾಗದ ಜನರಿಗೆ ನೆರವು ನೀಡಿರುವ ಕುರಿತು ವಿವೇಕ್​ ಮೂರ್ತಿ ಅವರ ತಂದೆ ಎಲ್​​. ನರಸಿಂಹ ಮೂರ್ತಿ ಅವರು ನ್ಯೂಸ್​​ಫಸ್ಟ್​​ನೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.

2006ರಿಂದ ನಾವು ಸ್ಕೋಪ್​​ ಫೌಂಡೇಷನ್ ಆರಂಭ ಮಾಡಿ ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳ ಶಾಲೆಗಳಿಗೆ ನೆರವು ನೀಡಿದ್ದೇವೆ. ಮಕ್ಕಳಿಗೆ ಕಣ್ಣೀನ ಪೊರೆ ಇದ್ದರೆ ತೆಗೆಯುವುದು, ಅಗತ್ಯವಿರುವವರಿಗೆ ಗ್ಲಾಸ್ ನೆರವು ನೀಡುವ ಕೆಲಸ ಮಾಡುತ್ತಿದ್ದೇವು. ಈಗ ಭಾರತದಲ್ಲಿ ಕೋವಿಡ್​ ಹೆಚ್ಚಾಗಿರುವುದರಿಂದ ಜನರಿಗೆ ಸಹಾಯ ಮಾಡಲು ಇದನ್ನು ಕಳುಹಿಸಿದ್ದೇವೆ.

ದೇಶಕ್ಕಾಗಿ ನಮ್ಮ ಸೇವೆ ಮುಂದುವರೆಯುತ್ತಿದೆ..
ಡಾ.ವಿವೇಕ್​ ಮೂರ್ತಿ ಅವರು ಜನರಲ್​​ ಸರ್ಜನ್​ ಆಗಿರುವುದರಿಂದ ಅವರು ಈ ಯೋಜನೆಯ ಭಾಗವಾಗಿಲ್ಲ, ಅವರು ಇದರಲ್ಲಿ ಭಾಗಿಯಾಗುವ ಅವಕಾಶವಿಲ್ಲ. ಆದ್ದರಿಂದ ನಾವು ನಮ್ಮ ಕುಟುಂಬ, ಸ್ಕೋಪ್​​ ಫೌಂಡೇಷನ್ ಸದಸ್ಯರು, ಅಮೆರಿಕಾ, ಇಂಗ್ಲೆಂಡ್​, ಬ್ರೆಜಿಲ್​, ಮೆಸ್ಕಿಕೋ, ಭಾರತದಲ್ಲಿರುವ ಸಂಸ್ಥೆಯ ಸ್ವಯಂ ಸೇವಕರಿಂದ ಇಷ್ಟು ನೆರವು ನೀಡಿದ್ದೇವೆ. ನಮ್ಮ ಶಕ್ತಿ ಮತ್ತಷ್ಟು ಹೆಚ್ಚಾದರೆ ಮುಂದೇ ನಮ್ಮ ಸೇವೆ ಮುಂದುವರಿಯುತ್ತದೆ ಎಂದರು.

ಕೊರೊನಾ ವಿರುದ್ಧವೇ ಹೋರಾಟ ಮಾಡುವುದೇ ನಮ್ಮ ಮೊದಲ ಆದ್ಯತೆ. ಅಮೆರಿಕಾದಲ್ಲಿ ಈಗ ಕೊರೊನಾ ಸೋಂಕು ಕಡಿಮೆಯಾಗಿದೆ. ಈಗ ಮಾಸ್ಕ್​ ಹಾಕಿಕೊಳ್ಳುವುದನ್ನು ತೆಗೆದಿದ್ದಾರೆ. ಶೇ.50 ರಷ್ಟು ವ್ಯಾಕ್ಸಿನೆಷನ್​ ಆಗಿದೆ. ಭಾರತದಲ್ಲೂ ಇದನ್ನೂ ಮಾಡಬೇಕು. ಮೊದಲು ವ್ಯಾಕ್ಸಿನ್​ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದ ಜನರು ಈಗ ಮುಂದೇ ಬಂದು ಲಸಿಕೆ ಪಡೆಯುತ್ತಿದ್ದಾರೆ. ಇದು ಖುಷಿ ವಿಚಾರ. ಅದ್ದೂರಿ ಸಮಾರಂಭ, ಕಾರ್ಯಕ್ರಮಗಳನ್ನ ಕಡಿಮೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕರೆನೀಡಿದರು.

ಕೊಡಗಿಗೆ ನೆರವು ಜೂನ್​ 4ಕ್ಕೆ ತಲುಪುತ್ತದೆ…
ಮಡಿಕೇರಿಗೂ ನೆರವು ಕಳುಹಿಸಿದ್ದೇವೆ. ವಕೀಲ, ಡಾ. ಚಂದ್ರಮೌಳಿ ಅವರ ನೆರವಿನಿಂದ ಅಲ್ಲಿಗೂ ನೆರವು ತಲುಪಿಸಲು ಮುಂದಾಗಿದ್ದು, ಜೂನ್​ 4 ರಂದು ಶಿಪ್​ ಭಾರತಕ್ಕೆ ತಲುಪಲಿದೆ. ದೇಶದ ಮೆಟ್ರೋ ಪಾಲಿಟಿನ್​ ಸಿಟಿಗಳಿಗೆ ಬೇರೆ ಬೇರೆ ದೇಶಗಳಿಂದ ಬರುವ ನೆರವು ಬೇಗ ಸಿಗುತ್ತೆ. ಆದರೆ ತಾಲೂಕು ಆಸ್ಪತ್ರೆಗಳಿಗೆ ನೆರವು ಸಿಗಲ್ಲ. ಆದ್ದರಿಂದಲೇ ಮೊದಲು ಗ್ರಾಮೀಣ ಪ್ರದೇಶಕ್ಕೆ ಕಳುಹಿಸಿದ್ದೇ. ನಾನು ಹಲವು ಮಡಿಕೇರಿ, ಮಂಡ್ಯದ ಹಲವು ವೈದ್ಯರೊಂದಿಗೆ ಮಾತನಾಡಿದ್ದೇವೆ. ಆಗ ನನಗೆ ದುಃಖ ಆಯ್ತು ಅಲ್ಲಿ ವೈದ್ಯರಿಗೆ ಸರಿಯಾದ ನೆರವು ಇಲ್ಲ. ರೋಗಿಗಳಿಗೆ ಅಗತ್ಯವಿರುವ ಔಷಧಿ ಕೂಡ ಸಿಗುತ್ತಿಲ್ಲ. ಆದ್ದರಿಂದ 10 ತಾಲೂಕು ಆಸ್ಪತ್ರೆ ಸೇರಿದಂತೆ 2 ಮುಖ್ಯ ಆಸ್ಪತ್ರೆಗಳಿಗೆ ನೆರವು ತಲುಪಿಸಿದ್ದೇವೆ ಎಂದರು.

The post ಅಮೆರಿಕಾದ ಡಾ.ವಿವೇಕ್ ಮೂರ್ತಿ ನೆರವು; ತವರು ಪ್ರೇಮದ ಬಗ್ಗೆ ಅವರ ತಂದೆ ಹೇಳಿದ್ದೇನು ಗೊತ್ತಾ? appeared first on News First Kannada.

Source: newsfirstlive.com

Source link