ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕೀವ್​​ಗೆ ತೆರಳಲಿದ್ದಾರಾ?- ಪ್ರಶ್ನೆಗೆ ಉತ್ತರ ನೀಡಿದ ಶ್ವೇತ ಭವನ | US President Joe Biden has no plans to visit Ukraine Amid War


ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕೀವ್​​ಗೆ ತೆರಳಲಿದ್ದಾರಾ?- ಪ್ರಶ್ನೆಗೆ  ಉತ್ತರ ನೀಡಿದ ಶ್ವೇತ ಭವನ

ಜೋ ಬೈಡನ್​

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಉಕ್ರೇನ್​​ ರಾಜಧಾನಿ ಕೀವ್​ಗೆ ಭೇಟಿ ಕೊಡುವ ಬಗ್ಗೆ ಯೋಚಿಸಿಲ್ಲ. ಸದ್ಯ ಅಲ್ಲಿಗೆ ಹೋಗುವುದಿಲ್ಲ ಎಂದು ಶ್ವೇತಭವನ ಸೋಮವಾರ ತಿಳಿಸಿದೆ. ರಷ್ಯಾ ಸಾರಿರುವ ಯುದ್ಧದಿಂದ ಉಕ್ರೇನ್​ ಪರಿಸ್ಥಿತಿ ಹದಗೆಟ್ಟಿದೆ. ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಯುಎಸ್​ ಸಹಾಯವನ್ನು ಪದೇಪದೆ ಕೇಳುತ್ತಿದ್ದಾರೆ. ಅಲ್ಲದೆ, ಯುಎಸ್​ ನೇತೃತ್ವದ ನ್ಯಾಟೋ ನಮ್ಮನ್ನು ಕೈಬಿಟ್ಟಿದೆ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಬೈಡನ್​ ಕೀವ್​ಗೆ ಹೋಗಲಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಸದ್ಯಕ್ಕಂತೂ ಅಂಥ ಭೇಟಿ ಇಲ್ಲ ಎಂದು ಅಧಿಕೃತಗೊಳಿಸಲಾಗಿದೆ.

TV9 Kannada


Leave a Reply

Your email address will not be published.