ಸ್ವ-ಸಹಾಯ ಗುಂಪಿನ ಹೆಸರಲ್ಲಿ ಹಲವಾರು ಯುವತಿಯರನ್ನ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಅಪರಾಧಕ್ಕೆ ಫೇಮಸ್ ಹಾಲಿವುಡ್ ನಟಿಯೊಬ್ಬಳು ಜೈಲು ಸೇರಿದ್ದಾಳೆ. ಆ್ಯಲಿಸನ್ ಮ್ಯಾಕ್, ಈ ಕೃತ್ಯವೆಸಗಿರೋ ಅಪರಾಧಿ.

38 ವರ್ಷದ ಆ್ಯಲಿಸನ್ ಮ್ಯಾಕ್, ಸ್ಮಾಲ್​​ವಿಲ್ ಎಂಬ ಸೀರೀಸ್​ ಮೂಲಕ ಫೇಮಸ್​ ಆಗಿದ್ದ ನಟಿ. ಈಕೆ Nxivm ಎಂಬ ‘ಸೆಲ್ಫ್​​ ಎಂಪವರ್​ಮೆಂಟ್​ ಗ್ರೂಪ್’​​​ಗೆ ಸೇರಿದ್ದಳು. ಇದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಕ್ರೂರ ಪಂಥವಾಗಿದ್ದು, ಅಮೆರಿಕಾದ ಹಲವಾರು ಶ್ರೀಮಂತರು ಇದರ ಸದಸ್ಯರಾಗಿದ್ದರು ಎನ್ನಲಾಗಿದೆ. ಆ್ಯಲಿಸನ್​ ಮ್ಯಾಕ್ ತಾನು ಈ ಗುಂಪಿಗೆ ಸೇರಿದ್ದಲ್ಲದೆ ಇತರೆ ಯುವತಿಯರನ್ನ ಯಾಮಾರಿಸಿ, ಈ ಗುಂಪಿಗೆ ಸೇರ್ಪಡೆ ಮಾಡಿ ಅವರನ್ನ ಸೆಕ್ಸ್​ ಸ್ಲೇವ್​​ಗಳಾಗಿ ಮಾಡಿದ್ದಳು ಎನ್ನಲಾಗಿದೆ. ಈ ಆರೋಪ ಸಾಬೀತಾದ ಹಿನ್ನೆಲೆ ಮ್ಯಾಕ್​ಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.ಅಂದ್ಹಾಗೆ ಈ Nxivm ಕಲ್ಟ್​​/ಪಂಥದ ಸಂಸ್ಥಾಪಕ 60 ವರ್ಷದ ಕೀತ್​ ರೇನಿಯರ್. ಈ ಹಿಂದೆ ದಲೈ ಲಾಮಾ ಈತನ ಸಮಾಜಸೇವೆ ಕಾರ್ಯಗಳನ್ನ ಶ್ಲಾಘಿಸಿದ್ದರು. ಆದ್ರೆ 2019ರಲ್ಲಿ ಕೀತ್ ವಿರುದ್ಧ ಮಹಿಳೆಯರ ಕಳ್ಳಸಾಗಣೆ, ಚೈಲ್ಡ್​ ಪಾರ್ನೋಗ್ರಫಿ ಮತ್ತು ದರೋಡೆ ಆರೋಪ ಸಾಬೀತಾಗಿತ್ತು.  ಕೀತ್, ಸ್ವ-ಸಹಾಯ ಗುಂಪಿನ ಹೆಸರಲ್ಲಿ ಸದಸ್ಯರನ್ನು ನೇಮಕ ಮಾಡಿಕೊಂಡು ಸೆಕ್ಸ್​ ಕಲ್ಟ್​ ನಡೆಸುತ್ತಿದ್ದ ಎನ್ನಲಾಗಿದೆ. ಮೊದಲಿಗೆ ಸ್ವಸಹಾಯದ ಹೆಸರಲ್ಲಿ ಜನರನ್ನ ಕಲ್ಟ್​ಗೆ ಸೆಳೆಯಲಾಗುತ್ತಿತ್ತು. ಜೀವನದಲ್ಲಿ ಯಶಸ್ಸು ಕಾಣಲು, ಕೋಪ-ಆತಂಕಗಳನ್ನ ದೂರ ಮಾಡಲು ಕೋರ್ಸ್​ಗೆ ಸೇರುವಂತೆ ಮಾರ್ಕೆಟಿಂಗ್ ಮಾಡಲಾಗುತ್ತಿತ್ತು. ಈ ಕೋರ್ಸ್​ನ ಬೆಲೆ ಕೂಡ ದುಬಾರಿ. 5 ದಿನಗಳ ಕೋರ್ಸ್​ಗೆ ಬರೋಬ್ಬರಿ 5 ಸಾವಿರ ಡಾಲರ್ಸ್​(ಸುಮಾರು 3.7 ಲಕ್ಷ ರೂಪಾಯಿ) ಕೊಟ್ಟು ಸೇರಬೇಕಿತ್ತು.

ನಟಿ ಆ್ಯಲಿಸನ್ ಮ್ಯಾಕ್ ಸೇರಿದಂತೆ ಹಲವಾರು ಯುವತಿಯರನ್ನ ಕಲ್ಟ್​ಗೆ ಸೇರ್ಪಡೆ ಮಾಡಿಕೊಂಡು, ಅವರು ತನ್ನ ಪ್ರತಿಯೊಂದು ನಿಯಮವನ್ನು ಅನುಸರಿಸುವಂತೆ ಮಾಡಿದ್ದ ಕೀತ್. ಈತ ತನ್ನ ಲೈಂಗಿಕ ಚಟಗಳನ್ನ ತೀರಿಸಿಕೊಳ್ಳಲು ಮಹಿಳೆಯರಿಗೆ ಮತ್ತಷ್ಟು ಜನರನ್ನ ಗುಂಪಿಗೆ ಸೇರಿಸುವಂತೆಯೂ ಮಂಕುಬೂದಿ ಎರಚಿದ್ದನಂತೆ. 1998ರಿಂದ 2018ರವರೆಗೆ ಸುಮಾರು 20 ವರ್ಷಗಳ ಕಾಲ ಈ ಪಂಥ ರಹಸ್ಯವಾಗಿ ಕಾರ್ಯನಿರ್ವಹಿಸಿತ್ತು. ಕಾಲ ಕ್ರಮೇಣ ಸಂತ್ರಸ್ತೆಯರು ಈತನ ಕಿರುಕುಳದ ಬಗ್ಗೆ ಬಾಯಿಬಿಡಲು ಶುರು ಮಾಡಿದ್ದರು. ಬಲವಂತದಿಂದ ಅವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತಿದ್ದರು ಅಂತ ಯುವತಿಯರು ಹೇಳಿದ್ದಾರೆ. ಅಲ್ಲದೆ ಅವರೆಲ್ಲಾ ಈತನ ಕಲ್ಟ್​ನಲ್ಲಿ ಇದ್ದಾಗ ಕೀತ್​​ನ ಇನಿಶಿಯಲ್​ಗಳನ್ನ ತಮ್ಮ ಮೈ ಮೇಲೆ ಮುದ್ರೆ ಹಾಕಲಾಗಿತ್ತು ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ಆತ ಹೇಳಿದಂತೆ ಕೇಳದಿದ್ದರೆ ಊಟ ಕೊಡದೆ ಹಿಂಸೆ ನೀಡಲಾಗ್ತಿತ್ತು, ಸುಲಿಗೆ ಮಾಡಿ ಚಿತ್ರಹಿಂಸೆ ನೀಡಲಾಗ್ತಿತ್ತು ಎನ್ನಲಾಗಿದೆ.

ವಿಚಾರಣೆಯ ಸಮಯದಲ್ಲಿ 15 ಸಂತ್ರಸ್ತೆಯರು ತಾವು ಅನುಭವಿಸಿದ ಭೀಕರ ಹಿಂಸೆಯನ್ನ ನ್ಯಾಯಾಧೀಶರ ಮುಂದೆ ವಿವರಿಸಿದ್ದರು. ಅಕ್ಟೋಬರ್ 2020ರಲ್ಲಿ, ರನಿಯೆರ್​ನ ಅಪರಾಧಗಳಿಗಾಗಿ ಆತನಿಗೆ 120 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದ್ರೆ ವಿಚಾರಣೆ ವೇಳೆ ಕೀತ್​, ಮಹಿಳೆಯರು ಒಮ್ಮತದಿಂದಲೇ ನನ್ನೊಂದಿಗೆ ಹಾಗೂ ಇತರರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು ಎಂದು ವಾದಿಸಿದ್ದ. ಅಲ್ಲದೆ ನನ್ನ ಹಾಗೂ ಮಹಿಳೆಯೊಬ್ಬಳ ನಡುವಿನ ಖಾಸಗಿ ಚಾಟ್​ ಹಾಗೂ ಖಾಸಗಿ ಫೋಟೋವನ್ನ ಕೋರ್ಟ್​ನಲ್ಲಿ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಿ ಜಡ್ಜ್​ ತಮ್ಮ ವಿವೇಚನೆಯನ್ನ ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿ 120 ವರ್ಷಗಳ ಶಿಕ್ಷೆಯನ್ನ ರದ್ದು ಮಾಡಬೇಕು, ಹೊಸದಾಗಿ ವಿಚಾರಣೆಯಾಗಬೇಕು ಎಂದು ಕೀತ್ ಪರ ವಕೀಲರು ವಾದ ಮಂಡಿಸಿದ್ದರು ಎಂದು ವರದಿಯಾಗಿದೆ. ಪ್ರಾಸಿಕ್ಯೂಟರ್​ಗಳು ಇದಕ್ಕೆ ಆಕ್ಷೇಪಣೆ ಸಲ್ಲಿಸೋದು ಬಾಕಿ ಇದೆ.

The post ಅಮೆರಿಕಾದ ಭಯಾಯನಕ ಸೆಕ್ಸ್ ಸ್ಲೇವ್ ಸಂಸ್ಕೃತಿ; ಜೈಲು ಸೇರಿದ್ಯಾಕೆ ಗೊತ್ತಾ ಖ್ಯಾತ ನಟಿ? appeared first on News First Kannada.

Source: newsfirstlive.com

Source link