ವಾಷಿಂಗ್ಟನ್: ಕೊರೊನಾ ಸಂಕಷ್ಟ ಕಾಲದಲ್ಲಿ ಹಲವು ದೇಶಗಳು ಭಾರತದ ನೆರವಿಗೆ ಬಂದಿವೆ. ಅದೇ ರೀತಿ ಅಮೆರಿಕಾ ಕೂಡ, ನಮ್ಮ ಕಷ್ಟಕ್ಕೆ ಭಾರತ ಸಹಾಯ ಮಾಡಿತ್ತು, ಈಗ ನಾವು ಮಾಡ್ತೀವಿ ಅಂತ ಸಹಾಯಕ್ಕೆ ನಿಂತಿದೆ. ಕಳೆದ ರಾತ್ರಿ(ಭಾರತದ ಕಾಲಮಾನ) ಅಮೆರಿಕಾದಿಂದ  ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನ ಹೊತ್ತು ಹೊರಟಿದ್ದ ಏರ್ಫೋರ್ಸ್​ನ 2 ಬೃಹತ್ ವಿಮಾನಗಳು ಭಾರತಕ್ಕೆ ಬಂದಿಳಿದಿವೆ.

C-5M Super Galaxy ಮತ್ತು C-17 Globemaster III ಎಂಬ ಬೃಹತ್ ವಿಮಾನಗಳ ಮೂಲಕ ಆಕ್ಸಿಜನ್ ಸಿಲಿಂಡರ್ಸ್, ರೆಗ್ಯುಲೇಟರ್ಸ್, ಎನ್95 ಮಾಸ್ಕ್ಸ್, ಱಪಿಡ್ ಡಯೊಗ್ನಸ್ಟಿಕ್ ಕಿಟ್ಸ್, ಪಲ್ಸ್ ಆಕ್ಸಿ ಮೀಟರ್ ಮುಂತಾದ ಅತ್ಯಾವಶ್ಯಕ ವೈದ್ಯಕೀಯ ಸಾಮಗ್ರಿಯನ್ನ ಭಾರತಕ್ಕೆ ಕಳಿಸಲಾಗಿದೆ. ಈ ಬಗ್ಗೆ ಅಮೆರಿಕಾ ರಕ್ಷಣಾ ಸಚಿವ ಲಾಯ್ಡ್ ಜೆ ಆಸ್ಟಿನ್-3 ನಿನ್ನೆ ಟ್ವೀಟ್ ಮಾಡಿ ಮಾಹಿತಿ  ನೀಡಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ ವ್ಯಾಕ್ಸಿನ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುವನ್ನೂ ಅಮೆರಿಕಾ ಕಳಿಸಿದೆ.
ಭಾರತದ ಸಹಾಯಕ್ಕಾಗಿ ಕಚ್ಚಾ ವಸ್ತುವನ್ನೂ ಕಳಿಸುತ್ತಿರುವ ಬಗ್ಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಮಾಹಿತಿ ನೀಡಿದ್ದರು.

ಇಂದು ಬೆಳಗ್ಗೆ ದೆಹಲಿಗೆ ಎರಡು ವಿಮಾನಗಳು ಆಗಮಿಸಿವೆ. ಮುಂದಿನ ಕೆಲ ವಾರಗಳಲ್ಲಿ ಅಮೆರಿಕಾದಿಂದ ಮತ್ತಷ್ಟು ವಿಮಾನಗಳು ನೆರವು ಸಾಮಗ್ರಿಗಳನ್ನ ಹೊತ್ತು ತರಲಿವೆ ಎಂದು ವರದಿಯಾಗಿದೆ.

ನ್ಯೂಸ್​ಫಸ್ಟ್​ ಕಳಕಳಿ: ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ಅಮೆರಿಕಾದ ಬೃಹತ್ ವಿಮಾನದಲ್ಲಿ ಭಾರತಕ್ಕೆ ಬಂದಿಳಿದ ಆಕ್ಸಿಜನ್ ಸಿಲಿಂಡರ್ಸ್, N95 ಮಾಸ್ಕ್ಸ್ ಮುಂತಾದ ಸಾಮಗ್ರಿ appeared first on News First Kannada.

Source: newsfirstlive.com

Source link