ಎಂದಿನಂತೆಯೇ ಈ ವರ್ಷವೂ ಜುಲೈ 4ನೇ ತಾರೀಕಿನಂದು ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರನ್ನು ನೆನೆಯುತ್ತಿದೆ ಅಮೆರಿಕಾ. ಇಂದು ಯುನೈಟೆಡ್ ಸ್ಟೇಟ್ಸ್(ಯುಎಸ್) ಸ್ಥಾಪನೆಯಾದ 245ನೇ ವಾರ್ಷಿಕೋತ್ಸವ. ಹೀಗಾಗಿ ಈ ದಿನಾಚರಣೆ ಸಂಭ್ರಮಿಸುವ ಮೂಲಕ ಅಮೆರಿಕಾ ತನ್ನ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಣೆ ಮಾಡುತ್ತಿದೆ. ಇಂತಹ ಮಹತ್ವದ ದಿನದಂದು ಭಾರತ ಪ್ರಧಾನಿ ನರೇಂದ್ರ ಮೋದಿಯವರು, ಅಮೆರಿಕನ್ನರಿಗೆ ಶುಭಾಶಯ ತಿಳಿಸಿದ್ದಾರೆ.

ಎಲ್ಲರಿಗೂ 245ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಶುಭಾಶಯಗಳು. ಮೊದಲಿನಿಂದಲೂ ಅಮೆರಿಕಾದೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಈ ಎರಡೂ ದೇಶಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿವೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಉತ್ತಮ ಅವಕಾಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​​ ಮಾಡಿದ್ದಾರೆ.

ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ತನ್ನದೇ ಆದ ಮಹತ್ವವದ ದಿನಗಳಿರುತ್ತವೆ. ಚಾರಿತ್ರಿಕ, ಸಾಂಸ್ಕೃತಿಕ, ಧಾರ್ಮಿಕ ಮಹತ್ವದ ಆಧಾರದ ಮೇಲೆ ಕೆಲವು ದಿನಗಳನ್ನು ನೆನೆಯಲಾಗುತ್ತದೆ. ಈ ಮಹತ್ವದ ದಿನವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲಾಗುವುದು ಸರ್ವೇಸಾಮಾನ್ಯ. ಇಂತಹ ದಿನಗಳ ಪೈಕಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಜುಲೈ 4 ಮಾತ್ರ ಪ್ರಮುಖ ದಿನವಾಗಿದೆ.

The post ಅಮೆರಿಕಾ ಸ್ವತಂತ್ರವಾಗಿ ಇಂದಿಗೆ 245 ವರ್ಷ; ಬೈಡನ್​ಗೆ ಶುಭಾಶಯ ಕೋರಿದ ಮೋದಿ appeared first on News First Kannada.

Source: newsfirstlive.com

Source link